Turtu Nirgamana.Movie Teaser Launch.

Monday, February 24, 2020

305

ಸಾವು  ಬದುಕಿನ  ಹೋರಾಟ

ವಿಮಾನ, ಮಾಲ್‌ಗಳು, ಬಸ್ ಇನ್ನು ಮುಂತಾದ ಸ್ಥಳಗಳಲ್ಲಿ ‘ತುರ್ತು ನಿರ್ಗಮನ’ವೆಂದು ಫಲಕವನ್ನು ಹಾಕಲಾಗಿರುತ್ತದೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಿದ್ದಗೊಂಡಿದೆ. ನಮ್ಮಜೀವನದಲ್ಲಿ ಹಿಂದೆ,ಮುಂದೆ ಬಾಗಿಲುಗಳು ಇರುತ್ತದೆ. ಅದೇ ಶೀರ್ಷಿಕೆ ಇದ್ದರೆ ಏನಾಗಬಹುದುಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.ಕಥಾನಾಯಕಜಡಗುಣವಿರುವ ವಿಕ್ರಮ್‌ಜನನ ಮತ್ತು ಮರಣದ ಸುತ್ತ ನಡೆಯಲಿದೆ.ಅವನು ಸಾವಿಗೆ ಶರಣಾದಾಗ ಮತ್ತೆ ಮೂರು ದಿವಸಗಳ ಕಾಲ ಜೀವಿಸುವ ಅವಕಾಶ ಸಿಗುತ್ತದೆ.ಈ ಸಂದಿಗ್ದ ಪರಿಸ್ಥಿತಿಯಲ್ಲಿ ಏನು ಮಾಡಬಹುದು?ಏನನ್ನು ಕಳೆದುಕೊಳ್ಳುತ್ತಾನೆ, ಪಡೆದುಕೊಳ್ಳುತ್ತಾನೆ. ಇದು ಸರಿ,ತಪ್ಪು, ಮಾನವನಡ್ರಾಮಾಜೊತೆಗೆಫ್ಯಾಂಟಸಿ ಅಂಶಗಳು ಇರಲಿದೆ. ಸಂಪೂರ್ಣಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ಗೋದಿಬಣ್ಣ ಸಾಧಾರಣ ಮೈಕಟ್ಟುಚಿತ್ರಕ್ಕೆ ಸಹಾಯಕನಾಗಿದ್ದಎಲ್.ಹೇಮಂತ್‌ಕುಮಾರ್‌ಕತೆ, ನಿರ್ದೇಶನ ಮತ್ತು ನಿರ್ಮಾಣದಲ್ಲಿ ಪಾಲುದಾರರು.

ಪಾತ್ರದ ಸಲುವಾಗಿ ನಾಲ್ಕು ಕೆ.ಜಿ.ತೂಕ ಹೆಚ್ಚಿಸಿಕೊಂಡಿರುವ ನಾಯಕ ಸುನಿಲ್‌ರಾವ್ ಬಣ್ಣಿಸಿದ ರೀತಿ ಹೀಗಿತ್ತು. ಎಲ್ಲರಜೀವನದಕಾಲಘಟ್ಟದಲ್ಲಿಇಂತವುಬಂದು ಹೋಗಿರುತ್ತದೆ.ಎಲ್ಲಾಅಂತ ಹೇಳದೆ ಇದ್ದರೂ, ಕೆಲವರ ಬದುಕಿನಲ್ಲಿ ಬಂದಿರುತ್ತದೆ.ಯಾವುದೋ ಹಂತದಲ್ಲಿಇದು ಸದ್ಯಕ್ಕೆ ಬೇಡ ಅನ್ನಿಸಿರಬಹುದು.ಕೆಲವರು ಹೇಳಿಕೊಳ್ಳುತ್ತಾರೆ, ಹೇಳಿಕೊಳ್ಳದೆ ಇರಬಹುದು.ಇಂತಹದನ್ನು ಹಂಚಿಕೊಳ್ಳದ ಸೋಮಾರಿ ವಿಕ್ರಮ್ ಆಗಿ, ಇಷ್ಟ ಬಂದಾಗ ಏಳುವುದು,ಆರಾಮಾಗಿ ಮಲಗಿಕೊಂಡಿರುವುದು.ಸಿನಿಮಾಗೆ ಹೋಗುವುದು.ಚಿಕ್ಕಮಕ್ಕಳೊಂದಿಗೆ ಕ್ರಿಕೆಟ್‌ಆಡುವುದು.ಇಷ್ಟೇ ಜೀವನಅಂದುಕೊಂಡಿರುತ್ತಾನೆ. ಇಂಥಒಂದು ಸಮಯದಲ್ಲಿಕಾಲದ ಬಗ್ಗೆ ಬೆಲೆಯಇಲ್ಲದ ಹುಡುಗನ ಲೈಫ್‌ದಲ್ಲಿಥಟ್ಟನೆಘಟನೆಯೊಂದು ನಡೆಯುತ್ತದೆ.ಅದರಿಂದ ಸಮಯದಅರಿವು ತಿಳಿಯುತ್ತದೆ.ಆಗ ಎರಡನೇ ಅವಕಾಶ ಸಿಕ್ಕಾಗ ಏನು ಮಾಡುತ್ತಾನೆಂಬುದನ್ನುತೋರಿಸಲಾಗಿದೆಎಂದರು.

ನಾಯಕಿಯರ ಪೈಕಿ ಹಿತಾಚಂದ್ರಶೇಖರ್ ಅನುಪಸ್ಥಿತಿಯಲ್ಲಿ, ಸಂಯುಕ್ತಹೆಗ್ಗಡೆ ಹಾಜರಿದ್ದು ನಗುಮುಖದವಳಾಗಿದ್ದು, ಮಕ್ಕಳಿಗೆ ಕ್ರಿಕೆಟ್‌ಕೋಚ್‌ಆಗಿರುತ್ತನೆಂದು ಪರಿಚಯಿಸಿಕೊಂಡರು.ಕ್ಯಾಬ್ ಚಾಲಕನಾಗಿ ರಾಜ್.ಬಿ.ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನರ್ಸ್ ಆಗಿ ಸುಧಾರಾಣಿ, ವಾರ್ಡನ್ ಆಗಿ ಅಚ್ಯುತಕುಮಾರ್‌ಇವರೊಂದಿಗೆಅಮೃತರಾಮಮೂರ್ತಿ, ನಾಗೇಂದ್ರಷಾ, ಅರುಣ್‌ಬಾಲ್‌ರಾಜ್ ಮುಂತಾದವರ ನಟನೆಇದೆ.ಆರು ಹಾಡುಗಳಿಗೆ ಡಾಸ್‌ಮೋಡ್ ಸಂಗೀತವಿದೆ. ಈ ಪೈಕಿ ಕ್ವಾಯರ್ ಮಾದರಿಯಲ್ಲಿಗೀತೆಇರಲಿದೆ. ಛಾಯಾಗ್ರಹಣ ಪ್ರಯಾಗ್‌ಮುಕುಂದನ್, ಸಂಕಲನ ಬಿ.ಅಜಿತ್‌ಕುಮಾರ್‌ಅವರದಾಗಿದೆ. ಭರತ್‌ಕುಮಾರ್ ಬಂಡವಾಳ ಹೂಡಿದ್ದು, ಶರತ್‌ಭಗವಾನ್ ಸಹ ನಿರ್ಮಾಪಕ ಹಾಗೂ ಒಂದುಗೀತೆಗೆ ಸಾಹಿತ್ಯ ರಚಿಸಿದ್ದಾರೆ.ಅಂದುಕೊಂಡಂತೆಆದರೆಚಿತ್ರವು ಮಾರ್ಚ್‌ದಲ್ಲಿ ಬಿಡುUಡೆಯಾಗುವ ಸಾದ್ಯತೆಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,