"Amit Poojari(Prod).News

Wednesday, July 15, 2020

1066

ಹೃದಯವಂತ ನಿರ್ಮಾಪಕ ಅಮಿತ್ ಪೂಜಾರಿ .

 

ಕೊರೋನ ಹಾವಾಳಿಯಿಂದ ಕನ್ನಡ ಚಿತ್ರರಂಗಕ್ಕೆ ಆಗಿರುವ ನಷ್ಟ ಹಾಗೂ ಚಿತ್ರರಂಗವನ್ನೆ ನಂಬಿಕೊಂಡಿರುವ ಸಾಕಷ್ಟು ಜನರ ಕಷ್ಟ ಹೇಳತೀರಲಾಗದು.

ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ನೋವಿಗೆ ಸ್ಪಂದಿಸುವ ಮನೋಭಾವವುಳ್ಳ ಕೆಲವೆ ವ್ಯಕ್ತಿಗಳಲ್ಲಿ ನಿರ್ಮಾಪಕ ಅಮಿತ್‌ ಪೂಜಾರಿ ಕೂಡ ಒಬ್ಬರು.

ಕಳೆದವರ್ಷ ರವಿತೇಜ ನಿರ್ದೇಶನದಲ್ಲಿ ಮೂಡಿಬಂದಿದ್ದ  ಸಾಗುತಾದೂರದೂರ ಎಂಬ ಯಶಸ್ವ ಚಿತ್ರವನ್ನು ಖುಷಿ ಕನಸು ಕ್ರಿಯೇಷನ್ಸ್ ಲಾಂಛನದಲ್ಲಿ ಅಮಿತ್ ಪೂಜಾರಿ ನಿರ್ಮಿಸಿದ್ದರು.

ಚಿತ್ರ ಬಿಡುಗಡೆಯಾದ ಮೇಲೆ ತಮ್ಮಷ್ಟಕ್ಕೆ  ತಾವಿರುವ ನಿರ್ಮಾಪಕರು ಹೆಚ್ಚು. ಆದರೆ ಅಮಿತ್ ಪೂಜಾರಿ ಅವರು ಹಾಗಲ್ಲ. ಲಾಕ್ ಡೌನ್ ನಂತಹ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇವರ ಈ ಸದ್ಗುಣಕ್ಕೆ ಸಾಗುತಾದೂರದೂರ ಚಿತ್ರದ ನಿರ್ದೇಶಕ ರವಿತೇಜ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ಡಾ||ರಾಜಕುಮಾರ ಅವರ ಅಪ್ಪಟ ಅಭಿಮಾನಿಯಾಗಿರುವ ಅಮಿತ್ ಪೂಜಾರಿ ಅವರಿಗೆ ಅಣ್ಣವ್ರ ಕಾಲದಲ್ಲಿ ಬರತ್ತಿದ್ದ ಕೌಟುಂಬಿಕ ಹಾಗೂ ಸಾಮಾಜಿಕ ಚಿತ್ರಗಳ ರೀತಿಯಲ್ಲಿ ಈಗ ಚಿತ್ರಗಳನ್ನು ನಿರ್ಮಿಸುವ ಇರಾದೆ ಇದೆಯಂತೆ.

ಜುಲೈ 17 ಅಮಿತ್ ಪೂಜಾರಿ ಅವರ ಹುಟ್ಟುಹಬ್ಬ. ಇಂತಹ ಹೃದಯವಂತ ನಿರ್ಮಾಪಕನಿಗೆ ಸಾಗುತಾದೂರದೂರ ಚಿತ್ರತಂಡ ಶುಭಾಶಯ ತಿಳಿಸಿದೆ.

Copyright@2018 Chitralahari | All Rights Reserved. Photo Journalist K.S. Mokshendra,