ಒಂದು ಹುಡುಗಿಎಂಟು ಕಣ್ಣುಗಳು
‘ಅಧ್ಯಕ್ಷ’ ಸಿನಿಮಾದಲ್ಲಿ ಶರಣ್-ಚಿಕ್ಕಣ್ಣ ಸಾರಥ್ಯದ ‘ಚಿ-ತು.ಸಂಘ’ ಇರುತ್ತದೆ.ಈಗ ಹೊಸಬರೇ ಸೇರಿಕೊಂಡುಇದೇ ಹೆಸರಿನಲ್ಲಿಚಿತ್ರವನ್ನು ಸದ್ದಿಲ್ಲದೆ ಮುಗಿಸಿ, ಸುದ್ದಿ ಮಾಡುವ ಸಲುವಾಗಿ ಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಚಿಂತೆಇಲ್ಲದತುಂಡುಹೈಕ್ಳ ಶೀರ್ಷಿಕೆಗೆ ಅರ್ಥಕೊಡುತ್ತದೆ. ನಾಲ್ಕು ಜಡ ಹುಡುಗರು ಹುಡುಗಿಯನ್ನುಕ್ಯಾಚ್ ಹಾಕಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಮುಂದೆಅದರಿಂದ ಏನೇನು ಪರಿಣಾಮಗಳು ಅಗುತ್ತವೆಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ.ಇದಕ್ಕೆ ಪೂರಕವಾಗಿ ಸುಳ್ಳೆ ನಮ್ಮನೇದೇವ್ರುಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಹತ್ತು ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಸಂವೇದನೆ ಪಡೆದುಕೊಂಡಿರುವತುಮಕೂರಿನಚೇತನ್‌ಕುಮಾರ್‌ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಗೆಳಯರುಗಳಾಗಿ ಸುರೇಶ್‌ಗೌಡ, ಸುಪ್ರಿಯಾದವ್, ರಾಘವ್, ಉಳಿದಂತೆ ಬಬಿತಾ, ರತ್ನಚಂದನಾ, ಸತೀಶ್‌ಗೌಡ, ಪೃಥ್ವಿ ಮುಂತಾದವರು ನಟಿಸಿದ್ದಾರೆ.
ಗಯ್ಯಾಳಿ, ಯಾವಾಗಲೂ ನಾಯಕನನ್ನು ಬಯ್ಯುತ್ತಾ ಪ್ರೀತಿಸುವ ಪಾತ್ರದಲ್ಲಿಕನಕಪುರದರೂಪ ನಾಯಕಿ.ನಾಲ್ಕು ಹಾಡುಗಳಿಗೆ ರವಿ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣರಣಧೀರನಾಯಕ್, ಸಂಕಲನ ಸುರೇಶ್‌ನಾವಳ್ಳಿ-ಚೇತನ್ ತಂಡದಲ್ಲಿಇದ್ದಾರೆ. ಬಳ್ಳಾರಿ, ತುಮಕೂರು, ಶಿವಗಂಗೆ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾನೂನು ಮತ್ತು ಸಂಸದೀಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಪ್ರಸಕ್ತಚಿತ್ರರಂಗವುರಕ್ಷಣೆಯಲ್ಲಿಇಲ್ಲ. ಸಮಸ್ಯೆಉಂಟಾಗಿದೆ.ಏನಾದ್ರು ಮಾಡದೇ ಹೋದರೆ ಭವಿಷ್ಯದಲ್ಲಿ ಚಿತ್ರಗಳು ನಿಷೇದ ಆಗುವ ಸಾದ್ಯತೆಇದೆ.ಕಮರ್ಷಿಯಲ್ ಚಿತ್ರಗಳನ್ನು ಮಾಲ್‌ಗಳಲ್ಲಿ ನಿಲ್ಲಿಸಿವುದು ಕಷ್ಟದ ಕೆಲಸ. ಗೆಳಯ ಬೆಂಗಳೂರು ಮಂದಿಗೆ ಹಣ ನೀಡಲು ನಿರ್ಮಾಣ ಮಾಡಿದ್ದಾರೆ.ಸಿನಿಮಾ ಎಂಬ ಜೂಜಿನಲ್ಲಿ ಇಳಿದಿದ್ದಾರೆ. ಬಂದವರೆಲ್ಲ ನಷ್ಟಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗದು. ನಮ್ಮ ಹಳ್ಳಿಯಲ್ಲಿ ಪ್ರಯೋಗಅಂತ ಪ್ರಶಸ್ತಿ ಚಿತ್ರಗಳನ್ನು ಪ್ರದರ್ಶನಕ್ಕೆಇಡಲಾಗಿತ್ತು.ಜನರು ಬಾರದೆಟಿವಿಗೆಅಂಟಿಕೊಂಡಿದ್ದಾರೆ. ಸಿನಿಮಾ,ನಾಟಕ, ಕಲೆ ನಮ್ಮ ಭಾಷೆಯ ಸಂಸ್ಕ್ರತಿಯನ್ನುಎತ್ತಿ ಹಿಡಿದಿದೆ. ಈ ಮೂರು ಶ್ರೀಮಂತವಾದಾಗ ಮಾತ್ರರಾಜ್ಯ ಸುಭೀಕ್ಷವಾಗುತ್ತದೆ.ಚಿತ್ರವು ಯಶಸ್ವಿಯಾಗಲೆಂದು ಹರಸಿದರು.
ನಂದಿಹಳ್ಳಿಯ ಶಿವಣ್ಣ, ನಿರ್ದೇಶಕರತಂದೆ ಜಿ.ಕೆ.ಲಕ್ಷೀಕಾಂತಯ್ಯ ಮತ್ತು ಹೊಳೆನರಸಿಪುರದ ಪಾರ್ವತಿಜಂಟಿಯಾಗಿ ನಿರ್ಮಾಣ ಮಾಡಿರುವಚಿತ್ರವು ಸದ್ಯ ಸೆನ್ಸಾರ್ ಅಂಗಳಕ್ಕೆ ಹೋಗಲು ಸಿದ್ದತೆ ಮಾಡಿಕೊಂಡಿದೆ.