ನಾನು ಬೇರೆ, ನನ್ನ ಸ್ಟೈಲೇ ಬೇರೆ
‘ನಾನೊಂಥರ’ ಗುಣದವರು ಮೇಲಿನಂತೆ ಹೇಳುತ್ತಿರುತ್ತಾರೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಜ್ಜಾಗಿದೆ.ಕತೆಯಲ್ಲಿಅಪ್ಪನನ್ನುಇಷ್ಟಪಟ್ಟರೆ ಪ್ರೀತಿ ಮಾಡುತ್ತಾನೆ. ಹುಡುಗಿಯನ್ನು ಲವ್ ಮಾಡಬೇಕು ಅನಿಸಿದರೆ ಅದರಲ್ಲೆ ಮುಂದುವರೆಯುತ್ತಾನೆ. ಕುಡಿಬೇಕುಎಂದುಕೊಂಡರೆ ಬಾರ್‌ಗೆ ಹೋಗುತ್ತಾನೆ. ಸಿಗರೇಟ್ ಸೇದಬೇಕೆಂಬ ಅಸೆ ಬಂದರೆದಂ ಎಳೆಯುತ್ತಾನೆ. ಇಂತಹ ವಿಶೇಷ ಗುಣಕಥಾನಾಯಕನಲ್ಲಿಇರುತ್ತದೆ. ಎಲ್ಲಾಚಿತ್ರದಲ್ಲಿಪ್ರಿಯತಮೆಸಿಗದೆ ಇದ್ದಾಗದೇವದಾಸಆಗುತ್ತಾನೆ. ಆದರೆಇದರಲ್ಲಿಕುಡುಕಆದ ನಂತರ ಹುಡುಗಿ ಬಂದರೆ ಹೆಂಗಿರುತ್ತೆ. ರೌಡಿಯಾಗ ಬೇಕಾದ ಹುಡುಗಇದ್ದಕ್ಕಿದ ಹಾಗೆ ಎಣ್ಣೆಚಟಕೆ ಬರಲುಕಾರಣವಾದರೂ ಏನು? ನೋಡುಗರಿಗೆಈತನು ಒಳ್ಳೆಯವನಾ?ಕೆಟ್ಟವನಾಅಂತಗೊಂದಲ ಹುಟ್ಟಿಸುತ್ತಾಕ್ಲೈಮಾಕ್ಸ್‌ದಲ್ಲಿಎಲ್ಲದಕ್ಕೂ ಸಮರ್ಥನೆಉತ್ತರವನ್ನು ನೀಡಲಾಗಿದೆ.ಜೊತೆಗೆಆತನು ಪ್ರತಿಯೊಂದರಲ್ಲಿ ಬದಲಾವಣೆಗೊಂಡಾಗಅದಕ್ಕೆಅನುಗುಣವಾಗಿ ಸಂದೇಶವನ್ನು ಹೇಳಲಾಗಿದೆ.
ಯು.ರಮೇಶ್‌ಕಗ್ಗಲ್ಲು ರಚಿಸಿ ನಿರ್ದೇಶನ ಮಾಡಿರುವುದುಎರಡನೇ ಅವಕಾಶ. ವೃತ್ತಿಯಲ್ಲಿಡಾಕ್ಟರ್‌ಆಗಿರುವತಾರಕ್.ವಿ.ಶರಣಪ್ಪ ನಾಯಕನಾಗಿಎರಡನೆಚಿತ್ರ. ಈತನತಂದೆಯಾಗಿದೇವರಾಜ್ ಬ್ಯಾಂಕ್ ಮ್ಯಾನೇಜರ್ ಪಾತ್ರ. ಶಕ್ತಿಶಾಲಿ ಮಹಿಳೆ, ನಾಯಕನನ್ನು ಸರಿದಾರಿಗೆಕರೆತರುವರಕ್ಷಿಕ ನಾಯಕಿ.ಎಸ್‌ಎನ್‌ಜೆ.ಸುನಿರಾಜ್ ಸಾಹಿತ್ಯದಆರು ಹಾಡುಗಳಿಗೆ ಸುನಿಲ್‌ಸ್ಯಾಮ್ಯುಲ್ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಸುದೀಪ್‌ಫೆಬ್ರಿಕ್, ಸಂಕಲನ ಸತೀಶ್‌ಚಂದ್ರಯ್ಯ ನಿರ್ವಹಿಸಿದ್ದಾರೆ. ಬೆಂಗಳೂರು ಮತ್ತುದೇವದುರ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಡಾ.ರಾಜ್‌ಕುಮಾರ್‌ಅಭಿನಯದ ‘ಧ್ರುವತಾರೆ’ ಚಿತ್ರದಲ್ಲಿ ಪ್ರೌಡಶಾಲೆ ವಿದ್ಯಾರ್ಥಿ.ಸದ್ಯಕಂಪರ್ಟ್ ಹಾಸ್ಪಿಟಲ್ ಎಂಡಿಆಗಿರುವಡಾ.ಜಾಕ್ಲಿನ್ ಫ್ರಾನ್ಸಿಸ್ ಮೊದಲ ಅನುಭವಎನ್ನುವಂತೆಚಿತ್ರಕ್ಕೆಆರ್ಥಿಕಇಂದನ ಒದಗಿಸಿದ್ದಾರೆ.ಜೊತೆಗೆಇವರ ಸುಪುತ್ರಜೈಸನ್ ನಾಯಕನತಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಇದೇ ಏಳರಂದು ಮುದ್ದೆಬಿಹಾಲ್‌ದಲ್ಲಿಧ್ವನಿಸಾಂದ್ರಿಕೆ ಜನಾರ್ಪಣೆಗೊಳ್ಳಲಿದ್ದು, ಮುಂದಿನ ತಿಂಗಳು ಜನರಿಗೆತೋರಿಸಲುತಂಡವುಯೋಜನೆ ರೂಪಿಸಿಕೊಂಡಿದೆ.