ಇದೇ ಶುಕ್ರವಾರ ನರಗುಂದ ಬಂಡಾಯ ಬಿಡುಗಡೆ
ಶೇಖರ್ ಯಳುವಿಗಿ, ಹುಬ್ಬಳ್ಳಿ ಅರ್ಪಿಸುವ ಎಸ್ ಜಿ ವಿರಕ್ತಮಠ ಕಥೆ ಹಾಗೂ ನಿರ್ಮಾಣದ ಚಿತ್ರ ನರಗುಂದ ಬಂಡಾಯ’ ಹ್ಯಾಟ್ ಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ ಪಾಂಡು ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿದೆ.
ಓಂಕಾರ್ ಫಿಲ್ಮ್ಸ್ ಸಂಸ್ಥೆ ೧೯೮೦ ನಡೆದ ನೈಜ ಕಥೆ ಆಧಾರಿತ ಸಿನಿಮಾ ನರಗುಂದ ಬಂಡಾಯ’. ರೈತರು ತೆರಿಗೆ ಕಟ್ಟುವ ವಿಚಾರದಲ್ಲಿ ಬಂಡಾಯ ಮಾಡಿ ಸಿಡಿದೇಳುತ್ತಾರೆ.
ನವಲಗುಂದ ಹಾಗೂ ನರಗುಂದ ಸ್ಥಳಗಳಲ್ಲಿ ಚಿತ್ರೀಕರಣ ಸಹ ಮಾಡಲಾಗಿದೆ. ಆರ್ ಗಿರಿ ಹಾಗೂ ಆನಂದ್ ಎಸ್ ಪಿ ಛಾಯಾಗ್ರಹಣ ಮಾಡಿದ್ದಾರೆ. ಲಕ್ಷ್ಮಿ ನಾರಾಯಣ ಸಂಕಲನ, ಯಶೋವರ್ಧನ್ ಸಂಗೀತ, ಕೇಶವಾದಿತ್ಯ ಹಾಗೂ ರಾಮ್ ನಾರಾಯಣ್ ಕೆ ಸಂಭಾಷಣೆ ಬರೆದಿದ್ದಾರೆ. ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಿಂದ ರಕ್ಷ್ ಎಂಬ ನಾಯಕ ಹಿರಿ ತೆರೆಗೆ ಪರಿಚಯ ಆಗುತ್ತಿದ್ದಾರೆ. ಶುಭಾ ಪೂಂಜಾ, ಅವಿನಾಷ್, ಸಾಧು ಕೋಕಿಲ, ಭವ್ಯ, ಶಿವಕುಮಾರ್, ರವಿ ಚೇತನ್, ಸಿದ್ದರಾಜ ಕಲ್ಯಾಣ್ಕರ್, ನೀನಾಸಮ್ ಅಶ್ವಥ್, ಮೂಗು ಸುರೇಶ್ ಹಾಗೂ ಇತರರು ತಾರಗಣದಲ್ಲಿದ್ದಾರೆ.