Nirmala.Film Press Meet.

Tuesday, February 25, 2020

815

ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ

ವಿಶ್ವದಲ್ಲೆ ಪ್ರಪ್ರಥಮಎನ್ನುವಂತೆಛಾಯಾಗ್ರಾಹಕ, ನಿರ್ಮಾಪಕ ಹೂರತುಪಡಿಸಿ ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನುಹೇಳುವ ಪ್ರಯುತ್ನ ಮಾಡಲಾಗಿದೆ. ಇದರಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ.ಇವೆಲ್ಲವನ್ನು  ಮಕ್ಕಳು ಹೇಗೆ ಮಾಡುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದುಅಡಿಬರಹದಲ್ಲಿ ಹೇಳಲಾಗಿದೆ. ಹಾಗಂತ ಇವರುಗಳುತೆರೆ ಹಿಂದೆ,ಮುಂದೆ ನೇರವಾಗಿ ಬಂದವೆಲ್ಲ. 

ಎಲ್ಲಾ ಚಿಣ್ಣರುಗಳು ೧೪-೧೫ ವಯಸ್ಸಿನರಾಗಿದ್ದು, ಇದಕ್ಕೆತಕ್ಕಂತೆ ಸೂಕ್ತ ತರಭೇತಿಯನ್ನು ಪಡೆದುಕೊಂಡಿದ್ದಾರೆ. ರವಿ ಸಾಹಿತ್ಯದ  ನೈಸರ್ಗಿಕ ಮತ್ತು ಹಳ್ಳಿ-ಸಿಟಿ ಆಟದ ವ್ಯತ್ಯಾಸಕುರಿತಂತೆಎರಡು ಹಾಡುಗಳಿಗೆ ವರ್ಣಶ್ರೀಮುರೂರು ಸಂಗೀತ, ಸರಿಗಮಮಖ್ಯಾತಿಯಜ್ಯೋತಿಕಾ ಹಾಗೂ ನಿಖಿತಾಕಂಠಸಿರಿ ಇರಲದೆ. 

 ನಿರ್ದೇಶನ ಲೋಹಿತ್‌ಪ್ರಕಾಶ್, ಸಂಕಲನ ಲೋಹಿತ್‌ಚಂದನ್,  ನೃತ್ಯ ಭಾವನಾನಾಯಕ್,  ಪ್ರಚಾರ ಕಲೆ ಅಂಕಿತಾನಾಯ್ಡು,  ಕಲಾ ನಿರ್ದೇಶನ ಮಿಥಿಲೇಶ್-ಆರ್ಯನ್,  ವಸ್ತ್ರಾಲಂಕಾರ ಪುಣ್ಯಶ್ರೀ ಮತ್ತು ಹಿರಿಯರ ಸಾಲಿನಲ್ಲಿಛಾಯಗ್ರಹಣ ವಿ.ಪವನ್‌ಕುಮಾರ್, ನಿರ್ಮಾಪಕರುಇದ್ದಾರೆ. ಉಲ್ಲಾಸ್‌ರಂಗಭೂಮಿ ಶಾಲೆಯ ಮಕ್ಕಳು  ಚಿತ್ರದಲ್ಲಿತಂತ್ರಜ್ಘ, ಕಲಾವಿದರುಗಳಾಗಿ ಗುರುತಿಸಿಕೊಂಡಿದ್ದಾರೆ. ರಾಮನಗರ, ಚೆನ್ನಪಟ್ಟಣ, ಬಿಡದಿ ಕಡೆಗಳಲ್ಲಿ ಒಂದೇ ಹಂತದಲ್ಲಿಚಿತ್ರೀಕರಣ ನಡೆಸಿದೆ.ಬಿ.ಹೆಚ್.ಉಲ್ಲಾಸ್‌ಗೌಡ  ಮತ್ತು ಅವಿನಾಶ್ ನಿರ್ಮಾಣ ಮಾಡಿರುವಚಿತ್ರವು ಬೆಂಗಳೂರು ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,