ಕುತೂಹಲ ಕೆರಳಿಸುವ ೧೩ *****
ಹಿಂದೂ ಮುಸ್ಲಿಂ ಭಾವೈಕ್ಯ ಹಾಗೂ ವ್ಯವಸ್ಥೆಯ ಕರಾಳ ರೂಪದ ಪರಿಚಯವನ್ನು ‘೧೩’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಥೆಯಲ್ಲಿ ಮೋಹನ್ (ರಾಘವೇಂದ್ರ ರಾಜ್‌ಕುಮಾರ್) ಮತ್ತು ಸಾಯಿರಾ (ಶೃತಿ) ಇಬ್ಬರು ಅಂತರ್‌ಧರ್ಮದ ವಿವಾಹ ಮಾಡಿಕೊಂಡಿರುತ್ತಾರೆ. ಗುಜರಿ ಹಾಗೂ ಟೀ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಇಬ್ಬರದು ಅದಮ್ಯ ಪ್ರೀತಿ, ಹೇಳಲಾಗದಷ್ಟು ಒಡನಾಟ. ಅವಳಿಗೆ ಕಷ್ಟ ಬಂದರೆ ರಾಮ ಎನ್ನುತ್ತಾಳೆ. ಆತನು ಯಾವಾಗಲೂ ಅಲ್ಲಾ ಅಂತ ಸಂಭೋದಿಸುತ್ತಿರುತ್ತಾನೆ. ಹೀಗಿರುವಾಗ ಸಾಯಿರಳ ಅತಿಯಾದ ಆಸೆ ಮೋಹನ್ ಸಮಸ್ಯೆಯಲ್ಲಿ ಸಿಲುಕುತ್ತಾರೆ. ಆಕಸ್ಮಿಕ ಘಟ್ಟದಲ್ಲಿ ಆಕೆಗೆ ೧೩ ಕೋಟಿ ಹವಾಲ ಹಣ ಸಿಗುತ್ತದೆ. ಅಷ್ಟೋಂದು ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ತಿಳಿಯದ ಮುಗ್ದರಿಗೆ ಪೋಲೀಸರಿಂದ ಕಿರುಕುಳ ಶುರುವಾಗುತ್ತದೆ. ಮುಂದೇನು ಎಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ.
ನರೇಂದ್ರಬಾಬು ನಿರ್ದೇಶನ ಮಾಡುವ ಜತೆಗೆ ಮುಸ್ತಫಾನಾಗಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರರಾಜ್‌ಕುಮಾರ್ ನಟನೆಗಿಂತ ಕಣ್ಣಿನಲ್ಲೆ ತಳಮಳವನ್ನು ತೋರಿಸಿರುವ ಪರಿ ಚೆನ್ನಾಗಿ ಮೂಡಿಬಂದಿದೆ. ಶೃತಿ ಎಂದಿನಂತೆ ಹಿಂದಿನ ಚಿತ್ರಗಳು ನೆನಪಿಗೆ ತರುತ್ತದೆ. ಉಳಿದಂತೆ ಪೋಲೀಸ್ ಅಧಿಕಾರಿಯಾಗಿ ಪ್ರಮೋದ್‌ಶೆಟ್ಟಿ ಗಮನ ಸೆಳೆದಿದ್ದಾರೆ. ಸೋಹನ್‌ಬಾಬು ಸಂಗೀತ, ಮಂಜುನಾಥನಾಯ್ಡು ಛಾಯಾಗ್ರಹಣ ಇದೆಲ್ಲಕ್ಕೂ ಪೂರಕವಾಗಿದೆ. ಕೆ.ಸಂಪತ್‌ಕುಮಾರ್ ರೊಂದಿಗೆ ಮಂಜುನಾಥಗೌಡ, ಕೇಶವಮೂರ್ತಿ, ಮಂಜುನಾಥ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.
*****