ವಿಷಯ: ಹಿರಿಯ ಚಲನಚಿತ್ರ ಪತ್ರಕರ್ತರಾದ ಶ್ರೀ ಗಣೇಶ್ ಕಾಸರಗೋಡು ಅವರ ಪ್ರಸಿದ್ಧ ಚಲನಚಿತ್ರ ಕೃತಿ “ಶುಭಂ” ಧ್ವನಿರೂಪದ ಅಳವಡಿಕೆಯನ್ನು ‘ಚಿತ್ತಾರ’ ಯೂಟ್ಯೂಬ ನಿರ್ಮಿಸಿ ಪ್ರಸಾರ ಮಾಡುವ ಕುರಿತಂತೆ.
ಕನ್ನಡ ಚಲನಚಿತ್ರ ರಸಿಕರ ಮನಗೆದ್ದ ಪತ್ರಿಕೆ ‘ಚಿತ್ತಾರ’ಕ್ಕೆ ಈಗ ಹನ್ನೊಂದು ವರ್ಷದ ಪ್ರಾಯ. ಈ ಅವಧಿಯಲ್ಲಿ ಹಲವಾರು ಏಳುಬೀಳುಗಳ ಮಧ್ಯೆ ‘ಚಿತ್ತಾರ’ ಪತ್ರಿಕೆಯು ಕನ್ನಡ ಚಿತ್ರರಂಗದ ಇತಿಹಾಸ. ಪ್ರಸ್ತುತ ವಿದ್ಯಾಮಾಗಳು ಸೇರಿದಂತೆ ವರದಿ, ವಿವರಣೆಗಳೊಂದಿಗೆ ಚಿತ್ರಾಕರ್ಷಕ ಛಾಯಾಚಿತ್ರಗಳ ಸಮೇತ ತಿಂಗಳಿಗೊಮ್ಮೆ ಪ್ರಕಟಿಸಿ ‘ಚಿತ್ತಾರ’ ಪತ್ರಿಕೆಯನ್ನು ಓದುಗರಿಗೆ ಸಮರ್ಪಿಸಿಕೊಂಡು ಬರುತ್ತಿದೆ. ಪತ್ರಿಕೆಯ ಅಭಿರುಚಿಯನ್ನು ಪ್ರೋತ್ಸಾಹಿಸುತ್ತಿರುವ ಓದುಗರಿಗೆ ನಿತ್ಯ ನೂತನವಾಗಿ ಏನಾದರೊಂದು ಕೊಡುತ್ತಿರಬೇಕೆಂಬ ಉಮೇದು ‘ಚಿತ್ತಾರ’ ಪತ್ರಿಕೆಯ ಬಳಗದ್ದು. ಈ ಹಿನ್ನಲೆಯಲ್ಲಿ ಪತ್ರಿಕೆಯ ಜೊತೆಗೆ ‘ಚಿತ್ತಾರ ಯೂಟ್ಯೂಬ್’ ಚಾನೆಲ್ ಲೋಕಾರ್ಪಣೆಯಾಗಿ ಹಲವು ಪ್ರಯೋಗಗಳನ್ನು ಮಾಡುತ್ತಿದೆ.
ಪ್ರಸ್ತುತ ಈಗ ಕನ್ನಡ ಚಲನಚಿತ್ರರಂಗದ ಹೆಸರಾಂತ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರ ರಚನೆಯ ಕೃತಿ ‘ಶುಭಂ’ ಬಿಡುಗಡೆಯಾಗಿ ಮಾರಾಟದಲ್ಲಿ ಹೊಸದಾಖಲೆಯನ್ನು ನಿರ್ಮಿಸಿರುವುದು ತಮಗೆಲ್ಲಾ ತಿಳಿದಿದೆ. ಈ ಪುಸ್ತಕವನ್ನು ಧ್ವನಿರೂಪದಲ್ಲಿ ಅಳವಡಿಸಿ ‘ಚಿತ್ತಾರ ಯೂಟ್ಯೂಬ್ ಚಾನೆಲ್ ಮುಖೇನ ಕನ್ನಡ ಚಲನಚಿತ್ರ ಪ್ರೇಮಿಗಳಿಗೆ ಪುಸ್ತಕದ ಸವಿ ಸವಿಯಲು ಕೇಳುಗರಿಗೆ ಸಮರ್ಪಿಸುತ್ತ್ತಿದೆ. ಕೆ. ಶಿವಕುಮಾರ್ ನಿರ್ದೇಶನದಲ್ಲಿ, ಚಲನಚಿತ್ರ ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಬಿ.ನವೀನಕೃಷ್ಣ ಪರಿಕಲ್ಪನೆಯಲ್ಲಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಆರ್. ವೆಂಕಟರಾಜು ಧ್ವನಿ ನಿರೂಪಣೆ ಇದೆ.
ಈಗಾಗಲೇ ‘ಶುಭಂ’ ಧ್ವನಿ ಪುಸ್ತಕದ ಟೀಸರ್‌ಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ಚಿತ್ರರಂಗದಲ್ಲಿ ಹೊಸಬೆರಗನ್ನು, ಕಾತರವನ್ನು ಮೂಡಿಸಿದೆ. ಪ್ರತಿ ಸೋಮವಾರ ಸಂಜೆ ೬ ಗಂಟೆಗೆ ಹಾಗೂ ಗುರುವಾರ ಸಂಜೆ ೬ಕ್ಕೆ ಸರಿಯಾಗಿ ‘ಚಿತ್ತಾರ ಯುಟ್ಯೂಬ್’ ಚಾನೆಲ್ ಮುಖಾಂತರ ‘ಶುಭಂ’ ಧ್ವನಿ ಪುಸ್ತಕವನ್ನು ಚಿತ್ರರಸಿಕರು ಆಸ್ವಾದಿಸಬಹುದಾಗಿz. ಈ ನೂತನ ಪ್ರಯೋಗದ ಕುರಿತ ಸಂಪೂರ್ಣ ವಿವರಣೆಯನ್ನು ತಮ್ಮ ಘನಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹ ನೀಡಬೇಕೆಂದು ಕಳಕಳಿಯ ಮನವಿ ಮಾಡುತ್ತಿದ್ದೇವೆ.