Shivaji Surathkal.Film Success Meet.

Tuesday, February 25, 2020

817

ಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆರಮೇಶ್ಅರವಿಂದ್

ನಾವು ಇಷ್ಟಪಡುವಂಥ ಕೆಲಸವನ್ನು, ನಾವು ಇಷ್ಟಪಡುವಜನರಜೊತೆ, ನಾವು ಇಷ್ಟಪಡುವಜಾಗದಲ್ಲಿ, ನಾವು ಇಷ್ಟಪಡುವ ಹೂತ್ತಿಗೆ, ನಾವು ಇಷ್ಟಪಟ್ಟು ಮಾಡುವುದೇಯಶಸ್ಸು.ಕೊನೆಯದಾಗಿಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆಂದು ನಾಯಕರಮೇಶ್‌ಅರವಿಂದ್ ‘ಶಿವಾಜಿ ಸುರತ್ಕಲ್’ ಚಿತ್ರದ ಸಕ್ಸಸ್ ಮೀಟ್‌ದಲ್ಲಿ  ಮಾತನಾಡುತ್ತಿದ್ದರು. ಈ ತರಹಕೃತಕವಲ್ಲದಯಶಸ್ಸು ಸಿಗಬೇಕೆಂಬ ಪಸೆ  ಇತ್ತೀಚಿನ ವರ್ಷಗಳಲ್ಲಿ ಬಂದಿತ್ತು. ಅದು ಈಗ ಈಡೇರಿದೆ.ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೋಡುಗರು ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.ಮುಂದೆಇದಕ್ಕಿಂತಲೂ ಒಳ್ಳೆಯ ಚಿತ್ರ ಮಾಡಬೇಕೆಂಬ ಜವಬ್ದಾರಿ ಜಾಸ್ತಿ ಆಗಿದೆ.ಕೇಸ್ ೧೦೧ ಮುಗಿದಅಧ್ಯಾಯ.ಇದರ ಸೀರೀಸ್ ಎನ್ನುವಂತೆಕೇಸ್ ೨೩ರಲ್ಲಿ ಲವರ್‌ಇರಬಹುದು.೧೨೩ರಲ್ಲಿ ಖಾಯಿಲೆ ವಾಸಿಯಾಗಿ ಆತನ ಮನಸ್ಥಿತಿ ಹೇಗಿರುತ್ತದೆಂಬ ಕತೆ ಬಂದರೂ ಬರಬಹುದು.ರಾಹುಲ್‌ಡ್ರಾವಿಡ್ ವೀಕ್ಷಿಸಿದ್ದು, 

ಟಿಕ್‌ಟಾಕ್‌ನಿಂದಒಂದಷ್ಟು ಸಿನಿಮಾಕ್ಕೆ ಪ್ರಚಾರ ಸಿಕ್ಕಿದೆ. ಹೆಸರು ಸುರತ್ಕಲ್,  ಮೈಸೂರಿನಕತೆ, ಕೂರ್ಗ್‌ದಲ್ಲಿ ಕೊಲೆ  ಇವೆಲ್ಲವುಒಂದಕ್ಕೊಂದು ಲಿಂಕ್‌ಇರುವುದು ಪ್ಲಸ್ ಪಾಯಿಂಟ್‌ಆಗಿದೆಎಂದು ಶಿವಾಜಿ ಉರುಫ್‌ರಮೇಶ್‌ಅರವಿಂದ್ ನಕ್ಕರು.

ಮೊದಲನೇ ದಿನ ೮೦ ಕೇಂದ್ರಗಳಲ್ಲಿ ಇರಲಾಗಿ, ಎರಡನೇ ವಾರದಿಂದ ೧೨೦ ಸಂಖ್ಯೆಗೆ ಹೋಗುವ ಲಕ್ಷಣಕಾಣುತ್ತಿದೆ.ಪರಭಾಷೆಚಿತ್ರಮಂದಿರವೆಂದು ಹೇಳುತ್ತಿದ್ದ ಊರ್ವಶಿ ಟಾಕೀಸ್‌ದಲ್ಲಿ ಶೇಕಡ ೮೦ರಷ್ಟು ಹೌಸ್‌ಫುಲ್‌ಆಗಿದೆ.ಆಸ್ಟ್ರೇಲಿಯಾ, ಯುಕೆದಲ್ಲಿ ೩೦ ಸೆಂಟರ್‌ಗಳಲ್ಲಿ ಬಿಡುಗಡೆಗೊಂಡಿದೆ.ಬದ್ಮಾಶ್ ನಿರ್ಮಾಪಕರುಯಎಸ್‌ಜನರಿಗೆತೋರಿಸಲು ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.ಬಾಲಿವುಡ್‌ದೊಡ್ಡ ಸಂಸ್ಥೆಯೊಂದುರಿಮೇಕ್ ಮಾಡಲುಉತ್ಸುಕರಾಗಿದ್ದಾರೆ.ಇದರಜೊತೆಗೆತೆಲುಗು, ತಮಿಳಿನಿಂದಲೂ ಕರೆ ಬಂದಿದೆ.ಬಹುಶ: ಅಲ್ಲಿಯೂನಿರ್ದೇಶನ ಮಾಡಬಹದು.  ‘ಗ್ರೇಟ್‌ಟೀಮ್ ವರ್ಕ್ ಪೀಪಲ್’ಚಿತ್ರದಡೈಲಾಗ್‌ನ್ನುಎಲ್ಲೇ ಹೋದರೂ ಹೇಳುತ್ತಾರೆ. ಅಲ್ಲದೆ ಸಣ್ಣ ಸಣ್ಣ ಪಾತ್ರಗಳನ್ನು ಗುರುತಿಸಿರುವುದು ಕೆಲಸ ಮಾಡಿದ್ದಕ್ಕೂ ಸಾರ್ಥಕವಾಯಿತುಅಂತಾರೆ ನಿರ್ದೇಶಕ ಆಕಾಶ್‌ಶ್ರೀವತ್ಸ.

ಮಾದ್ಯಮದವರು ಪ್ರಾರಂಭದಿಂದಲೂ ಪ್ರೋತ್ಸಾಹ, ಉತ್ತಮ ವಿಮರ್ಶೆ ಬರೆದಿರುವುದರಿಂದಲೇಚಿತ್ರವುಎಲ್ಲರಿಗೂತಲುಪುತ್ತಿದೆ.ರ‍್ಯಾಡಿಕಲ್ ಸಂಸ್ಥೆಯೊಂದು ಪ್ಯಾನ್‌ಇಂಡಿಯಾ ಮಾದರಿಯಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ.ಇದೇರೀತಿ ಮುಂದೆಯೂ ಸಹಕಾರ ನೀಡಬೇಕಂದು ನಿರ್ಮಾಪಕಅನೂಪ್‌ಗೌಡಕೋರಿದರು.

 

Copyright@2018 Chitralahari | All Rights Reserved. Photo Journalist K.S. Mokshendra,