ಚಿತ್ರಮಂದಿರದಲ್ಲಿಶಿವಾರ್ಜುನಹಾಜರ್
ನಿರ್ಮಾಪಕ ಶಿವಾರ್ಜುನ, ನಿರ್ದೇಶಕ ಶಿವತೇಜಸ್, ಚಿತ್ರದ ಹೆಸರು ‘ಶಿವಾರ್ಜುನ’.ಸಿನಿಮಾದಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿದ್ದು ವೈರಲ್‌ಆಗಿದೆ.ಇಲ್ಲಿಯವರೆಗೂ ಮೂರು ಲಕ್ಷಜನರು ವೀಕ್ಷಣೆ ಮಾಡಿದ್ದಾರೆ.ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಮೊದಲ ಭಾಗವು ಬೇರೆತರಹಇರಲಿದ್ದು, ವಿರಾಮದ ನಂತರಕತೆಯು ಬೇರೆಯದೆರೂಪ ಪಡೆದುಕೊಳ್ಳುವುದು ವಿಶೇಷ. ನಾಯಕನಾಗಿಚಿರಂಜೀವಿಸರ್ಜಾ.ಸಂಪತ್ತಿಗೆ ಸವಾಲ್ ಮಂಜುಳಾರನ್ನು ನೆನಪಿಸುವ ಅಮೃತಅಯ್ಯಂಗಾರ್ ನಾಯಕಿ.ಉಪನಾಯಕಿಯರಾಗಿಅಕ್ಷತಾಶ್ರೀನಿವಾಸ್, ಅಕ್ಷಿತಾಭೂಪಯ್ಯಇವರೊಂದಿಗೆತಾರಾ ಹಾಗೂ ಇವರ ಸುಪುತ್ರ ಮಾಸ್ಟರ್ ಕೃಷ್ಣ ಮೊದಲ ಬಾರಿ ಬಣ್ಣ ಹಚ್ಚಿದ್ದಾನೆ. ತಾರಗಣದಲ್ಲಿಕಿಶೋರ್, ನಯನ, ಶಿವರಾಜ್.ಕೆ.ಆರ್.ಪೇಟೆ ಮುಂತಾದವರು ನಟಿಸಿದ್ದಾರೆ.
ಕವಿರಾಜ್ ಸಾಹಿತ್ಯದ ‘ಅಲ್ಲೋಂದು ನೀಲಿ ಬಾನು’ ರೊಮ್ಯಾಂಟಿಕ್‌ಗೀತೆಗೆನಟಿ ಮೇಘನರಾಜ್ ಹಾಡಿದ್ದು, ಸಾಧುಕೋಕಿಲ ಪುತ್ರರಾಗಒದಗಿಸುವ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಬಾಕಿ ಎರಡು ಹಾಡುಗಳಿಗೆ ಇವರತಂದೆಕಾಮಿಡಿ ಪಾತ್ರ ನಿರ್ವಹಿಸುವ ಜೊತೆಗೆ ಕೆಲಸ ಮಾಡಿದ್ದಾರೆ.ಕತೆಯ ಏಳೆಯನ್ನು ತಂಡವುಇಲ್ಲಿಯವರೆಗೂಗೌಪ್ಯವಾಗಿಟ್ಟಿದೆ.ಛಾಯಾಗ್ರಹಣ ಹೆಚ್.ಸಿ.ವೇಣು, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಡಾ.ರವಿವರ್ಮ-ವಿನೋಧ್‌ಅವರದಾಗಿದೆ. ಮೂರುದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿಕಾರ್ಯಕಾರಿ ನಿರ್ಮಾಪಕರಾಗಿಅನುಭವ ಪಡೆದುಕೊಂಡಿರುವ ಶಿವಾರ್ಜುನಅವರುಪುತ್ರಿ ನಿಶ್ಚಿತ ಕಂಬೈನ್ಸ್ ಮೂಲಕ, ಪತ್ನಿ ಎಂ.ಬಿ.ಮಂಜುಳಾಶಿವಾರ್ಜುನ್ ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಿನಿಮಾವು ಮಾರ್ಚ್ ೧೨ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.