Naragunda Bandaya.Film Audio Rel.

Monday, March 02, 2020

311

       

ರೈತರ ನರಗುಂದ ಬಂಡಾಯಚಿತ್ರವಾಗಿದೆ

        ನೈಜಘಟನೆಯು  ೧೯೮೦,  ನರಗುಂದ ಪ್ರದೇಶದಲ್ಲಿ  ನಡೆದಿತ್ತು.  ಯುವಕ ವೀರಪ್ಪಬಸೆಪ್ಪಕಡ್ಲಿಕೊಪ್ಪ ಪೋಲೀಸರಗುಂಡೇಟನ್ನು ಎದುರಿಸಿ ಸಿಂಹಪುರುಷ ಎನಿಸಿಕೊಂಡು ವೀರ ಮರಣಕ್ಕೆ ಶರಣಾಗಿದ್ದ.ಇದರಘಟನೆಯನ್ನು ಹೆಕ್ಕಿಕೊಂಡ ‘ನರಗುಂದ ಬಂಡಾಯ’ ಎನ್ನುವ ಸಿನಿಮಾವು ಘಟನೆಗಳು ನಡೆದ ಸ್ಥಳಗಳಾದ ನವಲಗುಂದ, ನರಗುಂದ, ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ.ಕತೆ ಬರೆದು ನಿರ್ಮಾಣ ಮಾಡುತ್ತಿರುವ ಸಿದ್ದೇಶ್‌ವಿರಕ್ತಮಠ ಹೇಳುವಂತೆ   ರೈತಾಪಿ ವರ್ಗದ ಸಮಸ್ಯೆ ಬಗೆಹರಿದಿಲ್ಲ. ಅಂದು ಗೋಲಿಬಾರ್‌ನಲ್ಲಿ ೨೩ ಹೆಣಗಳು  ಹುರುಳಿ  ಕರ್ನಾಟಕದಜಲಿಯನ್ ವಾಲಬಾಗ್‌ಆಗಿತ್ತು.  ಸದ್ಯ ಮಹದಾಯಿ ಹೋರಾಟ ನಡೆಯುತ್ತಿದ್ದು, ಇದನ್ನು ಸಹ ಬಳಸಿಕೊಳ್ಳಲಾಗಿದೆಎಂದರು.

ಪ್ರಚಲಿತಯುವಜನಾಂಗಕ್ಕೆ ನರಗುಂದ ವಿಷಯವು ತಿಳಿದಿಲ್ಲ.ಇದನ್ನು ನೋಡಿದ ಮೇಲೆ ಎಲ್ಲವುಗೊತ್ತಾಗುತ್ತದೆ.  ವೀರಪ್ಪ ಮಾತನಾಡಿದ ಶೈಲಿಯಲ್ಲಿಡೈಲಾಗ್ ಹೇಳಲಾಗಿದೆ. ನೀರಿಗಾಗಿ ಹೋರಾಟ ಮಾಡುವುದು ಮೂಲಭೂತ ಹಕ್ಕು.ಇದಕ್ಕೆ ನಾವುಗಳು ಬಂಡಾಯ, ಚಳುವಳಿ ಮಾಡುತ್ತಿದ್ದೇವೆಅಂತ ಪಾತ್ರದ ಪರಿಚಯ ಮಾಡಿಕೊಂಡರು ನಾಯಕರಕ್ಷ್.(ಹಿಂದಿನ ಹೆಸರುರಕ್ಷಿತ್).ಜಬರ್‌ದಸ್ತ್‌ಡೈಲಾಗ್‌ನ್ನುತೊಡೆತಟ್ಟಿಕೊಂಡು ಹೇಳಿರುವುದು ಖುಷಿಯಾಗಿದೆ. ಹಳ್ಳಿ ಹುಡುಗಿಯಾಗಿ ಪ್ರತಿಭೆತೋರಿಸಲು ಅವಕಾಶ ಸಿಕ್ಕಿದೆ. ಇದುರೈತರಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ವರ್ಗದವರು ನೋಡಲೇ ಬೇಕಾದಚಿತ್ರಎಂಬುದಾಗಿ ಬಣ್ಣಿಸಿಕೊಂಡಿದ್ದು ನಾಯಕಿ ಶುಭಾಪೂಂಜಾ.ನಾನು ನವಲಗುಂದ ಸ್ಥಳದಿಂದ ಬಂದವನಾಗಿದ್ದರಿಂದಚಿತ್ರಕ್ಕೆ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದ್ದು ಸುಕೃತಎನ್ನಬಹುದು.ಬಹುಶ: ಇದುಎರಡನೆ ಸಂಗೋಳ್ಳರಾಯಣ್ಣ ಆಗಲಿದೆ.ಅದರಲ್ಲಿಯುದ್ದ, ಇದರಲ್ಲಿ ಹೊಡೆದಾಟಇದೆಎನ್ನುತ್ತಾರೆ ನಾಗೇಂದ್ರಮಾಗಡಿ.

ತುಣುಕುಗಳಿಗೆ ಚಾಲನೆ ನೀಡಿದ ಡಾ.ಶಿವರಾಜ್‌ಕುಮಾರ್ ಮಾತನಾಡಿಉತ್ತರಕರ್ನಾಟಕ ಭಾಗದ ಸ್ಥಳಗಳಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದೇನೆ. ಟ್ರೈಲರ್‌ದಲ್ಲಿ ಪವರ್‌ಇದೆ. ರಕ್ಷ್‌ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವುಯಶಸ್ಸು ಗಳಿಸಲೆಂದು ಶುಭ ಹಾರೈಸಿದರು. ಕಲಾವಿದರಾದ ಭವ್ಯ, ನೀನಾಸಂಅಶ್ವಥ್, ಸುನಂದ, ಪಾಲುದಾರ ಶೇಖರ್‌ಹುಬ್ಳಿ, ಸಂಭಾಷಣೆಕೇಶಾವದಿತ್ಯ ಮುಂತಾದವರು ಉಪಸ್ತಿತರಿದ್ದರು.

 

 

Copyright@2018 Chitralahari | All Rights Reserved. Photo Journalist K.S. Mokshendra,