Attyuttama.Film Reviews

Friday, May 13, 2022

351

ಸಂಬಂದಗಳು ಸರಿಇದ್ದರೆಎಲ್ಲವುಚೆನ್ನಾಗಿರುತ್ತದೆ

ಪತಿ-ಪತ್ನಿ ಸಂಬಂದದಲ್ಲಿ ಏನೇ ಕಷ್ಟ ಬಂದರೂ ಸರಿದೂಗಿಸಿಕೊಂಡು ಹೋದರೆ ಸಂಸಾರ ಸಾಗರ ಸುಖಮಯವಾಗಿರುತ್ತದೆ.ಇಬ್ಬರ ಮನಸ್ಸುಒಂದೊಂದು ದಿಕ್ಕಿಗೆ ಸಾಗಿದರೆಅಲ್ಲೋಲ ಕಲ್ಲೋಲವಾಗುತ್ತದೆ.ಇಂತಹ ಅಂಶಗಳನ್ನು ಹೆಕ್ಕಿಕೊಂಡು ಶಿವಕುಮಾರ್.ಬಿ.ಜೀವರಗಿ ನಿರ್ದೇಶನ ಮಾಡುವಜತೆಗೆ ನಾಯಕನಾಗಿಎರಡು ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಕುಟುಂಬವೊಂದರಲ್ಲಿ ನಡೆಯುವಕಥೆಯಲ್ಲಿ, ಸುಂದರವಾಗಿ ಸಾಗುತ್ತಿರುವ ಸಂಸಾರದಲ್ಲಿ ಪತಿ,ಪತ್ನಿಯ ನಡುವೆಧೋರಣೆಅನ್ನುವುದು ಎಂದಿಗೂ ಬರಬಾರದು. ಅದು ಬಂದಾಗ ಹೇಗೆ ಅವರಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗುತ್ತೆ. ಮುಂದೆಅದು  ವಿಚ್ಚೇದನ  ಹಂತಕ್ಕೂತೆಗೆದುಕೊಂಡು ಹೋಗುತ್ತದೆ. 

ತಂದೆತಾಯಿ ಬೇರೆಆದಾಗ ಮಕ್ಕಳ ಮನಸ್ಸುಯಾವರೀತಿ ಘಾಸಿಗೊಳಿಸುತ್ತದೆ. ಅಂತಿಮವಾಗಿಇಬ್ಬರುಒಂದಾದರೇಇಲ್ಲವೆಎಂಬುದನ್ನು ತಿಳಿಯಲು ಚಿತ್ರ ನೋಡಬೇಕು.ನಾಯಕನ ಮಾವನಾಗಿಜೈಜಗದೀಶ್, ಅತ್ತೆಯಾಗಿ ಪದ್ಮವಾಸಂತಿ, ತಂದೆಯಾಗಿಉಮೇಶ್‌ಇವರೊಂದಿಗೆ ಶಂಕರಭಟ್, ಗಣೇಶ್‌ರಾವ್‌ಕೇಸರಕರ್, ಮೀಸೆಆಂಜನಪ್ಪ, ವಿಕ್ಟರಿವಾಸು, ರಾಘವೇಂದ್ರಜೀವರಗಿ, ಶಿವಕುಮಾರ್‌ಆರಾಧ್ಯ, ಮಾಸ್ಟರ್ ಮನೋಜ್ಘಕುಡ್ಲೂರು, ಮಾಸ್ಟರ್ ವಿನಯ್‌ಹಾಸನ ಮುಂತಾದವರುತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ದಿನೇಶ್‌ಕುಮಾರ್ ಸಂಗೀತ, ಸಿ.ನಾರಾಯಣ್ ಛಾಯಾಗ್ರಹಣ, ಆರ್.ಡಿ.ವಿ ಸಂಕಲನ, ನೃತ್ಯಎಂ.ಆರ್.ಕಪಿಲ್ ಎಲ್ಲವುಚಿತ್ರಕ್ಕೆ ಪೂರಕವಾಗಿದೆ.ಬಿಎಂಎಸ್. ಸಿನಿ ಕ್ರಿಯೇಶನ್ಸ್ ಮೂಲಕ ಸುನಿತಾ.ಎಸ್.ಜೀವರಗಿ ನಿರ್ಮಾಣ ಮಾಡಿದ್ದಾರೆ.

೩/೫

 

 

Copyright@2018 Chitralahari | All Rights Reserved. Photo Journalist K.S. Mokshendra,