ನಾಲ್ವರಚದುರಂಗದ ಆಟ
‘ಪಾರು ಐ ಲವ್ ಯು’ ನಿರ್ಮಾಣಜೊತೆಗೆ ನಾಯಕನಾಗಿದ್ದರಂಜನ್‌ಹಾಸನ್, ಈ ಬಾರಿಕುತೂಹಲದ ‘ದಚೆಕ್‌ಮೇಟ್’ ಸಿನಿಮಾಕ್ಕೆ ಎಂದಿನಂತೆಎರಡುಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕತೆಯಲ್ಲಿ ನಾಲ್ಕು ಸ್ನೇಹಿತರು ಬ್ರೇಕ್‌ಪ್ ಪಾರ್ಟಿ ಮಾಡಲುದೂರದ ಸ್ಥಳಕ್ಕೆ ಹೋಗುತ್ತಾರೆ.ಅಲ್ಲಿತಮ್ಮ ಭಗ್ನಪ್ರೇಮದ ಪ್ರಸಂಗಗಳನ್ನು ವಿನೋದದರೀತಿಯಲ್ಲಿ ಹಂಚಿಕೊಳ್ಳುತ್ತಾರೆ.ಇದರ ನಡುವೆಅವರಿಗೆ ವಿಚಿತ್ರ ಅನುಭವಗಳು ಒದಗಿಬಂದು, ಮತ್ತೋಂದು ಕಷ್ಟಕ್ಕೆ ಸಿಲುಕಿಸುತ್ತದೆ. ಆಗ ಅಲ್ಲಿಆಡುವಚದುರಂಗದ ಆಟ, ಅದರ ಫಲಿತಾಂಶಆಧಾರದ ಮೇಲೆ ದೊರೆಯುವ ಲಾಭ,ನಷ್ಟ ಇವರ ನಡುವಿನ ಸ್ನೇಹ ಸ್ವಾರ್ಥವಾಗಿ ಬೆಳಯುತ್ತದೆ. ಇದೆಲ್ಲವುಒಂದು ಬಲೆಯಂತೆಕಂಡರೆ, ಅದನ್ನು ಭೇದಿಸಿ ಹೊರಬರುವ ಪ್ರಯತ್ನವೇ ಸಿನಿಮಾದ ಸಾರಾಂಶವಾಗಿದೆ.ಸಂಪೂರ್ಣಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದು, ಬಹುಪಾಲು ದೃಶ್ಯಗಳು ರಾತ್ರಿಯಲ್ಲಿ ಮೂಡಿಬಂದಿದೆ.
ಇಂಜಿನಿಯರ್ ಭಾರತೀಶವಸಿಷ್ಟ ಮತ್ತುಡಿಪ್ಲೋಮೋ ಮುಗಿಸಿರುವ ಸಂತೋಷಚಿಪ್ಪಾಡಿಜಂಟಿಯಾಗಿಆಕ್ಷನ್‌ಕಟ್ ಹೇಳಿದ್ದಾರೆ.ಮೂವರು ಸ್ನೇಹಿತರುಗಳಾಗಿ ವಿಜಯ್‌ಚೆಂಡೂರ್, ವಿಶ್ವವಿಜೇತ ಮತ್ತುರಾಜಶೇಖರ್.ಮೂಗಿಯಾಗಿ ಪ್ರೀತುಪೂಜಾ ನಾಯಕಿ.ಇನ್ಸ್‌ಪೆಕ್ಟರ್ ಆಗಿ ಸರ್ದಾರ್‌ಸತ್ಯ ಉಳಿದಂತೆ ಅಮೃತನಾಯರ್, ಸ್ತುತಿ, ವಿಸ್ಮ್ಮಯ, ಕಾರ್ತಿಕ್‌ಹುಲಿ, ಸುದೀರ್‌ಕಾಕ್ರೋಚ್, ಪ್ರದೀಪ್‌ಪೂಜಾರಿ, ಚಿಲ್ಲರ್‌ಮಂಜ ನಟಿಸಿದ್ದಾರೆ. ಭಾರತೀಶವಸಿಷ್ಟ ಸಾಹಿತ್ಯದಒಂದುಗೀತೆಗೆಶಶಾಂಕ್‌ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಸತೀಶ್‌ರಾಜೇಂದ್ರನ್, ಸಂಕಲನ ಈ.ಎಸ್.ಈಶ್ವರ್-ಸುನಿಲ್‌ಕಶ್ಯಪ್, ಸಾಹಸ ವೈಲೆಂಟ್‌ವೇಲುಅವರದಾಗಿದೆ. ಜಗದ್‌ಜ್ಯೋತಿ ಮೂವಿ ಮೇಕರ‍್ಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರವು ಸದ್ಯ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು, ಮಾರ್ಚ್‌ದಲ್ಲಿ ಬಿಡುಗಡೆಯಾಗುವ ಸಂಭವವಿದೆ.