Gulamagiri.Film Muhurath.

Thursday, February 27, 2020

806

ಎರಡುಕಾಲಘಟ್ಟದಕಥನ

ಸಂವಿಧಾನಅನುಚ್ಚೇದ ಸಂಖ್ಯೆ ೧೫ರಲ್ಲಿ ‘ಎಲ್ಲರಿಗೂ ಸಮಾನತೆಕೊಡಬೇಕೆಂದು’ ಹೇಳಿರುತ್ತದೆ.ಇದರಆಧಾರದ ಮೇಲೆ ‘ಗುಲಾಮಗಿರಿ’ ಸಂಪೂರ್ಣ ಹೂಸಬರಚಿತ್ರವೊಂದು ಸೆಟ್ಟೇರಿದೆ. ನೆಲಮಂಗಲದಅರುಣ್‌ಕೃಷ್ಣ  ಏಳು ವರ್ಷಗಳಲ್ಲಿ ರಥಾವರ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ಮತ್ತುಎರಡು ವರ್ಷಗಳ ಕಾಲ ಕಾಲಿವುಡ್‌ದಲ್ಲಿ ಕೆಲಸ ಮಾಡಿದಸಂವೇದನೆಯಿಂದಚಿತ್ರಕ್ಕೆರಚನೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ೧೯೭೭-೯೨ವರೆಗೆ ತಮಿಳುನಾಡಿನಲ್ಲಿ ನಡೆದಪೆರಿಯಾರ್ ಹೋರಾಟಕ್ರಾಂತಿಯ ಪ್ರತೀಕವೇಕತೆ ಬರೆಯಲು ಸ್ಪೂರ್ತಿಯಾಗಿದೆಯಂತೆ.

೧೯೭೫ ಹಾಗೂ ೨೦೦೫ ಎರಡುಕಾಲಘಟ್ಟದಲ್ಲಿ ಸಿನಿಮಾ ಸಾಗುತ್ತದೆ.ಅಂದಿನಿಂದಲೂಜನರುಯಾವಯಾವರೀತಿಯಲ್ಲಿಗುಲಾಮರಾಗಿ ಬದುಕುತ್ತಿದ್ದರು.ಭೂಮಿ ಮೇಲೆ ಶ್ರೀಮಂತ-ಬಡವ ಎಂಬ ಜಾತಿಇರುತ್ತದೆ. ಶ್ರೀಮಂತರು ಬಡವರನ್ನುಆರ್ಥಿಕ,ಶೈಕ್ಷಣಿಕವಾಗಿ ಮುಂದೆ ಬರಲು ಬಿಡುತ್ತಿಲ್ಲ. ಗತಕಾಲದಿಂದ ವ್ಯವಸ್ಥೆ ವಿರುದ್ದ ಹೋರಾಡುವಗ್ಯಾಂಗ್‌ಸ್ಟರ್‌ಇರುತ್ತಾರೆ. 

ಅದುಯಾರುಎಂಬುದನ್ನುತಂಡವುಗೌಪ್ಯವಾಗಿಟ್ಟಿದೆ.ಅಂದುಜನರ ಬದುಕಿಗೆ ಭರವಸೆ ನೀಡುವ ವ್ಯಕ್ತಿ, ಮುಂದೆಅವರ ಮಗ ಅದನ್ನೆ ಮುಂದುವರೆಸಿಕೊಂಡು ಹೋಗುತ್ತಿರುತ್ತಾನೆ. ಹೀಗೆ ಎರಡು ಧರ್ಮಗಳ ನಡುವೆಉಂಟಾಗುವ ಸಂಘರ್ಷವೇ ಸಿನಿಮಾದ ಸಾರಾಂಶವಾಗಿದೆ.ಕ್ಲೈಮಾಕ್ಸ್‌ನ್ನು ೨೦೦೫ಕ್ಕೆ ಕೊನೆಗೊಳ್ಳುವಂತೆ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.

ಟೈಗರ್‌ನಾಗ್ ನಾಯಕನಾಗಿಎರಡು ಷೇಡ್‌ಗಳಲ್ಲಿ ವಕೀಲರಾಗಿ ಕಾಣಿಸಿಕೊಳ್ಳಲಿದ್ದಾರೆ. ತುಮಕೂರು ಮೂಲದಕಾವ್ಯನಾಗರಾಜು, ಸುಚಾರಿತಾಸಗಾಯ್‌ರಾಜ್ ಮತ್ತು ಸ್ನೇಹನಾಯ್ಡು ನಾಯಕಿಯರು.ಇವರೊಂದಿಗೆಚಿರಂಜೀವಿ, ಫಾರೂಕ್, ವಾಲೆಚಂದ್ರಯ್ಯ, ಶಶಿ ಮುಂತಾದವರು ಬಣ್ಣ ಹಚ್ಚುತ್ತಿದ್ದಾರೆ.ಬೆಂಗಳೂರು, ತುಮಕೂರು,  ಮಧುಗಿರಿ, ಕೊರಟಗೆರೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲುಯೋಜನೆರೂಪಿಸಲಾಗಿದೆ.ಅದಕ್ಕಾಗಿ ಆ ಕಾಲದ ಸ್ಥಳಗಳು, ವಸ್ತ್ರಗಳನ್ನು ಪಾತ್ರಧಾರಿಗಳಿಗೆ ನೀಡಲಾಗುತ್ತಿದೆ.ನಾಲ್ಕು ಹಾಡುಗಳಿಗೆ ಸ್ಟೀಫನ್‌ಪ್ರತೀಕ್ ಸಂಗೀತ, ಪ್ರಶಾಂತ್‌ಗೌಡಛಾಯಾಗ್ರಹಣ, ಅರುಣ್‌ಕೃಷ್ಣ-ದಿವಾಕರ್‌ಅಜಾದ್‌ಚಿತ್ರಕತೆ, ಅಲ್ಟಿಮೇಟ್‌ಶಿವು ಸಾಹಸ, ಸ್ಟಾರ್‌ನಾಗಿ ನೃತ್ಯ ನಿರ್ವಹಿಸುತ್ತಿದ್ದಾರೆ.

ಸಮಾಜದಲ್ಲಿ ಪ್ರತಿಯೊಬ್ಬರು ಮನುಷ್ಯರೇ.ಎಲ್ಲರನ್ನು ಸಮನಾಗಿ ಕಂಡು, ಅವರಿಗೂ ಬದುಕಲು ಅವಕಾಶ ಮಾಡಿಕೊಡಬೇಕು.ಯಾವುದೇ ವಿಷಯದಲ್ಲಿತಾರತಮ್ಯಮಾಡಬಾರದು.ನಮ್ಮ ಹಕ್ಕುಗಳಿಗೆ ವಿಪ್ಲವಮಾಡುತ್ತಲೇಇರುತ್ತವೆಂದು ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.ಚಿತ್ರದುರ್ಗದ ನಾಗರಾಜ್ ಹಾಗೂ ಟೈಗರ್‌ನಾಗ್‌ಜಂಟಿಯಾಗಿ ‘ಸಂವಿಧಾನ ಸಿನಿ ಕಂಬೈನ್ಸ್’ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಮಹಾ ಬೋಧಿ ಬುದ್ದ ವಿಹಾರದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ಬೌದ್ದ ಗುರುಗಳು ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರು.ನಟ ಆ ದಿನಗಳು ಚೇತನ್ ಹಾಜರಿದ್ದುತಂಡಕ್ಕೆ ಶುಭ ಹಾರೈಸಿದರು.

 

 

Copyright@2018 Chitralahari | All Rights Reserved. Photo Journalist K.S. Mokshendra,