ಕಾದಂಬರಿಆಧಾರಿತಚಿತ್ರ ಸಾರಾ ವಜ್ರ
ಗ್ಯಾಪ್ ನಂತರಕಾದಂಬರಿಯೊಂದು ‘ಸಾರಾ ವಜ್ರ’ ಚಿತ್ರವಾಗಿ ಮೂಡಿ ಬರುತ್ತಿದೆ.ಲೇಖಕಿ ಸಾರಾಅಬೂಬಕ್ಕರ್ ಮೊದಲು ಸಿನಿಮಾ ಮಾಡಲುಒಪ್ಪಿಗೆ ನೀಡಿರಲಿಲ್ಲ. ನಂತರ ನಿಮ್ಮಕಾದಂಬರಿಯಕಥೆಗೆಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆಂದು ನಿರ್ದೇಶಕಿಆರ‍್ನಾ ಸಾಧ್ಯ ಭರವಸೆ ನೀಡಿದತರುವಾಯಒಪ್ಪಿಕೊಂಡರಂತೆ. ಸಿನಿಮಾವು ೧೯೮೯ರಿಂದ ಪ್ರಸ್ತುತಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ.ತ್ರಿವಳಿ ತಲಾಖ್‌ನ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟಗಳು ಇದರಲ್ಲಿ ಸನ್ನಿವೇಶಗಳಾಗಿ ಮೂಡಿಬಂದಿದೆ.ತಾಯ್ತ್ತನದ ಸುಖ ಅನುಭವಿಸಿದ ನಂತರಅನುಪ್ರಭಾಕರ್ ಬ್ಯಾರಿ ಸಮಾಜದ ಹೆಣ್ಣು ಮಗಳಾಗಿ ೨೦ ವಯಸ್ಸಿನಿಂದ ೬೦ ವರ್ಷದ ಹೆಂಗಸಾಗಿ ಕಾಣಿಸಿಕೊಂಡಿದ್ದಾರೆ. ಇವರ ದುರಳ ಪತ್ನಿಯಾಗಿರೆಹಮಾನ್. ತಾರಗಣದಲ್ಲಿ ಸುಧಾಬೆಳವಾಡಿ, ರಮೇಶ್‌ಭಟ್, ಸುಹಾನಸೈಯದ್,ಪುನೀತ್‌ಕನ್ನಡದಎನ್‌ಟಿಆರ್, ಮಾಸ್ಟರ್‌ಆಯುಷ್ ಮುಂತಾದವರು ನಟಿಸಿದ್ದಾರೆ.
ಸಂಪೂರ್ಣಚಿತ್ರೀಕರಣ ಮಂಗಳೂರು ಕಡೆಗಳಲ್ಲಿ ನಡೆಸಲಾಗಿದೆ.ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದಐದು ಹಾಡುಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ.ಚಿತ್ರಕತೆ-ಸಂಭಾಷಣೆ ನರೇಂದ್ರಬಾಬು, ಛಾಯಾಗ್ರಹಣ ಪರಮೇಶ್.ಸಿ.ಎಂ, ನೃತ್ಯ ಮದನ್-ಹರಿಣಿ, ಸಂಕಲನ ಅಕ್ಷಯ್.ಪಿ.ರಾವ್‌ಅವರದಾಗಿದೆ. ಸಂಭ್ರಮಡ್ರೀಮ್ ಹೌಸ್ ಮತ್ತುಎಂ.ದೇವೇಂದ್ರರೆಡ್ಡಿಜಂಟಿಯಾಗಿನಿರ್ಮಾಣ ಮಾಡಿರುವಚಿತ್ರವು ಸದ್ಯ ಹಿನ್ನಲೆ ಶಬ್ದದಲ್ಲಿತೊಡಗಿಕೊಂಡಿದೆ.