Ondu Shikariya Kathe.Movie Trailar Rel.

Tuesday, February 25, 2020

820

ಬೆಂಗಳೂರು  ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿಒಂದು ಶಿಕಾರಿಯ ಕಥೆ

ಕಡಿಮೆ ಬಜೆಟ್‌ದಲ್ಲಿ ಸಿದ್ದಗೊಂಡಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ಅಂಶಗಳು ಉತ್ತಮವಾಗಿರುವುದರಿಂದ ಬೆಂಗಳೂರು ಅಂತರಾಷ್ಟ್ರೀಯ  ಚಲನಚಿತ್ರೋತ್ಸವ ಮತ್ತು ಭಾರತೀಯ ಸಿನಿಮಾಗಳ ಸ್ವರ್ಧಾ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲು ಅರ್ಹತೆಯನ್ನು ಪಡೆದುಕೊಂಡಿದೆ. ಕಾಡಿನಲ್ಲಿ ನಡೆಯುವ ಶಿಕಾರಿ ಹಾಗೂ ಬದುಕಿನಲ್ಲಿ ಮನಸ್ಸಿನೊಳಗೆ ಅನುಭವಿಸುವ ಶಿಕಾರಿಗಳ ಬಗ್ಗೆ ಕತೆಯು ಸಾಗುತ್ತದೆ. ಪಿ.ಶೇಷಾದ್ರಿ ಬಳಿ ಮೂರು ವರ್ಷಗಳ ಕಾಲ ಸಹಾಯಕನಾಗಿ ಕೆಲಸ ಮಾಡಿರುವ ಸಚ್ಚಿನ್‌ಶೆಟ್ಟಿ ರಚಿಸಿ, ಪಾಲುದಾರ ಹಾಗೂ ನಿರ್ದೇಶನ ಮಾಡಿರುವುದು ಮೊದಲ ಅನುಭವ. ಪ್ರಧಾನ ಪಾತ್ರವನ್ನು ನಿರ್ವಹಿಸಿರುವ ಪ್ರಮೋದ್‌ಶೆಟ್ಟಿ ಸಾಹಿತಿಯಾಗಿ ಪೆನ್ನು, ಗನ್ನು ಹಿಡಿದಿರುವುದು ವಿಶೇಷ. ವೃತ್ತಿಪರಯಕ್ಷಗಾನಕಲಾವಿದ, ತೆರೆಮೇಲೂಅದೇರೀತಿಗಂಡು,ಹೆಣ್ಣು ಪಾತ್ರವನ್ನು ನಿಭಾಯಿಸಿರುವುದು ಪ್ರಸಾದ್‌ಬೇರ್ಕಾಡಿ. ಇದೇಕಲೆಯಅಭಿಮಾನಿ, ಪಿಯುಸಿ ಮುಗಿಸಿ ತವರಿಗೆ ಮರಳುವ ಹುಡುಗಿಯಾಗಿ ಸಿರಿಪ್ರಹ್ಲಾದ್ ನಾಯಕಿ.

ಶಿಕಾರಿಯ ಮಗನಾಗಿ ಅಹಿಂಸವಾದಿ, ಒಂದುಘಟ್ಟದಲ್ಲಿ ಬಂದೂಕು ಹಿಡಿಯುತ್ತಾನೆ. ಹಸಿವು ಅಂದರೆ ಹಣ.ಇದಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಅಭಿಮನ್ಯುಪ್ರಜ್ವಲ್ ನಾಯಕ. ಉಳಿದಂತೆ ಮೀರಾ, ಎಂ.ಕೆ.ಮಠ,ಶ್ರೀಪ್ರಿಯಾ ಮುಂತಾದವರು ನಟಿಸಿದ್ದಾರೆ. ಸಂಗೀತ ಸನತ್‌ಬಾಲ್ಕೂರು, 

ಛಾಯಾಗ್ರಹಣಯೋಗೇಶ್‌ಗೌಡಅವರದಾಗಿದೆ.ಉಡುಪಿ, ಕುಂದಾಪುರ, ಆಗುಂಬೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ರಾಜೀವ್‌ಶಟ್ಟಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.ನಾಲ್ಕು ದಶಕಗಳ ಕಾಲ ಯಕ್ಷಗಾನದಲ್ಲಿ ಸಕ್ರೀಯರಾಗಿರುವ ಸಿದ್ದಾಪುರದ ಐರ್‌ಬೈಲ್‌ಆನಂದಶೆಟ್ಟಯನ್ನುಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಅಂದಹಾಗೆಚಿತ್ರವು ಮುಂದಿನ ತಿಂಗಳು ೬ರಂದು ತೆರೆಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,