ನಾಯಕ ನಿರ್ದೇಶಕನಾದಗಾಥೆ
ನವಿರಾದ ಪ್ರೀತಿಕತೆಯ ‘ನಿನ್ನ ಸನಿಹಕೆ’ ಚಿತ್ರಕ್ಕೆ ಸುಮನ್‌ಜಾದೂಗರ್ ನಿರ್ದೇಶಕರಾಗಿಆಯ್ಕೆಯಾಗಿದ್ದರು. ಒಂದು ಹಂತದಚಿತ್ರೀಕರಣ ನಂತರ ನಿರ್ದೇಶಕರಿಗೆಅಪಘಾತವಾಗಿಐದು ವಾರ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಸಿನಿಮಾ ಕೆಲಸ ನಿಲ್ಲುವುದು ಬೇಡವೆಂದು ನಿರ್ಮಾಪಕರು ಯೋಚಿಸಿ ನಿರ್ದೇಶನದಜವಬ್ದಾರಿಯನ್ನುಕತೆ,ಚಿತ್ರಕತೆ ಬರೆದಿರುವ ನಾಯಕ ಸೂರಜ್‌ಗೌಡಅವರಿಗೆ ವಹಿಸಿದ್ದಾರೆ. ಐದು ಚಿತ್ರಗಳಲ್ಲಿ ನಟಿಸಿ, ಪರದೆ ಹಿಂದಿನ ಕೆಲಸವನ್ನುಕಲಿತುಕೊಂಡಿದ್ದ ಪರಿಣಾಮಇದನ್ನು ಸುಲಭವಾಗಿ ನಿಭಾಯಿಸಿದ್ದಾರೆ.ಹೆಸರೇ ಹೇಳುವಂತೆ ಇಬ್ಬರುಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣಇರಲಿದೆ. ಪ್ರಸಕ್ತಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿಆಗಿರುತ್ತದೆ. ಇವರುಗಳ ಖುಷಿ, ನೋವು, ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಇದರಲ್ಲಿ ಸಿಲಿಕಾನ್ ಸಿಟಿಯು ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ. ಸಂಪೂರ್ಣಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.
ಆಗ ತಾನೆಕಾಲೇಜು ಮುಗಿಸಿ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವ ಸೂರಜ್‌ಗೌಡಪಾತ್ರದಸಲುವಾಗಿ ಸುಮಾರುಎಂಟುಕೆ.ಜಿ. ತೂಕಕಡಿಮೆ ಮಾಡಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್ ಮೊಮ್ಮಗಳು ಧನ್ಯರಾಮ್‌ಕುಮಾರ್ ನಾಯಕಿಯಾಗಿ ಪರಿಚಯವಾಗಿದ್ದಾರೆ.ತಾರಾಗಣದಲ್ಲಿ ಮಂಜುನಾಥ್‌ಹೆಗ್ಡೆ, ಅರುಣಾಬಾಲರಾಜ್, ಕರಿಸುಬ್ಬು, ಚಿತ್ಕಲಾಬಿರಾದರ್,ರಜನಿಕಾಂತ್,ಸೌಮ್ಯಭಟ್‌ಮುಂತಾದವರುನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಾಗಗಳನ್ನು ಹೊಸೆಯುತ್ತಿರುವರಘುದೀಕ್ಷಿತ್‌ಗೆಇದಕ್ಕಿಂತ ಹಿನ್ನಲೆ ಸಂಗೀತದಲ್ಲಿ ಸ್ಕೋಪ್‌ಇರುವಕಾರಣ ಕೆಲಸ ಮಾಡಲುಉತ್ಸುಕರಾಗಿದ್ದಾರೆ.
ಛಾಯಾಗ್ರಹಣ ಅಭಿಲಾಷ್‌ಕಳತ್ತಿ, ಸಂಕಲನ ಸುರೇಶ್‌ಆರ್ಮುಗಂ, ಕಲೆ ವರದರಾಜ್‌ಕಾಮತ್, ಸಂಭಾಷಣೆಗೆ ಪ್ರವೀಣ್‌ಕುಮಾರ್.ಜೆ. ಪದಗಳನ್ನು ಪೋಣಿಸಿದ್ದಾರೆ. ಮೈಸೂರಿನ ಗೆಳೆಯರಾಗಿರುವ ಅಕ್ಷಯ್‌ರಾಜಶೇಖರ್ ಮತ್ತುರಂಗನಾಥ್‌ಕುಡ್ಲಿಸಿನಿಮಾ ಕೃಷಿಗೆ ಬಂಡವಾಳ ಹೂಡಿರುವುದು ಹೊಸ ಅನುಭವ. ಪ್ರಚಾರದಎರಡನೇ ಹಂತವಾಗಿ ಶುರುವಾದಗಿನಿಂದಕೊನೆವರೆಗಿನ ಮೇಕಿಂಗ್ ವಿಡಿಯೋವನ್ನು ಮಾದ್ಯಮದವರಿಗೆತೋರಿಸಲಾಯಿತು. ಸದ್ಯದಲ್ಲೆ ಹಾಡುಗಳ ಲೋಕಾರ್ಪಣೆ, ಏಪ್ರಿಲ್‌ನಲ್ಲಿಜನರಿಗೆತೋರಿಸಲುತಂಡವುಯೋಜನೆ ರೂಪಿಸಿಕೊಂಡಿದೆ.