ಡಾ.ರಾಜ್ಕುಮಾರ್ ಹಾಡಿನ ಪ್ರಸಂಗ
ಕೆಲವೊಮ್ಮೆ ಹಲವು ವರ್ಷಗಳಿಂದ ಹೂರಗೆ ಬಾರದೆಇರುವ ವಿಷಯಗಳು ಯಾವುದೋಒಂದು ಘಳಿಗೆಯಲ್ಲಿ ಬಿಚ್ಚಿಕೊಳ್ಳುತ್ತದೆ.ಅಂತಹ ಪ್ರಸಂಗವೊಂದು ‘ಸಿರಿ ಮ್ಯೂಸಿಕ್’ ಸಂಸ್ಥೆಯಎರಡನೇ ವಾರ್ಷಿಕ ಸಮಾರಂಭದಲ್ಲಿ ಸೋಜಿಗದ ಮಾಹಿತಿಯು ತಿಳಿಯುತು.ಸಂಸ್ಥೆಯು ವಾರ್ಷಿಕೋತ್ಸವದ ಅಂಗವಾಗಿ ದೊರೆ-ಭಗವಾನ್(ಡಾ.ರಾಜ್‌ಕುಮಾರ್ ಪ್ರಶಸ್ತಿ), ಸಿವಿ.ಶಿವಶಂಕರ್(ಪುಟ್ಟಣಕಣಗಾಲ್ ಪ್ರಶಸ್ತಿ), ರಮೇಶ್‌ಭಟ್ (ಶಂಕರ್‌ನಾಗ್ ಪ್ರಶಸ್ತಿ), ಮನ್‌ದೀಪ್‌ರಾಯ್ (ಡಾ.ವಿಷ್ಣುವರ್ಧನ್ ಪ್ರಶಸ್ತಿ), ವಸಿಷ್ಟಸಿಂಹ (ವಜ್ರಮುನಿ ಪ್ರಶಸ್ತಿ) ಸಂಗೀತಗಾರ ವಿಶ್ವನಾಥಪ್ರಸಾದ್ (ಪುಟ್ಟರಾಜಗವಾಯಿ ಪ್ರಶಸ್ತಿ), ಗಾಯಕಿಅನುರಾಧಭಟ್‌ಅವರಿಗೆ ಸ್ವರಮಾಧುರ್ಯ ಪ್ರಶಸ್ತಿ, ಕಲಾವಿದರುಗಳ ಸಂಪರ್ಕಾದಿಕಾರಿಅನಂತು(ಡಾ.ಅಂಬರೀಷ್ ಪ್ರಶಸ್ತಿ)ಹೀಗೆ ಕೆಲವರಿಗೆಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿದೊರೆಭಗವಾನ್ ಮಾತನಾಡಿ ಹಿರಿಯರುತೆರೆಮರೆಗೆ ಸರಿದವರನ್ನು ಗೌರವಸಿರುವುದು.ನಿಜಕ್ಕೂ ನೀವುಗಳು ಗುಣದಲ್ಲಿ ಸಿರಿವಂತರು.ಮಾಲೀಕಸುರೇಶ್‌ಚಿಕ್ಕಣನಾದರೂ ಸಾಧನೆಯಲ್ಲಿದೊಡ್ಡಣ್ಣ.೬೫ ವರ್ಷದ ಸಿನಿಪಯಣದಲ್ಲಿ ೫೦ ವರ್ಷಡಾ.ರಾಜ್‌ಕುಮಾರ್‌ಅವರೊಡನೆಒಡನಾಟದಿಂದ ೩೪ ಚಿತ್ರಗಳಿಗೆ ನಿರ್ದೇಶನ ಮಾಡುವ ಅವಕಾಶ ಸಿಕ್ಕಿತು.ದಶವತಾರ ಸಿನಿಮಾದ ಸನ್ನಿವೇಶದಲ್ಲಿ ಬರುವ ಸಣ್ಣ ಸಣ್ಣ ಹಾಡುಗಳಿಗೆ ಡಾ.ರಾಜ್ ನಟನೆಯಜೊತೆಗೆಧ್ವನಿ ನೀಡುತ್ತಿದ್ದರು.ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್‌ಖುಷಿಗೊಂಡುಅವರದೇಟ್ರಾಕಿರಲೆಂದು ನಿರ್ಣಯತೆಗೆದುಕೊಂಡರು.ಇದರಿಂದಅವಕಾಶವಂಚಿತರಾದಗಾಯಕ ಪಿ.ಬಿ.ಶ್ರೀನಿವಾಸ್‌ಅಣ್ಣಾವ್ರರನ್ನು ಭೇಟಿ ಮಾಡಿ ನೀವು ಎರಡನ್ನುಒಟ್ಟಿಗೆ ನಿಭಾಯಿಸಿದರೆ ನಮ್ಮಂತವರಿಗೆತೊಂದರೆಆಗುತ್ತದೆಂದು ಹೇಳಿದರು. ಇವರ ಸಲಹೆಯನ್ನು ಸ್ವೀಕರಿಸಿದ ಡಾ.ರಾಜ್‌ಇನ್ನು ಮುಂದೆ ನಾಯಕ ಮಾತ್ರಆಗಿರುತ್ತೇನೆ. ನೀವು ಶಾರೀರಆದರೆ, ನಾನು ಶರೀರಆಗುತ್ತನೆಂದು ಮಾತುಕೊಟ್ಟಂತೆ ಹಾಡುವುದನ್ನು ನಿಲ್ಲಿಸಿದರು.ಇದು ಹೀಗೆ ಮುಂದುವರೆಯಿತು.
