ಗೋರಿ ಬೇರೆನೇಐತಿ
ಪ್ರತಿಭೆಎನ್ನುವುದುಎಲ್ಲಿ ಬೇಕಾದರೂಅಡಗಿರುತ್ತದೆಎಂಬುದಕ್ಕೆ ಸಾಕ್ಷಿ ‘ಗೋರಿ’ ಚಿತ್ರ . ಪ್ರೀತಿಯ ಸಮಾಧಿಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ಬಹುತೇಕತಂಡವುಉತ್ತರಕರ್ನಾಟಕದವರೇಆಗಿರುವುದು ವಿಶೇಷ. ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಕಿರಣ್‌ಹಾವೇರಿ ಅಂಶಕಾಲಿಕ ಸಮಯದಲ್ಲಿನಾಯಕನಾಗಿ ನಟಿಸಿದ್ದಾರೆ, ಹಾಗೂ ಎಂ.ಹೆಚ್.ಜಗ್ಗೀನ್‌ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದಕುರಿತಾದಕತೆಯಲ್ಲಿಜಾತಿ ಮತ್ತುಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ.ಮೂರು ವ್ಯಕ್ತಿಗಳು ಒಂದೇಕತೆಯನ್ನು ಹೇಳುತ್ತಾರೆ.ಪ್ರತಿಯೊಂದುಗೋರಿಯಲ್ಲಿಒಂದೊಂದುಗಾಥೆಇರುತ್ತದೆ.ಆ ಗೋರಿಗಳಲ್ಲಿ ಒಂದುಕತೆಯು ಪಾತ್ರಗಳ ಮುಖಾಂತರ ತೆರೆದುಕೊಳ್ಳುತ್ತಾ ಹೋಗುತ್ತದೆ. ಆ ಒಂದುಗೋರಿಯಾರು, ಏತಕ್ಕಾಗಿ ಹೀಗಾಯಿತುಎಂಬುದನ್ನುಚಿತ್ರಮಂದಿರದಲ್ಲಿ ತಿಳಿದುಕೊಳ್ಳಬೇಕೆಂದು ನಿರ್ದೇಶಕ ಗೋಪಾಲಕೃಷ್ಣ ಟೀಸರ್,ಹಾಡುಅನಾವರಣ ಸಂದರ್ಭದಲ್ಲಿ ಮಾದ್ಯಮದವರನ್ನುಅವಲತ್ತು ಮಾಡಿಕೊಂಡರು.
ಕಾಲೇಜು ಹುಡುಗಿಯಾಗಿ ಸ್ಮಿತಾ ನಾಯಕಿ.ಐಟಂ ಹಾಡಿಗೆ ಹೆಜ್ಜೆ ಹಾಕಿರುವುದು ಶ್ರಿಯಾಅಂಜುಶ್ರೀ.ನಾಲ್ಕು ಹಾಡುಗಳಿಗೆ ವಿನುಮನಸು ಸಂಗೀತವಿದೆ. ಈ ಪೈಕಿ ಚುಟುಚುಟುಗೀತೆಗೆ ಸಾಹಿತ್ಯ ರಚಿಸಿರುವ ಶಿವುಬರ್ಗಿ, ರವೀಂದ್ರಸೊರಗಾವಿ ಕಂಠದಲ್ಲಿ ‘ಬೇರೆನೇಐತಿ’ ಹಾಡನ್ನು ಮಾದ್ಯಮದವರಿಗೆತೋರಿಸಲಾಯಿತು. ಸದರಿಗೀತೆಯನ್ನುಚಿತ್ರೀಕರಣ ನಡೆಸಿ, ಅದು ಸಮಧಾನಕರವಾಗಿಲ್ಲವೆಂದು ಮತ್ತೋಮ್ಮೆ ಬಾಲು ನೃತ್ಯ ಸಂಯೋಜನೆಯೊಂದಿಗೆಅಗಡಿತೋಟದಲ್ಲಿಎರಡು ದಿನಗಳ ಕಾಲ ಸೆರೆಹಿಡಿಯಲಾಗಿದೆ.ಛಾಯಾಗ್ರಹಣ ಮಂಜುನಾಥಹೆಗಡೆ, ಸಂಕಲನ ಸತೀಶ್‌ಚಂದ್ರಯ್ಯ, ಸಾಹಸ ಅಲ್ಟಿಮೇಟ್‌ಶಿವು ಅವರದಾಗಿದೆ. ಪರಮೇಶ್ವರಪ್ಪಪೂಜಾರ್ ಹೊಳಲು, ಪ್ರಕಾಶ್‌ಜವಳಿ ಅವರೊಂದಿಗೆ ಸ್ನೇಹಿತರು ಸೇರಿಕೊಂಡುಹಾವೇರಿಟಾಕೀಸ್ ಮುಖಾಂತರನಿರ್ಮಾಣ ಮಾಡಿರುವುದುಪ್ರಥಮ ಪ್ರಯತ್ನ.ಚಿತ್ರವು ಸದ್ಯಡಿಟಿಎಸ್ ಹಂತದಲ್ಲಿಇರಲಿದ್ದು, ಮುಂದಿನ ದಿನಗಳಲ್ಲಿ ಸೆನ್ಸಾರ್‌ಗೆ ಹೋಗಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.