ಪರಿಶುದ್ಧಂ ಚಿತ್ರವಿಮರ್ಶೆ
ನಿಗೂಢ ಕೊಲೆಗಳ ಸುತ್ತ
ಪತ್ನಿಯರಿಗೆ ವಿಚ್ಛೇದನ ಗಂಡಸರು ಕೊಲೆಯಾಗುತ್ತಾರೆ. ಅದಕ್ಕೆ ಅವರ ಅನೈತಿಕ ಸಂಬಂಧ ಕಾರಣ ಎಂದುಕೊಂಡರೆ ಚಿತ್ರದ ಕ್ಲೈಮ್ಯಾಕ್ಸ್ ಬೇರೆಯೇ ಕಥೆಯನ್ನು ಹೇಳುತ್ತದೆ.
ರೇಖಾ ಎಂಬ ಮನೋವೈದ್ಯೆ ಹಾಗೂ ಆಕೆಯ ಆತ್ಮೀಯ ಬಳಗ ಪೊಲೀಸ್ ಅಧಿಕಾರಿ ಹಾಗೂ ಇತರರ ಸುತ್ತ ನಡೆಯುವ ಕಥೆಯಲ್ಲಿ ಅಂಜಲಿ ಎಂಬ ನಟಿ ಕೇಂದ್ರ ಬಿಂದು.
ಇದರ ನಡುವೆ ಸೈಕೋ ಶ್ಯಾಮ್ ಎಂಬ ವಿಕೃತ ಮನುಷ್ಯ ಅಮಾನುಷ ಕೊಲೆಯಲ್ಲಿ ಭಾಗಿಯಾಗಿದ್ದು, ಆತ ಪೊಲೀಸರಿಂದ ತಪ್ಪಿಸಿಕೊಂಡ ಬಳಿಕ ಸಂಭವಿಸುವ ಕೊಲೆಗಳಿಗೆ ಆತ ಕಾರಣವೇ ಎಂಬುದು ಕಥೆಯ ಸಾರಾಂಶ.
ಇದರ ನಡುವೆ ಪೊಲೀಸ್, ಮಾಧ್ಯಮ ಹಾಗೂ ವೈದ್ಯರನ್ನು ಒಟ್ಟು ಮಾಡಿ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಆರೋನ್ ಕಾರ್ತಿಕ್ ವೆಂಕಟೇಶ್.
ಸ್ಪರ್ಶಾ ರೇಖಾ ಸಿಟ್ಟು ಸೆಡವು ಮೊದಲಾದವುಗಳಲ್ಲಿ ನಾನೇನು ಕಮ್ಮಿ ಇಲ್ಲ ಎಂಬಂತೆ ನಟಿಸಿದ್ದಾರೆ. ಅರ್ಚನಾ, ಯತಿರಾಜ್, ಅಫ್ಜಲ್, ವಿಕ್ಟರಿ ವಾಸು ಪಾತ್ರಗಳಿಗೆ ನ್ಯಾಯಾ ಸಲ್ಲಿಸಿದ್ದಾರೆ.
ಆದರೆ ಎಗ್ಗಿಲ್ಲದೆ ಹರಿಯುವ ಬೈಗುಳದ ಸಂಭಾಷಣೆಗಳು ಮಾತ್ರ ಯಾರೂ ಸಹಿಸುವಂತೆ ಇಲ್ಲ. ರೇಖಾ ಅವರಿಂದಲೇ ಇಂತಹ ಸಂಭಾಷಣೆ ಹೊಮ್ಮುವುದು ಅಚ್ಚರಿಗೂ ಕಾರಣವಾಗುತ್ತದೆ.
ಚಿತ್ರಕ್ಕೆ ಇಬ್ಬರು ಛಾಯಾಗ್ರಾಹಕರಿದ್ದು, ಅದರಲ್ಲಿ ಆರಂಭಿಕ ಹಂತದಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿರುವ ಅಶೋಕ್ ಕಡಬ ಗಮನ ಸೆಳೆಯುತ್ತಾರೆ. ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತದಲ್ಲಿ ’ಕ’ ಅಕ್ಷರದ ಗೀತೆ ಗಮನ ಸೆಳೆಯುತ್ತದೆ.