ತೆರೆಗೆ ಸಿದ್ದ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು
ಕಲಾತ್ಮಕಚಿತ್ರ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಕತೆಯಲ್ಲಿ ನಾಯಕಿ ವಿಧುವೆ. ನಾಯಕ ಪತ್ರಕರ್ತನಾಗಿದ್ದು ಪುರಾತನದಇತಿಹಾಸದ ವರದಿ ಸಿದ್ದಪಡಿಸಲು ಊರಿಗೆ ಹೋಗುತ್ತಾನೆ. ಅಲ್ಲಿ ಪ್ರೀತಿಸುತ್ತಿದ್ದ, ಗೆಳಯನ ಹೆಂಡತಿ ವಿಧುವೆಯಾಗಿರುತ್ತಳೆ. ಮುಂದೆ ಆಕೆಗೆ ಹೊಸಬಾಳು ಕೊಡುತ್ತಾನಾಎಂಬುದು ಸಿನಿಮಾದ ತಿರುಳು. ವೃತ್ತಿಯಲ್ಲಿ ವಕೀಲರಾಗಿರುವ ನಂದೀಶ್ ನಾಯಕ, ಸಂಹಿತಾ ನಾಯಕಿಯಾಗಿನಾಲ್ಕನೇ ಚಿತ್ರ, ವಿಧುವೆಯ ವಿಧ ವಿಧವಾದ ವೇದನೆಕುರಿತಂತೆ ಹಾಡುಗಳಿಗೆ ಸಾಹಿತ್ಯ ರಚಿಸಿ ಸಂಗೀತ ಒದಗಿಸಿರುವುದು ಕಾರ್ತಿಕ್‌ವೆಂಕಟೇಶ್. ಮೂರು ಹಾಡುಗಳ ಪೈಕಿ ಒಂದುಗೀತೆಯನ್ನು ಪಿ.ಅಶ್ವಥ್‌ಗೆಅರ್ಪಿಸಲಾಗಿದೆಯಂತೆ.ಆಗುಂಬೆ, ಮಂಗಳೂರು ಭಾಗದಲ್ಲಿಚಿತ್ರೀಕರಣ ನಡೆಸಲಾಗಿದೆ.
ಕಳೆದ ಸಾರಿ ಬಂಜೆಕುರಿತಾದಚಿತ್ರವನ್ನು ನೀಡಿದ್ದಅಶೋಕ್.ಕೆ.ಕಡಬ ಈ ಬಾರಿ ಮತ್ತೋಂದು ಮಹಿಳಾ ಪ್ರಧಾನ ಸಿನಿಮಾಕ್ಕೆ ೯೦ರ ಕಾಲಘಟ್ಟದಕತೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳಿದ್ದಾರೆ. ಉಡುಪಿಯರಂಗಭೂಮಿಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ.ನೆಲಮಂಗಲದಹನುಮಂತರಾಜು.ಬಿ. ನಿರ್ಮಾಣ ಮಾಡಿರುವ ಸಿನಿಮಾವು ಶುಕ್ರ ಫಿಲಿಂಸ್ ಮುಖಾಂತರಇದೇ ಶುಕ್ರವಾರದಂದು ಸುಮಾರು ನಲವತ್ತು ಕೇಂದ್ರಗಳಲ್ಲಿ ತೆರೆಕಾಣುತ್ತಿದೆ.