ಕರ್ನಾಟಕ ಚಲನಚಿತ್ರ ಅಕಾಡಮಿ ನೂತನ ಅಧ್ಯಕ್ಷ ನಾಗತ್ತಿಹಳ್ಳಿ ಚಂದ್ರಶೇಖರ್ ಅವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಗೌರವತಿಸಿತು. ಸಮಾರಂಭದಲ್ಲಿ ಮಂಡಳಿ ಸದಸ್ಯರುಗಳು ನೀಡಿದ ಸಲಹೆ, ಕೋರಿಕೆಯನ್ನು ಆಲಿಸಿದ ಅಧ್ಯಕ್ಷರು ಮಿತವ್ಯಯವಾಗಿ ನಿರ್ಮಾಪಕರಿಗೆ ಅನುಕೂಲವಾಗುವಂತೆ ಚಿತ್ರೀಕರಣ ನಡೆಸಲು ಸರ್ಕಾರಿಂದ ನೀತಿ, ನಿಯಾಮಾವಳಿಗಳನ್ನು ರೂಪಿಸುವುದು. ಮಿನಿ ಚಿತ್ರಮಂದಿರ ರಾಜ್ಯಾದ್ಯಂತ ಆಗಬೇಕಾಗಿದೆ. ಆದರೆ ಸರ್ಕಾರವು ರೂಪಿಸಿರುವ ನಿಯಾಮಗಳಿಂದ ಜನತಾ ಚಿತ್ರಮಂದಿರ ನಿರ್ಮಾಣ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಬಾರಿ ಕಮರ್ಷಿಯಲ್ ಚಿತ್ರಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಇದರ ....