ವಿಂಗ್ಕಮಾಂಡರ್ ಆಗಿ ದರ್ಶನ್
ದುಯೋರ್ಧನಾಗಿ ಮಿಂಚಿದ್ದದರ್ಶನ್ ಮುಂದಿನ ಚಿತ್ರದಲ್ಲಿ ವಿಂಗ್‌ಕಮಾಂಡರ್ ಆಗಿ ನಟಿಸುತ್ತಾರೆಂದು ‘ಮುನಿರತ್ನಕುರುಕ್ಷೇತ್ರ’ ಚಿತ್ರದ ನಿರ್ಮಾಪಕ ಮುನಿರತ್ನ ನೂರನೇ ದಿನದಕಾರ್ಯಕ್ರಮದಲ್ಲಿಘೋಷಣೆ ಮಾಡಿದರು. ಅವರು ಮಾತನಾಡುತ್ತಾದರ್ಶನ್ ಪೌರಾಣಿಕ,ಸಾಮಾಜಿಕ ಸೇರಿದಂತೆಎಲ್ಲಾತರಹದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರೊಳಗೊಬ್ಬ ಸೈನಿಕನಾಗಿ ನೋಡಬೇಕೆಂಬ ಬಯಕೆಇದೆ.ಕಳೆದ ವರ್ಷ ಪುಲ್ವಾಮ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ವೇಳೆ ನೆರೆಯದೇಶಕ್ಕೆ ತೆರಳಿ ಸೆರೆ ಸಿಕ್ಕ ಬಳಿಕ ಭಾರತಕ್ಕೆ ಮರಳಿದ ಧೀರ ಸೈನಿಕ ಅಭಿನಂದನ್ ಪಾತ್ರಕ್ಕೆಬಣ್ಣ ಹಚ್ಚಲಿದ್ದಾರೆ.ಇದುಅವರಜೀವನಾಧಾರಿತವೋಅಲ್ಲ ಪ್ರೇರಣೆಯಿಂದ ನಿರ್ಮಿಸುತ್ತಿರುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.ಇದರಲ್ಲಿಅದೇ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಮಾಹಿತಿ ನೀಡಿದರು.ಇದೇ ವೇಳೆ ಒಂದುಘಂಟೆಗೂ ಹೆಚ್ಚು ಕಾಲ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಮುಖ್ಯ ಮಂತ್ರಿಯಡಿಯೂರಪ್ಪನವರನ್ನು ಹೊಗಳಿದರು.
ನಂತರ ಮುಖ್ಯಮಂತ್ರ್ರಿಗಳು ಕನ್ನಡಚಿತ್ರ ಶತದಿನ ಆಚರಿಸಿರುವುದು ಸಂತಸತಂದಿದೆಎಂದುಕಲಾವಿದರು, ತಂತ್ರಜ್ಗರಿಗೆ ಬೃಹದಾದ ನೆನಪಿನ ಕಾಣಿಕೆಗಳನ್ನು ವಿತರಿಸಿದರು.ಶ್ರೀನಿವಾಸಮೂರ್ತಿ, ರಮೇಶ್‌ಭಟ್, ರವಿಶಂಕರ್, ಯಶಸ್‌ಸೂರ್ಯ, ಸಂಗೀತ ನಿರ್ದೇಶಕ ಹರಿಕೃಷ್ಣ, ಸಾಹಿತಿಕಲ್ಯಾಣ್‌ಫಲಕ ಸ್ವೀಕಾರ ಮಾಡಿದರು. ವೇದಿಕೆಯಲ್ಲಿ ಉಪಸ್ತಿತರಿದ್ದ ಅಭಿಷೇಕ್‌ಅಂಬರೀಷ್‌ಕೋರಿಕೆಗೆ ಸ್ಪಂದಿಸಿದ ನಿರ್ಮಾಪಕರುಇಬ್ಬರ ಕಾಂಬಿನೇಶನ್‌ದಲ್ಲಿಚಿತ್ರ ಮಾಡುವುದಾಗಿ ಭರವಸೆ ನೀಡಿದರು. ಸಚಿವ ಭೈರತಿಬಸವರಾಜುಹಾಜರಾತಿಇತ್ತು.