Ambani Puthra.Film Press Meet.

Monday, March 02, 2020

306

ಹಳ್ಳಿಯ ಅಂಬಾನಿ  ಪುತ್ರ

‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್‌ಅಂಬಾನಿ ನೆನಪಿಗೆ ಬರುತ್ತಾರೆ.ಆದರೆಇದೇ ಹೆಸರಿನಚಿತ್ರವುಅವರಕತೆಯಾಗಿರುವುದಿಲ್ಲ.  ಹಳ್ಳಿ ಕಡೆಗಳಲ್ಲಿ ದುಡ್ಡುಇದ್ದು,  ತಲೆತಿರುಗುತ್ತಿದ್ದರೆಆಡು ಭಾಷೆಯಲ್ಲಿಅಲ್ಲಿನಜನರು ಈ ಹೆಸರಿನಿಂದಲೇಕರೆಯುತ್ತಾರಂತೆ. ಅದರಂತೆಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ.  ಪ್ರಪಂಚ ನಡಿತಾಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತು ಕೆಲವೊಂದು  ನೈಜ ಘಟನೆಗಳನ್ನು  ಕಂಡಿದ್ದು-ಕೇಳಿದ್ದು-ನೋಡಿದ್ದುಎಂಬಂತೆಇಂತಹ ಅಂಶಗಳನ್ನು  ಸನ್ನಿವೇಶಕ್ಕೆ ಬಳಸಲಾಗಿದೆ. ಅಡಿಬರಹದಲ್ಲಿಓದಿರೋದು ಕಾ...ಸೂತ್ರ.... ವೆಂದು ಹೇಳಿಕೊಂಡಿದೆ.ಇದನ್ನುಕಾದಂಬರಿ, ಕಾಮಿಡಿಎಂಬುದನ್ನುತೀರ್ಮಾನ ಮಾಡಲುಜನರಿಗೆ ಬಿಡಲಾಗಿದೆ.ಚಿತ್ರರಂಗದಲ್ಲಿಅನುಭವ ಪಡೆದುಕೊಂಡಿರುವದೊರೆರಾಜ್‌ತೇಜಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಸಲ ನಿರ್ದೇಶನ ಮಾಡಿದ್ದಾರೆ.

ಬಿಇ ಮುಗಿಸಿರುವ ಸುಪ್ರೀಂ ನಾಯಕನಾಗಿ ಹೊಸ ಅನುಭವ. ಇಬ್ಬರು ನಾಯಕಿಯರುಇರಲಿದ್ದು,  ಮೂಲತ: ಡ್ಯಾನ್ಸರ್‌ಆಗಿರುವಆಶಾಭಂಡಾರಿ ಮುಗ್ದಹುಡುಗಿ. ಬೋಲ್ಡ್ ಆಗಿ ಮಾತಾಡುವಕಾವ್ಯ.ಉಳಿದಂತೆ ಪ್ರೀತಂಜೊತೆಗೆ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಹಾಸನ, ಮಂಡ್ಯಾ, ಹೊನ್ನಾವರ, ಮಹಾರಾಷ್ಟ್ರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಧುದೇವಲಾಪುರು, ರೋಹಿತ್‌ಆದಿತ್ಯ ಹಾಗೂ ನಿರ್ದೇಶಕರು ಬರೆದಿರುವಐದು ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕಅಭಿಮನ್‌ರಾಯ್ ಸಹೋದರಅಭಿಷೇಕ್‌ರಾಯ್ ಪ್ರಥಮ ಬಾರಿರಾಗ ಒದಗಿಸಿದ್ದಾರೆ.ಛಾಯಾಗ್ರಹಣ ವಿ.ರಾಮಾಂಜನೇಯ, ನೃತ್ಯ ಹೈಟ್ ಮಂಜು ನಿರ್ವಹಿಸಿದ್ದಾರೆ.  ಕತೆಇಷ್ಟಪಟ್ಟು ಮಕ್ಕಳಾದ ಸುಪ್ರೀಂ,ಪ್ರೀತಂ ಸಲುವಾಗಿ ನಿರ್ಮಾಣ ಮಾಡಿರುವ ಹಾಸನದವೆಂಕಟೇಶ್.ಕೆ.ಎನ್. ಪತ್ನಿ ಸುಮಿತ್ರಾ ಸಹ ನಿರ್ಮಾಪಕರು ಹಾಗೂ ವರುಣ್‌ಗೌಡ ಪಾಲುದಾರರು. ಅಂದಹಾಗೆಚಿತ್ರವು ಸದ್ಯದಲ್ಲೆತೆರೆಗೆ ಬರುವ ಸಾದ್ಯತೆಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,