ಜನರಎದುರು ಬಿಚ್ಚುಗತ್ತಿ
ಬಿ.ಎಲ್.ವೇಣುಕಾದಂಬರಿಆಧಾರಿತ ‘ಬಿಚ್ಚುಗತ್ತಿ’ ಚಿತ್ರತಂಡವು ಕೊನೆ ಬಾರಿ ಮಾದ್ಯಮದವರನ್ನು ಭೇಟಿ ಮಾಡಿತು.ಮೈಕ್‌ತೆಗೆದುಕೊಂಡ ನಿರ್ದೇಶಕ ಹರಿಸಂತೋಷ್ ಹೇಳುವಂತೆ ಮೋಹನ್‌ಲಾಲ್ ನಟನೆಯ ‘ಪುಲಿ ಮುರುಗನ್’ದಲ್ಲಿ ಹುಲಿಯನ್ನುಗ್ರಾಫಿಕ್ಸ್ ಮೂಲಕ ತೋರಿಸಿದ ಸಂಸ್ಥೆಯುಇದರಲ್ಲಿ ಕೆಲಸ ಮಾಡಿದೆ.ಕಡಿಮೆ ಬಜೆಟ್‌ದಲ್ಲಿಅದೇರೀತಿ ತೋರಿಸಿದ್ದು, ಎಲ್ಲರಿಂದ ಪ್ರಶಂಸೆ ಬಂದಿದೆ.ಎಲ್ಲರ ಸಹಕಾರದಿಂದಇಲ್ಲಿಯವರೆಗೂ ಬಂದಿದೆಎಂದರು.ಅಮ್ಮನಿಗೆಐತಿಹಾಸಿಕ ಪಾತ್ರಗಳೆಂದರೆ ಇಷ್ಟವಾಗಿತ್ತು. ಬಾಲ್ಯದಲ್ಲಿ ಕೆಳದಿಚೆನ್ನಮ್ಮ, ಕಿತ್ತೂರುರಾಣಿಚೆನ್ನಮ್ಮನಾಗಿನಟಿಸಿದ್ದೆ.ಇಂತಹ ವಾತವರಣದಲ್ಲಿ ಬೆಳದ ನನಗೆ ಬಿಚ್ಚುಗತ್ತಿದಲ್ಲಿತೂಕದ ಪಾತ್ರ ಸಿಕ್ಕಿರುವುದು ಖುಷಿಯಾಗಿದೆ.ಕುದುರೆ ಸವಾರಿಗೊತ್ತಿದ್ದರಿಂದ ಕಷ್ಟವಾಗಲಿಲ್ಲ. ಆದರೆಕತ್ತಿವರಸೆಯಲ್ಲಿ ನಿಜವಾದಕತ್ತಿಯನ್ನು ಬಳಸಲಾಗಿದ್ದು ಮರೆಯಲಾಗದಅನುಭವ. ಕೇವಲ ೪೦ ದಿನದಲ್ಲಿಇಷ್ಟೋಂದುಜನರನ್ನುಕೂಡಿಹಾಕಿಕೊಂಡುಚಿತ್ರೀಕರಣ ಮುಗಿಸಿರುವುದಕ್ಕೆ ನಿರ್ದೇಶಕರನ್ನು ನಾಯಕಿ ಹರಿಪ್ರಿಯಾಮೆಚ್ಚುಗೆ ಸೂಚಿಸಿದರು.
ಅವಕಾಶ ಸಿಕ್ಕಾಗ ತುಂಬ ನಂಬಲಿಕ್ಕೆ ಆಗಲಿಲ್ಲ. ಪ್ರಾರಂಭದಿಂದಲೂದರ್ಶನ್ ಪ್ರೋತ್ಸಾಹ ನೀಡಿದ್ದಾರೆ.ಈಗ ಎಲ್ಲರೂಇದರ ಬಗ್ಗೆ ಮಾತನಾಡುತ್ತಿರುವುದನ್ನು ನೋಡಿದಾಗತಂಡದಲ್ಲಿನಾನಿರುವುದು ಹೆಮ್ಮೆ ಅನಿಸುತ್ತದೆಎಂದು ನಾಯಕರಾಜವರ್ಧನ್ ಹೇಳಿದರು. ದಳವಾಯಿ ಮುದ್ದಣ್ಣನ ಪತ್ನಿ ಮಲ್ಲವ್ವನಾಗಿ ಕಾಣಿಸಿಕೊಂಡಿರುವ ಕಲ್ಯಾಣಿ, ನಾಯಕನತಂದೆ ನಟಡಿಂಗ್ರಿನಾಗರಾಜ್, ರಮೇಶ್‌ಪಂಡಿತ್, ಸಾಹಿತಿಡಾ.ನಾಗೇಂದ್ರಪ್ರಸಾದ್ ಉಪಸ್ತಿತರಿದ್ದು ಸಿನಿಮಾಕುರಿತಂತೆ ಮಾತನಾಡಿದರು. ಶೇಕಡ ೭೦ ರಷ್ಟು ಸೆಟ್‌ದಲ್ಲಿ ಆಸ್ಥಾನ, ಜೈಲ್, ದರ್ಬಾರ್ ಹಾಲ್ ಸೇರಿದೆ. ಉಳಿದ ಭಾಗಗಳನ್ನು ಚಿತ್ರದುರ್ಗದಲ್ಲಿಒಟ್ಟಾರೆ ೧೦೦ ದಿನಗಳ ಕಾಲ ಶೂಟ್ ಮಾಡಲಾಗಿದೆ. ಆರು ಫೈಟ್‌ಗಳು, ಈ ಪೈಕಿ ಹುಲಿಯೊಂದಿಗೆ ಮೂರು ಸಾಹಸಗಳು ಇರಲಿದೆ.ಆರು ಹಾಡುಗಳಿಗೆ ದೇಸಿದೊರೆ ಹಂಸಲೇಖಾ ಮತ್ತು ನಕುಲ್‌ಅಭ್ಯಂತರ್ ಸಂಗೀತ ಸಂಯೋಜಿಸಿದ್ದು, ಹಿನ್ನಲೆ ಶಬ್ದವನ್ನು ಸೂರಜ್ ನಿರ್ವಹಿಸಿದ್ದಾರೆಂದು ಮಾಹಿತಿಕೊಡುತ್ತಾರೆ.ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿರುವಚಿತ್ರವುಶುಕ್ರವಾರದಂದುತೆರೆಕಾಣುತ್ತಿದೆ.