Obiraayana Kathe.Film Title Rel.

Thursday, March 05, 2020

332

ಶಾಪಗ್ರಸ್ತರಾಜೇಶ್ನಟರಂಗ

ಅನನ್ಯ ಪ್ರತಿಭೆರಾಜೇಶ್‌ನಟರಂಗ ಪ್ರಥಮಬಾರಿ ನಾಯಕನಾಗಿ ನಟಿಸುತ್ತಿರುವ ‘ಓಬಿರಾಯನಕಥೆ’ ಚಿತ್ರಕ್ಕೆ ಶುಭ ಹಾರೈಸಲುಯಶ್ ಆಗಮಿಸಿದ್ದರು.ಶೀರ್ಷಿಕೆ ಅನಾವರಣಮಾಡಿದರಾಕಿಬಾಯ್ ಮಾತನಾಡುತ್ತಾ ‘ಪ್ರೀತಿಇಲ್ಲದೆ ಮೇಲೆ’ ಧಾರವಾಹಿಯಲ್ಲಿ ನಟಿಸುತ್ತಿರುವಾಗಅಚ್ಯುತಕುಮಾರ್, ರಾಜೇಶ್‌ರವರನ್ನುಅಣ್ಣಎಂದುಕರೆಯುತ್ತಿದ್ದೆ.ಅವರುಸ್ಪುರದ್ರೂಪಿಯಾಗಿದ್ದು ಹೀರೋ ಆಗಲಿಲ್ಲವಾದರೂ, ಸೆಟ್‌ದಲ್ಲಿಯಾವಗಲೂ ಹೀರೋನಂತೆಇರುತ್ತಿದ್ದರು.ತಡವಾಗಿಯಾದರೂನಾಯಕಆಗುತ್ತಿರುವುದು ಸಂತಸತಂದಿದೆ.ಅಂದುಚಿಕ್ಕ ಹುಡುಗನಾಗಿಅನಂತ್‌ನಾಗ್ ಸರ್, ಇವರುಗಳಿಂದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು.ನನ್ನ ಬೆಳವಣಿಗೆಗೆ ಇವರೆಲ್ಲರುಕಾರಣರಾಗಿರುತ್ತಾರೆ.ರಾಜೇಶ್‌ಎಲ್ಲ ಬಲ್ಲವರಾಗಿದ್ದರೂ ನಿರ್ದೇಶಕ ಏಕೆ ಆಗಿಲ್ಲವೆಂದು ತಿಳಿದಿರುವುದಿಲ್ಲ. ಮುಂದೊಂದು ದಿನ ಆಕ್ಷನ್‌ಕಟ್ ಹೇಳುವ ಕಾಲ ನಿಮಗೆ ಬರುತ್ತದೆ. ಶೀರ್ಷಿಕೆ ಚೆನ್ನಾಗಿದೆತಂಡಕ್ಕೆ ಒಳ್ಳೆಯದಾಗಲಿ ಎಂದರು.

ಕತೆಯಕುರಿತು ಹೇಳುವುದಾದರೆ ರಾಜೇಶ್ ಮದುವೆ ಫೋಟೋಗ್ರಾಫರ್‌ಆಗಿದ್ದು, ಗತಕಾಲದ ಶಾಪದಿಂದ ವಯಸ್ಸು ೩೯ ಆಗಿದ್ದರೂಕಂಕಣಭಾಗ್ಯಕೂಡಿಬಂದಿರುವುದಿಲ್ಲ. ಮುಂದೆ ಹುಡುಗಿಯೊಂದಿಗೆ ಪರಿಚಯವಾಗಿ ಪ್ರೀತಿಗೆತಿರುಗುತ್ತದೆ.ಆ ಮೂಲಕ ಈಕೆಯಎಂಟ್ರಿಯೊಂದಿಗೆಇವರಿಗೆ ಶಾಪವಿಮೋಚನೆ ಆಗುತ್ತದಾ?ಅಷ್ಟಕ್ಕೂ ಯಾವ ಶಾಪ ಎಂಬುದನ್ನುಚಿತ್ರದಲ್ಲಿ ತಿಳಿಯಬೇಕೆಂತೆ.ಪೋಸ್ಟರ್‌ದಲ್ಲಿ ಸಪ್ತಪದಿ ಸ್ಟುಡಿಯೋ, ಅದೇ ಹೆಸರಿನಚಿತ್ರದ ಭಾವಚಿತ್ರ, ಮದುವೆ, ಮುಂಜಿ, ನಾಮಕರಣ, ಹುಟ್ಟಿದಹಬ್ಬಅಂತ ಹೇಳಲಾಗಿ, ಸಾವು ಪದವನ್ನುಒಡೆದುಹಾಕಲಾಗಿರುತ್ತದೆ.ಇವೆಲ್ಲವೂ ಸನ್ನಿವೇಶಕ್ಕೆ ಪೂರಕವಾಗಿರುತ್ತದೆ.ಪುರಾತನಕಾಲದ ಹೆಸರನ್ನುಇಡಲು ಮತ್ತೋಂದುಕಾರಣವಿದೆಯಂತೆ.ಬೆಂಗಳೂರು ಮತ್ತು ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲುಯೋಜನೆ ಹಾಕಿಕೊಂಡಿದ್ದಾರೆ.

ವೇಣುಹಸ್ರಾಳಿ ಕತೆಗೆ,ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವರಂಗಕರ್ಮಿ ವಿನಯ್‌ಶಾಸ್ತ್ರೀ ಅವರಿಗೆ ಹೊಸ ಅನುಭವ. ನಾಯಕಿಯಾಗಿಚೈತ್ರಾಆಚಾರ್, ದತ್ತಣ್ಣ, ರಘುದೀಕ್ಷಿತ್ ಸಂಗೀತ ಮತ್ತುಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದು ವಿಶೇಷ. ಛಾಯಾಗ್ರಹಣ ಸುನೀತ್‌ಗಹಲಗೇರಿಅವರದಾಗಿದೆ. ನಾಟಕದ ಹಿನ್ನಲೆಯಲ್ಲಿ ಗುರುತಿಸಿಕೊಂಡಿರುವ ಶಾಮ್‌ಹನ್ನೂರ್‘ಹನ್ನೂರ್ ಪ್ರೊಡಕ್ಷನ್’ ಮೂಲಕ ಸಿನಿಮಾಕ್ಕೆಆರ್ಥಿಕಇಂದನಒದಗಿಸುತ್ತಿದ್ದಾರೆ.ಇನ್ನರೆಡು ದಿನಗಳಲ್ಲಿ ಚಿತ್ರೀಕರಣಕ್ಕೆಅಣಿಯಾಗಲುತಂಡವು ಸಿದ್ದತೆಗಳನ್ನು ಮಾಡಿಕೊಂಡಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,