Gharga.Film Song and Poster Rel.

Thursday, February 20, 2020

724

ಪದ, ಅರ್ಥವಿಲ್ಲದ  ಶೀರ್ಷಿಕೆ

ಯಾವುದೇಚಿತ್ರದ ಶೀರ್ಷಿಕೆಗೆ ಅರ್ಥಕೊಡುತ್ತದೆ, ಇಲ್ಲವೇಕತೆಗೆ ಪೂರಕವಾಗಿರುತ್ತದೆ.ಆದರೆ ‘ಘಾರ್ಗಾ’ ಸಿನಿಮಾದ ಹೆಸರು ನಿಘಂಟುದಲ್ಲಿ ಸಿಗುವುದಿಲ್ಲ. ಇದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕುಎಂದು ರಚಿಸಿ, ನಿರ್ದೇಶನ ಮಾಡಿರುವ ಎಂ.ಶಶಿಧರ್ ಸಮರ್ಥನೆಕೊಡುತ್ತಾರೆ. ಪೋಸ್ಟರ್‌ಅನಾವರಣ ಸಂದರ್ಭದಲ್ಲಿಅವರು ಮಾತನಾಡುತ್ತಾಕತೆ ಸಿದ್ದಪಡಿಸಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೂರು ಅಂಶಗಳನ್ನು ಸರಿಪಡಿಸಿಕೊಂಡು ಬರಲು ಸೂಚನೆ ನೀಡಿದರು.ಅದರಂತೆ ಬದಲಾವಣೆ ಮಾಡಿಕೊಂಡು ಹೋದಾಗ ನಿರ್ಮಾಣ ಮಾಡಲುಒಪ್ಪಿಕೊಂಡಂತೆ ಬಿಡುಗಡೆ ಹಂತದವರೆಗೂ ಬಂದಿದೆ.ದೃಶ್ಯಗಳುಚೆನ್ನಾಗಿ ಬರಲೆಂದುಎಲ್ಲಿಯೂರಾಜಿಯಾಗಿಲ್ಲ. ಸಾಹಸಗಳಿಗೆ ಐದು ಕ್ಯಾಮಾರಗಳನ್ನು ಬಳಸಲಾಗಿದೆ. ದಾಂಡೇಲಿ, ಚಿಕ್ಕಮಗಳೂರು, ಬೆಂಗಳೂರು ಮತ್ತು ಬಾಂಬೆಯಲ್ಲಿಚಿತ್ರೀಕರಣ ನಡೆಸಲಾಗಿದೆಎಂದರು.

‘ಜೋಗಿ’ ನಿರ್ಮಾಪಕ ಅಶ್ವಿನಿ ರೆಕಾರ್ಡಿಂಗ್‌ಕಂಪೆನಿಯರೂವಾರಿ ಅಶ್ವಿನಿ ರಾಮ್‌ಪ್ರಸಾದ್ ಈಗ ತಮ್ಮ ಪುತ್ರನನ್ನು ನಾಯಕನಾಗಿಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಇದರಕುರಿತಂತೆ ಮಾತನಾಡುವ ನಿರ್ಮಾಪಕರುಕಂಟೆಂಟ್,ಕ್ಲಾಲಿಟಿಚೆನ್ನಾಗಿದ್ದರೆಖಂಡಿತಚಿತ್ರಮಂದಿರಕ್ಕೆ ಬರುತ್ತಾರೆ. ಹಾಗಾಗಿ ಹೊಸ ವಿಷಯ, ವಿಭಿನ್ನ ನಿರೂಪಣೆಯೊಂದಿಗೆಚಿತ್ರ ಮಾಡಿದ್ದೇವೆ. ನನಗೆ ಪ್ರೋತ್ಸಾಹ ನೀಡಿದಂತೆ  ಮಗನಿಗೂ ಚಿತ್ರರಂಗದಲ್ಲಿ ಬೆಳೆಯಲು ಮಾದ್ಯಮದ ಸಹಕಾರಬೇಕುಎಂದರು. ನಾಯಕಅರುಣ್‌ರಾಮ್‌ಪ್ರಸಾದ್‌ಬಣ್ಣ ಹಚ್ಚುವ ಮುನ್ನ ನೀನಾಸಂದಲ್ಲಿರಂಗತರಭೇತಿ, ಕಲರಿಪಟುಕಲಿತುಕೊಂಡುಕ್ಯಾಮಾರ ಮುಂದೆ ನಿಂತಿದ್ದಾರೆ.ಬೆಂಗಳೂರು ಚೆಲುವೆ ರಾಘವಿ ನಾಯಕಿ.ಮತ್ತೋಂದು ಮುಖ್ಯ ಪಾತ್ರದಲ್ಲಿ ಮಗಧೀರಖ್ಯಾತಿಯದೇವ್‌ಗಿಲ್ ನಟನೆಇದೆ.ಕಾರ್ಯಕ್ರಮದಲ್ಲಿ ಮೂವರು ಖುಷಿ ಹಂಚಿಕೊಂಡರು.ತಾರಗಣದಲ್ಲಿ ಸಾಯಿಕುಮಾರ್, ಅರುಣ್‌ಸಾಗರ್, ರಾಹುಲ್‌ದೇವ್, ರಾಘವೇಂದ್ರಸರವಣ, ಅವಿನಾಶ್‌ರೈ ಮುಂತಾದವರು ನಟಿಸಿದ್ದಾರೆ. ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದಐದು ಹಾಡುಗಳಿಗೆ ಗುರುಕಿರಣ್ ಸಂಗೀತ, ಗುರುಪ್ರಸಾದ್‌ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ. ವಸಿಷ್ಟಸಿಂಹ, ಎ.ಪಿ.ಅರ್ಜುನ್, ಲಹರಿ ಸಂಸ್ಥೆಯ ಮನೋಹರ್‌ನಾಯ್ಡು, ಸೇರಿದಂತೆ ಸಿನಿಪಂಡಿತರುತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,