‘ಸಂಪತ್ತಿಗೆ ಸವಾಲ್’ ಹಾಡುಗಳ ಧ್ವನಿಮುದ್ರಣ ಸಂದರ್ಭದಲ್ಲಿಇದೇ ಸಂಗೀತ ನಿರ್ದೇಶಕರುರಾಗಒದಗಿಸುತ್ತಿದ್ದರು.ಇವರಅನುಮತಿ ಪಡೆಯದೆ ಪಿ.ಬಿ.ಶ್ರೀನಿವಾಸ್ ಸಿಂಗಪೂರ್‌ಗೆ ಹೋದರು. ಅಷ್ಟೋತ್ತಿಗಾಗಲೇ ‘ಯಾರೇಕೂಗಾಡಲಿ’ ಗೀತೆ ಸಿದ್ದಗೊಂಡಿತು.ಸುಮ್ಮನೆಟ್ರಾಕ್‌ನ್ನುಡಾ.ರಾಜ್‌ಕುಮಾರ್‌ಅವರಿಂದ ಹಾಡಿಸಲಾಗಿತ್ತು. ಕೊನೆಗೆ ಅದುಚಿತ್ರದಲ್ಲಿ ಉಳಿದುಕೊಂಡ ಹಾಡುತುಂಬ ಪ್ರಸಿದ್ದಿಗೊಂಡಿತು. ಎಲ್ಲೆ ಹೋದರೂಅಭಿಮಾನಿಗಳು ಹಾಡುವುದನ್ನು ಮುಂದುವರೆಸಬೇಕೆಂಬ ಬೇಡಿಕೆ ಹೆಚ್ಚಾಗ ತೊಡಗಿತು.ಪ್ರಾರಂಭದಿಂದಲೂ ಅಭಿಮಾನಿಗಳನ್ನು ದೇವರುಎಂದು ಹೇಳುತ್ತಿದ್ದ ಡಾ.ರಾಜ್ ಅವರುಗಳ ಆದೇಶಎಂದುಕೊಂಡು ಮತ್ತೆಗಾಯನಕ್ಕೆ ಮರಳಿದರು.ಹೇಗಿದ್ದರೂತೆಲುಗು, ತಮಿಳು ಭಾಷೆಯಲ್ಲಿ ಶ್ರೀನಿವಾಸ್ ಬ್ಯುಸಿ ಇರುವುದರಿಂದಅವರು ಹೆಚ್ಚಾಗಿ ತಲೆಕೆಡೆಸಿಕೊಳ್ಳಲಿಲ್ಲ. ಡಾ.ರಾಜ್‌ಕುಮಾರ್‌ಅವರಿಗೆ ಸಂಗೀತಜ್ಘಾನಚೆನ್ನಾಗಿ ತಿಳಿದಿದ್ದರಿಂದೇ ಲಯಬದ್ದವಾಗಿ ಹಾಡುತ್ತಿದ್ದರೆಂದು ‘ಜೀವನಚೈತ್ರ’ದ ‘ನಾದಮಯ’ಗೀತೆ ಹುಟ್ಟಿಕೊಂಡಿದ್ದನ್ನು ನೆನಪು ಮಾಡಿಕೊಂಡರು. ಕಾರ್ಯಕ್ರಮದಲ್ಲಿತಾರಅತಿಥಿಯಾಗಿದ್ದು, ಸುರೇಶ್‌ಗುಣವೇಅವರ ಬೆಳವಣಿಗೆಗೆ ಕಾರಣವಾಗಿದೆಎಂದರು.