ಮತ್ಸ್ಯಗಂಧ ಕಡಲ ತೀರದ ಕಥನ
‘ಮತ್ಸ್ಯಗಂಧ’ ಸಿನಿಮಾವು ಸಮುದ್ರ ತೀರದ ಮೀನುಗಾರರ ಜೀವನದಲ್ಲಿ ನಡೆಯುವ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಅದಕ್ಕೆ ಆ ಭಾಗದ ಸ್ಥಳಗಳಾದ ಕುಂದಾಪುರ, ಬೈಂದೂರು ಕಡೆಗಳಲ್ಲಿ ಚಿತ್ರೀಕರಸಿರುವುದು ಕಂಡುಬರುತ್ತದೆ. ವಿಷಯಗಳು ಅಲ್ಲದೆ ತಾಂತ್ರಿಕವಾಗಿ ದೃಶ್ಯಗಳು ಪರದೆ ಮೇಲೆ ಚೆನ್ನಾಗಿ ಮೂಡಿಬಂದಿದೆ.
ನಿರ್ದೇಶಕ ದೇವರಾಜಪೂಜಾರಿ ಕಥೆಗೆ ತಕ್ಕಂತೆ ಚಿತ್ರಕತೆಯನ್ನು ಸಿದ್ದಪಡಿಸಿ, ಹಾಗೆಯೇ ಅದನ್ನು ಪರದೆ ಮೇಲೆ ತೋರಿಸುವಲ್ಲಿ ಸಪಲರಾಗಿದ್ದಾರೆ. ಮೊದಲಬಾರಿ ಪೋಲೀಸ್ ಅಧಿಕಾರಿಯಾಗಿ ಪೃಥ್ವಿಅಂಬಾರ್ ಅಬ್ಬರಿಸಿದ್ದಾರೆ. ಫೈಟ್‌ದಲ್ಲಿ ಮಿಂಚಿದ್ದು, ಅಭಿನಯದಲ್ಲಿ ಸೈ ಅನಿಸಿಕೊಂಡಿದ್ದಾರೆ.
ಇವರೊಂದಿಗೆ ಭಜರಂಗಿ ಲೋಕಿ, ಶರತ್‌ಲೋಹಿತಾಶ್ವ, ಮೈಮ್‌ರಾಮದಾಸ್ ಮುಂತಾದವರು ಹಾಗೂ ಪ್ರಶಾಂತ್ ಸಿದ್ದಿ ನಟನೆಯ ಜತೆಗೆ ಸಂಗೀತ ಸಂಯೋಜಿಸಿರುವುದು ವಿಶೇಷ. ಪ್ರವೀಣ್ ಛಾಯಾಗ್ರಹಣ ಕಣ್ಣಿಗೆ ತಂಪು ಕೊಡುತ್ತದೆ. ನಿರ್ದೇಶಕರೇ ಸಾಹಿತ್ಯ ಒದಗಿಸಿರುವ ಭಾಗೀರಥಿ ಗೀತೆ ಕೇಳಲು, ನೋಡಲು ಖುಷಿ ಕೊಡುತ್ತದೆ. ಕರಾವಳಿ ಕಡಲ ತೀರದ ಅಂಶಗಳನ್ನು ನೋಡಲು ಬಯಸುವವರು ಈ ಸಿನಿಮಾವನ್ನು ತಪ್ಪದೆ ನೋಡಬೇಕು.
****