Melobba Mayavi.Film News.

Wednesday, June 24, 2020

440

`ಮೇಲೊಬ್ಬ ಮಾಯವಿ’ಗೆ ಸೆನ್ಸಾರ್ ಅಸ್ತು

ಅ್ಯಕ್ರೊಮೊಟಾಪ್ಸಿಯಾ (Achromatopsia) ನ್ಯೂನತೆ ಮತ್ತು ಹಲವು ಸಾವು-ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಹೆಸರಿನ ‘ಮೇಲೊಬ್ಬ ಮಾಯಾವಿ’ ಚಿತ್ರವನ್ನು ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ಕಟ್ ನೀಡದೆ,  ಸೌಂಡ್ ಮ್ಯೂಟ್ ಸಹ ನೀಡದೆ ‘ಎ’ ಪ್ರಮಾಣಪತ್ರ ನೀಡಿದ್ದಾರೆ.

‘ಜನುಮದ ಜೋಡಿ’ಯ ಕೋಲುಮಂಡೆ ಜಂಗಮದೇವ ಹಾಡಿನ ಮೂಲಕ ಖ್ಯಾತರಾಗಿದ್ದ ಗಾಯಕ, ಸಂಗೀತ ಸಂಯೋಜಕ, ರಾಜ್ಯ ಪ್ರಶಸ್ತಿ ವಿಜೇತ ದಿ:ಎಲ್.ಎನ್.ಶಾಸ್ತ್ರೀ ಅವರು ಮ್ಯೂಸಿಕ್ ಕಂಪೋಸ್ ಮಾಡಿ ‘ಕಳ್ಳಕೊಳಲ ಹಿಡಿದವನೊಬ್ಬ ಗೋಪಾಲ’ ಗೀತೆಗೆ ಧ್ವನಿಯಾಗಿದ ಕೊನೆಯ ಚಿತ್ರವೆಂದು ಹೇಳಿಕೊಳ್ಳಲು ಖೇದ ಅನಿಸುತ್ತದೆ. ಸಿನಿಮಾ ಪತ್ರಕರ್ತ ಬಿ.ನವೀನ್ಕೃೆಷ್ಣ ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಹಿನ್ನಲೆ ಸಂಗೀತವಿದ್ದು, ಉಪೇಂದ್ರ ನಿರ್ದೇಶನದ `ಓಂ’ ಚಿತ್ರಕ್ಕೆ ಸಹಾಯಕ ಸಂಕಲನಕಾರರಾಗಿದ್ದ ಕೆ.ಗಿರೀಶ್ ಕುಮಾರ್ ಸಂಕಲನ ಮಾಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ದೀಪಿತ್ ಹೊತ್ತಿದ್ದರೆ, ನೃತ್ಯ ಸಂಯೋಜನಯನ್ನು ರಾಮು ಮಾಡಿದ್ದಾರೆ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಿತ್ರದ ನಾಯಕನಾದರೆ, ಅನನ್ಯ ಶೆಟ್ಟಿ ನಾಯಕಿಯಾಗಿ ಅಭಿನಯಕ್ಕೆ ಸವಾಲಾಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ಪತ್ರಕರ್ತ, ಚಿಂತಕ, ಚಕ್ರವರ್ತಿಚಂದ್ರಚೂಡ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರಕ್ಕೆ ಚಿತ್ರಕಥೆ,ಸಾಹಿತ್ಯ,ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಕೃಷ್ಣಮೂರ್ತಿಕವತ್ತಾರ್, ಎಂ.ಕೆ.ಮಠ, ಬೆನಕ ನಂಜಪ್ಪ, ನವೀನ್ಕು ಮಾರ್, ಲಕ್ಷೀಅರ್ಪಣ್, ಪವಿತ್ರಾ ಜಯರಾಮ್, ಮುಖೇಶ್ ಮುಂತಾದವರು ನಟಿಸಿದ್ದಾರೆ. ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ಜಂಟಿಯಾಗಿ ಶ್ರೀಕಟೀಲ್ ಸಿನಿಮಾಸ್ ಮೂಲಕ ನಿರ್ಮಾಣ ಮಾಡಿರುವುದು ಪ್ರಥಮ ಅನುಭವ.

Copyright@2018 Chitralahari | All Rights Reserved. Photo Journalist K.S. Mokshendra,