Asura Samhara.Film Press Meet.

Monday, February 24, 2020

810

ನೈಜಘಟನೆಯಚಿತ್ರ

ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದುಇಡೀದೇಶವೇ ತಲ್ಲಣಿಸಿತ್ತು.ಇದರಿಂದ ಸ್ಪೂರ್ತಿ ಪಡೆದುಕೊಂಡು ಶಿವಾರ್ಪಣಮಸ್ತು ಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಇವರಕುರಿತು ಹೇಳುವುದಾದರೆ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಹತ್ತು ವರ್ಷಗಳಲ್ಲಿ ಹಲವು ವಿಭಾಗಳಲ್ಲಿ ಕೆಲಸ ಮಾಡಿ, ಮುಂದೆಅಂಜಲಿ, ವಾರಸ್ದಾರಧಾರವಾಹಿಗೆಆಕ್ಷನ್‌ಕಟ್ ಹೇಳಿದ್ದಾರೆ. ಜನಕ್ಕೆ ಮನರಂಜನೆಜೊತೆಗೆಏನಾದರೂತೂಕಇರುವಚಿತ್ರ ಮಾಡಬೇಕೆಂದು ಯೋಚಿಸಿದ್ದೇ ಇಂದು ಸಿನಿಮಾವು ಹುಟ್ಟಿಕೊಂಡಿದೆಯಂತೆ.  ಅಪರಾಧಿಗಳು ಕೇಸ್‌ನಿಂದ ತಪ್ಪಿಸಿಕೊಳ್ಳಬಹುದು.ಆದರೆಇದರಲ್ಲಿ ನೀಡುವ ಶಿಕ್ಷೆಯು ಕಾನೂನಿನಲ್ಲಿ ಹೊಸದಾಗಿರುತ್ತದೆ.ಅದು ಏನು ಎಂಬುದನ್ನುತಂಡವುಕುತೂಹಲ ಕಾಯ್ದರಿಸಿದೆ.ಯಾವುದೇ ದುರಳ ವ್ಯಕ್ತಿಯುಇಂತಹಅಪರಾಧ ಮಾಡುವಮುನ್ನಒಮ್ಮೆ ಶಿಕ್ಷೆಯನ್ನು ನೆನಸಿಕೊಂಡರೆ, 

ಹಿಂಜರಿಯುವುದುಖಚಿತವಂತೆ.ಒಂದು ಹೆಣ್ಣು ಸಮಾಜದಲ್ಲಿತಾಯಿ, ಅಕ್ಕ, ತಂಗಿ, ಮಗಳಾಗಿ ಕಾಣಿಸಿಕೊಳ್ಳುತ್ತಾರೆ.ಅಂತಹುದರಲ್ಲಿ ಒಬ್ಬಳೆ ಸಿಕ್ಕಾಗ ಭೋಗದ ವಸ್ತು ಎಂದುತೀರ್ಮಾನಿಸುವುದು ಸರಿಯಲ್ಲಎಂದು ಹೇಳಲಾಗಿದೆ.

ಹಾಸನ, ಚೆನ್ನರಾಯಪಟ್ಟಣ, ಆನೇಕಲ್, ಬೆಂಗಳೂರು ಮತ್ತು ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಫ್ಯಾಬ್ರಿಕೇಶನ್‌ಉದ್ಯಮ ನಡೆಸುತ್ತಿರುವ ಹರ್ಷಅರಸು ಫೋಟೋಗ್ರಾಫರ್ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡು, ಹರಿಪ್ರಸಾದ್ ಹೆಸರಿನೊಂದಿಗೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಹರ್ಷಲಹನಿ ನಾಯಕಿ. ತಂಗಿಯಾಗಿ ದೀಕ್ಷಾಶೆಟ್ಟಿ, ಹೆಣ್ಣುಮಗಳನ್ನು ಕಳೆದುಕೊಂಡು ನ್ಯಾಯಕ್ಕಾಗಿ ಹೋರಾಡುವಧರ್ಮ,  ಖಳನಟರುಗಳಾಗಿ ಶಿವಬಾಲಾಜಿ,ವಿನಯ್ ನಗಿಸಲು ರವಿಚಂದ್ರ ಮುಂತಾದವರು ಬಣ್ಣ ಹಚ್ಚಿದ್ದಾರೆ.  ಸಂತೋಷ್‌ನಾಯ್ಕ್ ಮತ್ತು ಸಂಗೀತ ನಿರ್ದೇಶಕಲೋಕಿ ಸಾಹಿತ್ಯದಒಟ್ಟುಎರಡು ಹಾಡುಗಳಿಗೆ ಮೆಹಬೂಬ್‌ಸಾಬ್, ಮಾನಸಹೊಳ್ಳ, ಸಂತೋಷ್‌ವೆಂಕಿಧ್ವನಿಯಾಗಿದ್ದಾರೆ.  ಛಾಯಾಗ್ರಹಣ  ಪ್ರವೀಣ್‌ಶೆಟ್ಟಿ, ಸಂಕಲನ ವಿನಯ್‌ಕುಮಾರ್‌ಕೂರ್ಗ್, ಸಾಹಸ ಡಿಫರೆಂಟ್‌ಡ್ಯಾನಿ, ಗೀತೆಗೆ ಕುಣಿಸಿರುವುದು  ಸ್ಟಾರ್‌ಗಿರಿ. ಶುಕ್ರವಾರದಂದುರಾಜ್ಯಾದ್ಯಂತ ಸಿನಿಮಾವುತೆರೆಕಾಣುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,