Kaanadante Mayavadanu.Film Success Meet.

Saturday, March 07, 2020

317

ಜನರುಕಾಣದಂತೆ  ಮಾಯವಾದರು

ಜನವರಿಕೊನೆವಾರದಂದು ಬಿಡುಗಡೆಗೊಂಡ ‘ಕಾಣದಂತೆ ಮಾಯವಾದನು’ ಚಿತ್ರವು  ಪತ್ರಿಕೆಗಳಿಂದ ಒಳ್ಳೆ ವಿಮರ್ಶೆ ಮತ್ತುಜನರಿಂದಉತ್ತಮ ಪ್ರತಿಕ್ರಿಯೆ ವ್ಯಕವಾಗಿದೆ. ಆದರೆಚಿತ್ರಮಂದಿರಕ್ಕೆಜನರು ಬರುತ್ತಿಲ್ಲವೆಂದು ನಾಯಕ ವಿಕಾಸ್ ಸುದ್ದಿಗೋಷ್ಟಿಯಲ್ಲಿಖೇದ ವ್ಯಕ್ತಪಡಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಮಾಲ್‌ಗಳು ನಾಲ್ಕು ದಿನದೊಳಗೆ ಗಳಿಕೆ ಕಡಿಮೆಯಾzರೆ, ನಮಗೆ ಹೇಳದೆ ತೆಗೆದುಹಾಕಿರುತ್ತಾರೆ. ಹೆಚ್ಚಾಗಿ ಬುಕ್ ಮೈ ಷೋದಿಂದಅನ್ಯಾಯವಾಗುತ್ತಿದೆ. ಹಣ ನೀಡಿದವರಿಗೆ ಒಳ್ಳೆ ರೇಟಿಂಗ್ಸ್‌ಕೊಡುತ್ತಾರೆ.  ಪ್ರೇಕ್ಷಕರಿಂದ ಹೆಚ್ಚಿನ ಅಂಕ ನೀಡಿದ್ದರೂಅದನ್ನು ಮರೆಮಾಚಿ, ತಮ್ಮದೆಅಂಕವನ್ನು ನೀಡುವುದು ನಿರ್ಮಾಪಕರಿಗೆ ನಷ್ಟವಾಗುತ್ತದೆ.ಆರು ವರ್ಷಇದೇ ಸಿನಿಮಾಕ್ಕೆ ಸಮಯ ಮೀಸಲಿಡಲಾಗಿದೆ.ಒಳ್ಳೆ ಚಿತ್ರ ಮಾಡಿಕೆಟ್ಟ ಹೆಸರು ಬಂತು.ದುಡ್ಡುಕೊಡ್ತಿವಿ ಅಂದರೂಟಾಕೀಸ್‌ಕೊಡುತ್ತಿಲ್ಲ.

೨೦೦೨ರಲ್ಲಿ ನಂದಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ, ಅಲ್ಲಿಂದ ಹಲವು ಕಷ್ಟಕರ ಮಟ್ಟಿಲುಗಳನ್ನು ಏರಿಕೊಂಡು ‘ಜಯಮ್ಮನ ಮಗ’ ಚಿತ್ರಕ್ಕೆ ನಿರ್ದೇಶನ, ಪುನೀತ್‌ರಾಜ್‌ಕುಮಾರ್‌ಅಭಿನಯನ ‘ದೊಡ್ಮನೆ ಹುಡುಗ’ ಸಿನಿಮಾಕ್ಕೆಕತೆ, ಈಗ ಮೊದಲಬಾರಿ ನಾಯಕನಾಗಿ ನಟಿಸಿದ್ದೇನೆ. ಅಮೆಜಾನ್, ವಾಹಿನಿಗಳು ಖರೀದಿಸಲು ಮುಂದೆ ಬರುತ್ತಿಲ್ಲ. ನೀವುಗಳು ಕೈ ಬಿಟ್ಟರೆ ನಮ್ಮಂತವರುಕಾಣದಂತೆ ಮಾಯವಾಗುತ್ತಾರೆ. ಯಾರು ಹೇಳದ ಆತ್ಮದದೇಸಿ ಕತೆಯನ್ನು ಹಾಸ್ಯ, ಭಾವನೆಗಳ ಮೂಲಕ ತೋರಿಸಲಾಗಿತ್ತು.ಇಷ್ಟೆಲ್ಲಾ ಮಾಡಿದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆಎಂದು ಹೇಳುತ್ತಾ ಹೋದರು ವಿಕಾಸ್. ಇವರೊಂದಿಗೆಧರ್ಮಣ್ಣ, ನಂದಕುಮಾರ್ ಹಾಜರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,