ಪ್ರತಿಯೊಬ್ಬರಿಗೂಅಂತ್ಯವಿರುವಂತೆಆರಂಭವುಇರುತ್ತದೆ
ಸುಂದರ ಸಾಮಾಜಿಕ, ಸಾಂಸರಿಕ, ಸದಭಿರುಚಿಯ,ಸಂದೇಶಸಹಿತ, ಕುತೂಹಲಕಾರಿ ಪ್ರೇಮಕಥಾನಕ ‘ಅಂತ್ಯವಲ್ಲಆರಂಭ’ ಚಿತ್ರವೆಂದು ನಿರ್ದೇಶಕರಲ್ಲಿಒಬ್ಬರಾದ ಡಾ.ಎನ್.ಬಿ.ಜಯಪ್ರಕಾಶ್ ಬಣ್ಣಸಿಕೊಳ್ಳುತ್ತಾರೆ. ಜೊತೆಗೆಯಕ್ಷಗಾನಕಲಾವಿದನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಗರ್ಭ ಶ್ರೀಮಂತ, ಹಾಗೆಯೇ ಮಹಾ ಜಿಪುಣನಾಗಿ ಸಂಚಾರಿವಿಜಯ್ ನಾಯಕ.ಪತ್ನಿಯಾಗಿ ಶೃತಿಹರಿಹರನ್ ನಾಯಕಿ.ತಾರಗಣದಲ್ಲಿ ನರಸಿಂಹರಾಜು ಮೊಮ್ಮಗ ವೆಂಕಟರಾಜು, ಶಿಶರ್, ಹರ್ಷ, ನಚಿಕೇತನ್, ದೀಪಕ್ ಮತ್ತು ಹಲವು ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಶೇಕಡ ೮೦ರಷ್ಟು ಚಿತ್ರೀಕರಣ ಸಾಗರ, ಉಳಿದಂತೆ ಬೆಂಗಳೂರು ಸುತ್ತಮುತ್ತ ಸ್ಥಳಗಳನ್ನು ಸೆರೆಹಿಡಿಯಲಾಗಿದೆ. ವಸುಮತಿಉಡುಪ ಸಂಭಾಷಣೆ ಮತ್ತು ಸಾಹಿತ್ಯದಐದು ಹಾಡುಗಳಿಗೆ ಸುಹಾಸ್ ಸಂಗೀತ ಸಂಯೋಜಿಸಿದ್ದಾರೆ. ಹಿನ್ನಲೆ ಶಬ್ದ ಶೇಡ್ರ್ಯಾಕ್‌ಸಾಲೋಮನ್, ಸಂಕಲನ ಸುರೇಶ್‌ಅರಸ್, ಛಾಯಾಗ್ರಹಣ ನಾಗೇಶ್‌ಆಚಾರ್ಯ-ಮಲ್ಲಿಕಾರ್ಜುನ, ನೃತ್ಯ ಮದನ್-ಹರಿಣಿ, ಕತೆಗೆಟಿ.ಕೆ.ಜಯರಾಂ ಪೆನ್ನು ಕೆಲಸ ಮಾಡಿದೆ.
ಕತೆಯಲ್ಲಿದಂಪತಿಗಳ ಸಂಬಂದಚೆನ್ನಾಗಿರುತ್ತದೆ.ಆದರೆ ಪ್ರೀತಿ, ಪ್ರೇಮಇರುವುದಿಲ್ಲ. ಮುಂದೆಇಬ್ಬರಿಗೂತೊಂದರೆ ಶುರುವಾಗುತ್ತದೆ.
