Directors Film Bazaar.Press Meet.

Monday, March 09, 2020

1029

ಇನ್ಮುಂದೆಕನ್ನಡ  ಸಿನಿಮಾಗಳಿಗೂ  ಡಬ್ಬಿಂಗ್ನಿಂದ  ವರಮಾನ

ಭಾರತದಲ್ಲಿ ಮೊಟ್ಟ ಮೊದಲಬಾರಿ ‘ಡೈರಕ್ಟರ‍್ಸ್ ಫಿಲಿಂ ಬಜಾರ್’ನ್ನು ಬೆಂಗಳೂರು ಅಂತರಾಷ್ಟ್ರೀಯಚಿತ್ರೋತ್ಸವದಲ್ಲಿಆರಂಭಿಸಲಾಗಿತ್ತು.ಈ ಮೂಲಕ ನಮ್ಮ ಭಾಷೆಯ ಚಿತ್ರಗಳಿಗೆ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಡುವ ನಿರ್ದೇಶಕ ಸಂಘದ ಮೊದಲ ಪ್ರಯತ್ನ ಯಶಸ್ವಿಯಾಗಿದೆ.ಇದರಕುರಿತಂತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರ ಸಂಘದಅಧ್ಯಕ್ಷ ಟೀಶಿ.ವೆಂಕಟೇಶ್ ಇಲ್ಲಿಯವರೆಗೂ ೨೫೦ ಚಿತ್ರಗಳು ನೊಂದಣಿಯಾಗಿದೆ.ವಿದೇಶಿ ಸಿನಿಮಾಪಂಡಿತರು ಆಗಮಿಸಿದ್ದು ವಿಶೇಷವಾಗಿತ್ತು.ತಮಿಳುನಾಡು, ಕೇರಳ, ಆಂಧ್ರ ಕಡೆಗಳಲ್ಲಿ ಕನ್ನಡಚಿತ್ರರಂಗ ಬಗ್ಗೆ ಮಾತನಾಡಿದ್ದಾರೆ. ಕೆಲವು ವಿದೇಶಿಗರು ಅಲ್ಲಿನ ಭಾಷೆಗೆ ಮಾಡಿಕೊಡುವುದಾದರೆಖರೀದಿ ಮಾಡುತ್ತವೆಂದು ತಿಳಿಸಿದ್ದಾರೆ. ಮಾಲಿವುಡ್‌ನವರುಇನ್ನು ಮುಂದೆ ಒಳ್ಳೆಯ ಅಂಶವಿರುವಯಾವುದೇ ಸಿನಿಮಾಅಂತನೋಡದೆಡಬ್ಬಿಂಗ್ ಮಾಡಿ ಬಿಡುಗಡೆ ಮಾಡಲಾಗುವುದೆಂದು ತಿಳಿಸಿದ್ದಾರೆ. 

ಇದರಿಂದಡಸ್ಟ್‌ಬಿನ್‌ದಲ್ಲಿರುವ ಚಿತ್ರಗಳಿಗೂ ತಿಂಗಳಿಗೆ ವರಮಾನ ಬರುವಂತೆ ಮಾಡುವುದೇ ನಮ್ಮ ಬಜಾರ್‌ನಉದ್ದೇಶವಾಗಿದೆ.

ಇದಕ್ಕೆಯಾವುದೇ ಅಂಗ ಸಂಸ್ಥೆಯ ನೆರವು ಪಡೆದಿಲ್ಲ. ನೇರವಾಗಿ ನಮ್ಮ ಸಂಘವು ಸ್ವತಂತ್ರವಾಗಿಎಲ್ಲವನ್ನು ನಿಭಾಯಿಸುತ್ತಿದೆ.ಒಂದುಚಿತ್ರದ ನಿರ್ಮಾಪಕನಿಗೆ ಲಾಸ್‌ಆಗದಂತೆ ಕನಿಷ್ಟವಾದರೂ ಹಣ ಸಿಗುವಂತೆ ಮಾಡಬೇಕು.ಇದರ ಯಶಸ್ವಿಯಿಂದ ನಾಲ್ಕು ತಿಂಗಳಿಗೊಮ್ಮೆ ಬಜಾರ್ ಮಾಡಲು ನಿರ್ಧರಿಸಲಾಗಿದೆ.ವ್ಯಾಪಾರವಾದಚಿತ್ರದ ನಿರ್ಮಾಪಕರಿಂದ ಸಂಘದಖರ್ಚಿಗಾಗಿಒಂದಷ್ಟು ಸೇವಾಶುಲ್ಕವನ್ನು ಪಡೆಯಲಾಗುವುದು.ನೊಂದಣಿಗೆಯಾವುದೇ ಶುಲ್ಕವಿರುವುದಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾದರೈಟ್ಟ್ ವಿಷಯದಲ್ಲಿ ಪತ್ರ ವ್ಯವಹಾರ ಮಾಡಲಾಗುವುದು.ಪ್ರತಿ ಸಿನಿಮಾಗೂಅದರದೇಆದಗುಣಮಟ್ಟ, ಯೋಗ್ಯತೆಅನುಗುಣವಾಗಿಆಯಾ ನಿರ್ಮಾಪಕರಿಗೆ ಹಣ ಸಿಗುತ್ತದೆ.ಇದನ್ನುಇಲ್ಲಿಗೆ ನಿಲ್ಲಿಸದೆ ವಿಶ್ವ ಮಾರುಕಟ್ಟೆಯಲ್ಲಿಕನ್ನಡ ಚಿತ್ರಗಳು ಪ್ರಚಾರ, ವ್ಯಾಪಾರಆಗಬೇಕೆಂಬುದು ಸಂಘದ ಮುಖ್ಯಗುರಿಯಾಗಿದೆಎಂದರು.ಇದೇ ಸಮಯದಲ್ಲಿ ಸಂಘದ ಸದಸ್ಯರುಗಳು ಉಪಸ್ತಿತರಿದ್ದು ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,