ರೈತನೇ ಶ್ರೀಮಂತ
ಹಳ್ಳಿಯಲ್ಲಿರುವ ಯುವಕರು ಪಟ್ಟಣಕ್ಕೆ ಬರುತ್ತಾರೆ. ಮತ್ತೋಂದು ಕಡೆ ಅಲ್ಲಿನ ಹುಡುಗಿಯರು ಪಟ್ಟಣದ ಹುಡಗರನ್ನೇ ಬಯಸುತ್ತಾರೆ. ಪ್ರಸಕ್ತ ಪರಿಸ್ಥಿತಿ ಇದಾಗಿದೆ. ಇಂತಹುದೇ ವಿಷಯಗಳನ್ನು ಹೆಕ್ಕಿಕೊಂಡು ‘ಶ್ರೀಮಂತ’ ಎನ್ನುವ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಅನ್ನದಾತನೆಂದು ರೈತನಿಗೆ ಕರೆಯುತ್ತಾರೆ. ಆದರೆ ಹುಡುಗಿ ಮಾತ್ರ ಸಿಗುವುದಿಲ್ಲ. ಸಿಕ್ಕರೂ ಆತನೊಂದಿಗೆ ಬಾಳ್ವೆ ಮಾಡಲು ನಿರಾಕರಿಸುತ್ತಾಳೆ. ಆತನು ಕಷ್ಟಪಟ್ಟು ದುಡಿದು, ತಾನು ನಂಬಿದ ಭೂಮಿ ತಾಯಿಯಿಂದ ಬೆವರು ಸುರಿಸಿ ಅನ್ನ ಬೆಳೆಯುತ್ತಾನೆ. ದೇಶಕ್ಕೆಲ್ಲ ಹಂಚುತ್ತಾ ಮಾದರಿಯಾಗುತ್ತಾನೆ.
ಇದರಿಂದ ಇಂದು ವಿಜ್ಘಾನಿಗಳು, ತಂತ್ರಜ್ಘರು ಅನ್ನವನ್ನೇ ನಂಬಿಕೊಂಡು ವಿವಿಧ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಇದರ ಜತೆಗೆ ಹಳ್ಳಿಯ ಜೀವನ, ಆಚಾರ-ವಿಚಾರ, ಸಂಸ್ಕ್ರತಿ ಇದೆಲ್ಲವೂ ಚಿತ್ರದಲ್ಲಿ ಬಂದು ಹೋಗುತ್ತದೆ. ತಮ್ಮವರಿಗೆ ಕಷ್ಟ ಬಂದಾಗ ಹೆಗಲುಕೊಟ್ಟು ಮಾನವಿಯತೆ ಮೆರೆದು ಸ್ಪಂದಿಸುವ ಜನರು ಇದೆಲ್ಲವೂ ಹಾಸು ಹೊಕ್ಕಾಗಿದೆ. ನಿರ್ದೇಶಕ ರಮೇಶ್‌ಹಾಸನ್ ಗ್ರಾಮೀಣ ಭಾಗದ ಕಥೆಯನ್ನು ಬೋರ್ ಅನಿಸದಂತೆ ಕಮರ್ಷಿಯಲ್ ರೂಪದಲ್ಲಿ ತರೆಗೆ ತರಲು ಅವರ ಶ್ರಮ ಪರದೆ ಮೇಲೆ ಚೆನ್ನಾಗಿ ಕಾಣಿಸುತ್ತದೆ.
ಬಾಲಿವುಡ್ ನಟ ಸೋನುಸೂದ್ ಅಭಿನಯ ಸೊಗಸಾಗಿ ಮೂಡಿಬಂದಿದೆ. ಉಳಿದಂತೆ ಕ್ರಾಂತಿಮೆನನ್, ವೈಷ್ಣವಿಮೆನನ್, ವೈಷ್ಣವಿಪಟವರ್ಧನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇವರೊಂದಿಗೆ ರಮೇಶ್‌ಭಟ್, ಕಲ್ಯಾಣಿ, ಚರಣ್‌ರಾಜ್, ಗಿರೀಶ್‌ಶಿವಣ್ಣ, ಕುರಿರಂಗ, ರಾಜುತಾಳಿಕೋಟೆ, ಸಾಧುಕೋಕಿಲ,ರವಿಶಂಕರ್‌ಗೌಡ ಹೀಗೆ ಬೃಹತ್ ತಾರಾಗಣ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಹಂಸಲೇಖಾ ಸಾಹಿತ್ಯ-ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಅಂತೂ ‘ಶ್ರೀಮಂತ’ ಚಿತ್ರವನ್ನು ಒಮ್ಮೆ ಅಪ್ಪಿಕೊಳ್ಳಬಹುದು.
****