Ondu Ghanteya Kathe.Film Teaser Rel.

Friday, February 28, 2020

797

ಒಂದುಖಾತೆಗೆ ಮತ್ತೋಂದುಚಿತ್ರ ಸೇರ್ಪಡೆ

ಒಂದು ಮುತ್ತಿನಕಥೆ, ಒಂದು ಸಣ್ಣ ಬ್ರೇಕ್ ನಂತರ, ಒಂದು ದಿನ ಒಂದುಕ್ಷಣ, ಒಂದು ಶಿಕಾರಿಯ ಕಥೆ, ಒಂದು ಮೊಟ್ಟೆಯಕಥೆ ಹೀಗೆ ಹೇಳುತ್ತಾ ಹೋದರೆ ಕೊನೆ ಎಂಬುದುಇರುವುದಿಲ್ಲ. ಈ ಸರಪಳಿಗಳ ಸಾಲಿಗೆ ‘ಒಂದುಗಂಟೆಯಕಥೆ’ ಚಿತ್ರವೊಂದು ಸೇರಿಕೊಂಡಿದೆ.ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನುದೃಶ್ಯರೂಪಕ್ಕೆತಂದಿರುವರಾಘವದ್ವಾರ್ಕಿ ಸಿನಿಮಾಕ್ಕೆಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಚಿತ್ರದಲ್ಲಿಪ್ರೇಮಿಗಳಾದ ಸರೋಜ ಮತ್ತುರಾಹುಲ್‌ಒಂದೇ ಮೆಡಿಕಲ್‌ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿರುತ್ತಾರೆ. ಮುಂದೆ ಮದುವೆ ಪ್ರಸ್ತಾಪ ಬಂದಾಗಆತನು ಬೇರೆ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ನಮ್ಮಿಬ್ಬರ ಸ್ನೇಹಇದೇರೀತಿಮುಂದುವರೆಯಲಿ ಎನ್ನುತ್ತಾನೆ. ಇದರಿಂದಆಕೆಯ ಮನಸ್ಸುಜರ್ಜರಿತಗೊಂಡು, ಇವನಿಗೆ ತಕ್ಕ ಬುದ್ದಿಕಲಿಸಬೇಕೆಂದು ಪಣತೊಟ್ಟು, ಯಾರು ಊಹಿಸಲಾರದಂತ ಶಿಕ್ಷೆ ಕೊಡುತ್ತಾಳೆ.ಅಲ್ಲಿಂದ ಮುಂದೇನುಎನ್ನುವುದನ್ನುಚಿತ್ರದಲ್ಲಿ ನೋಡಬೇಕಂತೆ.

ನಾಯಕನಾಗಿಅಜಯ್‌ರಾಜ್, ನಾಯಕಿ ಶನಾಯಕಟ್ವೆಇವರೊಂದಿಗೆಯಶವಂತಸರ್‌ದೇಶಪಾಂಡೆ, ಸ್ವಾತಿಶರ್ಮ, ಪ್ರಕಾಶ್‌ತುಮ್ಮಿನಾಡು, ಚಿದಾನಂದ್, ಚಂದ್ರಕಲಾ, ಆನಂದ್, ನಾಗೇಂದ್ರಷಾ, ಪ್ರಶಾಂತ್‌ಸಿದ್ದಿ ಸೇರಿದಂತೆಒಟ್ಟು ೧೨೩ ಕಲಾವಿದರುಇರುವುದುಹಿರಿಮೆಯಾಗಿದೆ.ಅಲ್ಲದೆಇವರೆಲ್ಲರೂಕ್ಲೈಮಾಕ್ಸ್‌ದಲ್ಲಿ ಕಾಣಿಸಿಕೊಳ್ಳುತ್ತಾರೆ.ಸಂಗೀತಡೆನಿಸ್‌ವಲ್ಲಬನ್.ಎ, ಛಾಯಾಗ್ರಹಣಗಣೇಶ್‌ಮಲ್ಲಯ್ಯಅವರದಾಗಿದೆ.ನಮ್ಮದುಡಬ್ಬಲ್ ಮೀನಿಂಗ್‌ಇರದೆಏನಿದ್ದರೂಡೈರಕ್ಟ್ ಮೀನಿಂಗ್‌ಎಂದು ಬಣ್ಣಿಸಿಕೊಳ್ಳುವ ನಿರ್ಮಾಪಕಕಶ್ಯಪ್‌ದಾಕೋಜುಅಭಿಮಾನದಿಂದ ಎ ಪ್ರಮಾಣಪತ್ರವನ್ನು ಪಡೆದುಕೊಂಡಿರುವುದಾಗಿ ಹೇಳುತ್ತಾರೆ.ಬೆಂಗಳೂರು, ಮಡಕೇರಿ, ಕೇರಳ, ತಮಿಳುನಾಡು ಸುಂದರತಾಣಗಳಲ್ಲಿ ಚಿತ್ರೀಕರಣ ನಡೆದಿದೆ.ಮೊನ್ನೆಯಷ್ಟೇ ಹೆಣ್ಣು ಮಕ್ಕಳಿಗೆ ವಿಶೇಷ ಪ್ರದರ್ಶನವನ್ನುಏರ್ಪಾಟು ಮಾಡಿದ್ದುಅಲ್ಲಿಂದಲೂಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ರಿಯಲ್‌ವೆಲ್ತ್ ವೆಂಚರ್ ಪ್ರೊಡಕ್ಷನ್ಸ್‌ಮೂಲಕ ಸಿದ್ದಗೊಂಡಿರುವ ಚಿತ್ರವು ಸದ್ಯದಲ್ಲೆತೆರೆಕಾಣುವ ಸಾದ್ಯತೆಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,