The Checkmate.Film Song Shooting.

Monday, April 27, 2020

334

ಚೆಕ್ಮೇಟ್ - ಒಂದು ಹಾಡು ಅನಾವರಣ ಆಯಿತು

ಶ್ರೀ ಬಸವ ಜಯಂತಿ ಪ್ರಯುಕ್ತ ಜಗಜ್ಯೋತಿ ಮೂವಿ ಮೇಕರ್ಸ್ ‘ದ ಚೆಕ್‌ಮೇಟ್’ ಸಿನಿಮಾದ ಒಂದು ಹಾಡನ್ನು ಬೆಳಗ್ಗೆ ೧೧ ಗಂಟೆಗೆ ಆನಂದ್ ಆಡಿಯೋ ಯು ಟ್ಯೂಬ್ ಅಲ್ಲಿ ಬಿಡುಗಡೆ ಮಾಡಿದೆ. ಇದೊಂದು ಮಾಧುರ್ಯ ತುಂಬಿದ ಹಾಡು. ಬಿಡುಗಡೆ ಆದ ಕೆಲವು ಘಂಟೆಗಳಲ್ಲಿ ಸಾವಿರಾರು ವ್ಯಕ್ತಿಗಳು ಈ ಮಧುರ ಗೀತೆಯನ್ನು ಕೇಳಿದ್ದಾರೆ. ಈ ಹಾಡನ್ನು ಆಲಿಸಿದ ಪ್ರಸಿದ್ದ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ದೂರವಾಣಿ ಮುಖಾಂತರ ಮಾಧುರ್ಯಕ್ಕೆ ತಂಡವನ್ನು ಶ್ಲಾಘಿಸಿದ್ದಾರೆ.

‘ತಿರುಗಿ ತಿರುಗಿ ನೋಡು ಒಮ್ಮೆ ನನ್ನನ್ನು.... ಗೀತೆಯ ರಚನೆಕಾರ ಚಿತ್ರದ ನಿರ್ದೇಶಕರಲ್ಲಿ ಒಬ್ಬರಾದ ಭಾರತೀಶ ವಸಿಷ್ಠ. ಈ ಗೀತೆಯನ್ನು ಜನಪ್ರಿಯ ಗಾಯಕ ಶಷಾಂಕ್ ಶೇಷಗಿರಿ ಹಾಡಿದ್ದಾರೆ. ಈ ಚಿತ್ರಕ್ಕೆ ಅವರದೇ ಸಂಗೀತ ನಿರ್ದೇಶನ ಸಹ. ಇನ್ನೊಂದು ತೀಮ್ ಗೀತೆಯನ್ನು ಸಹ ಶಷಾಂಕ್ ಶೇಷಗಿರಿ ಹಾಡಿದ್ದಾರೆ. ಚಿತ್ರೀಕರಣ ಬೆಂಗಳೂರು ಸುತ್ತಮುತ್ತಲೇ ಮಾಡಿಕೊಂಡು, ಇತರೆ ಚಟುವಟಿಕೆ ಸಹ ಮುಗಿಸಿ ಸೆನ್ಸಾರ್ ಮುಂದೆ ಚಿತ್ರ ಇಡಲಾಗಿದೆ ಎಂದು ಚಿತ್ರದ ಕಥಾ ನಾಯಕ ಹಾಗೂ ನಿರ್ಮಾಪಕ ರಂಜನ್ ಹಾಸನ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ನಿರ್ದೇಶಕರುಗಳು ೫೮ ದಿವಸಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನವನ್ನು ಈ ಎಸ್ ಈಶ್ವರ್ ನಿರ್ವಹಿಸಿದ್ದಾರೆ. ವಯಲೆಂಟ್ ವೇಲು ಸಾಹಸ, ಪ್ರಮೋದ್ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.

ರಂಜನ್ ಹಾಸನ್ (ಈ ಹಿಂದೆ ಪಾರು ಐ ಲವ್ ಯು ಸಿನಿಮಾ ನಾಯಕ) ಜೊತೆ ನಾಯಕಿ ಆಗಿ ಪ್ರೀತು ಪೂಜಾ ಅಭಿನಯಿಸಿದ್ದಾರೆ. ಪೋಷಕ ಕಲಾವಿದರಲ್ಲಿ ಸರ್ದಾರ್ ಸತ್ಯ, ರಾಜಶೇಖರ್ (ಮಜಾ ಟಾಕೀಸ್ ಬರಹಗಾರ-ನಟ) ವಿಜಯ್ ಚೆಂಡುರ್, ನೀನಾಸಮ್ ಅಶ್ವಥ್, ಸುಧಿ ಕಾಕ್ರೋಚ್, ವಿಶ್ವ ವಿಜೇತ್, ಪ್ರದೀಪ್ ಪೂಜಾರಿ, ಮಜಾ ಟಾಕೀಸ್ ಹರಿ ಕಾರ್ತಿಕ್, ಕಿಲ್ಲರ್ ಮಂಜ ಹಾಗೂ ಇತರರು ಇದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,