ಕುಟುಂಬದಲ್ಲಿಎಲ್ಲರಿಗೂಇರುವಂತಹಜ್ವಲಂತ ಸಮಸ್ಯೆಇಬ್ಬರನ್ನುಕಾಡುತ್ತಾ ಹೋಗುತ್ತದೆ, ಕೊನೆಗೆ ಅದುಎಲ್ಲಿಗೆ ಹೋಗಿ ತಲುಪುತ್ತದೆಎಂಬುದಕ್ಕೆಉತ್ತರ ಸಿನಿಮಾ ನೋಡಿದರೆ ತಿಳಿಯುತ್ತದಂತೆ. ಯಾವುದಕ್ಕೂ ಕೊನೆ ಎಂಬುದುಇರುವುದಿಲ್ಲ. ಎಲ್ಲದಕ್ಕೂಒಂದು ಪ್ರಾರಂಭವಿರುತ್ತದೆಎಂಬುದನ್ನು ಸನ್ನಿವೇಶಗಳ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಹೆಚ್ಚಾಗಿ ಪರೀಕ್ಷೆಯಲ್ಲಿಅನುತ್ತೀರ್ಣರಾದ ವಿದ್ಯಾರ್ಥಿಗಳು, ಉದ್ಯಮದಲ್ಲಿ ನಷ್ಟ ಅನುಭವಿಸಿದಾಗ, ಜೀವನದಲ್ಲಿಜಗುಪ್ಸೆಕಂಡಾಗ, ಪ್ರೇಮ ವಿಪುಲ ಆದಾಗ,ಇಂತಹ ಸ್ಥಿತಿಯಲ್ಲಿರುವವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಣಯ ತೆಗೆದುಕೊಳ್ಳುತ್ತಾರೆ. ಸತ್ತವರಿಗೆಆರಂಭವಿಲ್ಲದಿದ್ದರೂ, ಇಂತಹವರಿಗೆ ಮತ್ತೆ ಶುಭಾರಂಭಇರುತ್ತದೆಂದು ಸಂದೇಶದಲ್ಲಿಅರ್ಥಪೂರ್ಣವಾಗಿ ಹೇಳಲಾಗಿದೆ.
ನಡಹಳ್ಳಿಶ್ರೀಪಾದರಾವ್ ನಿರ್ದೇಶನದಲ್ಲಿ ಕೈ ಜೋಡಿಸಿದ್ದಾರೆ.ಐದಾರು ಚಿತ್ರಗಳ ನಿರ್ಮಾಣ, ೧೫೦೦ ಕ್ಕೂ ಹೆಚ್ಚು ಧಾರವಾಹಿಗಳಿಗೆ ಬಂಡವಾಳ ಹೂಡಿರುವಗಣೇಶ್‌ಕುಮಾರ್‌ಗ್ಯಾಪ್ ನಂತರ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.ಇವರು ಹೇಳುವಂತೆ ಲಯನ್ಸ್‌ಕ್ಲಬ್, ಟೆಕ್ಕಿ ಕಂಪೆನಿಗಳನ್ನು ಭೇಟಿ ಮಾಡಿಅವರಿಗೆ ನಾಲ್ಕೈದು ಪ್ರದರ್ಶನ ಆಗುವಷ್ಡು ಟಿಕೆಟ್‌ಗಳನ್ನು ಕೊಡುವುದು. ಗಳಿಕೆಯಲ್ಲಿ ಇಂತಿಷ್ಟು ಹಣವನ್ನುಅವರಿಗೆ ನೀಡಲಾಗುವುದು. ಈ ಯೋಜನೆ ಪಲಪ್ರಧವಾಗಿದೆಎನ್ನುತ್ತಾರೆ. ಪ್ರಚಾರದ ಹಂತವಾಗಿಧ್ವನಿಸಾಂದ್ರಿಕೆಜನಾರ್ಪಣೆಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿಇಬ್ಬರು ದೇವದಾಸಿಯನ್ನು ಗೌರವಿಸಲಾಯಿತು. ಶಿವನಗೌಡ.ಎಸ್.ನಾಗನಗೌಡರ್ ಮತ್ತುಉಮೇಶ್.ಎಂ.ಶಿರಹಟ್ಟಿ ಸಹ ನಿರ್ಮಾಪಕರಾಗಿರುವಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆಇದೆ.