ಸಂಬಂಧಗಳೇ ಫಾರ್ ರಿಜಿಸ್ಟ್ರೇಷನ್
ಇಂಜಿನಿಯರ್, ರಂಗಕರ್ಮಿ ನವೀನ್‌ದ್ವಾರಕನಾಥ್ ನಿರ್ದೇಶನ ಮಾಡಿರುವ ‘ಫಾರ್ ರಿಜಿಸ್ಟ್ರೇಷನ್’ (ಈoಡಿ ಖegಟಿ.) ಎನ್ನುವ ಸಿನಿಮಾವು ಸಾಂಸರಿಕ ಕಾಮಿಡಿ ಕಥೆಯನ್ನು ಹೇಳಲಿದೆ. ವಾಹನ ನಮ್ಮದಾಗಬೇಕು ಅಂದರೆ ಅದಕ್ಕೆ ರಿಜಿಸ್ಟ್ರೇಷನ್ ಮಾಡಿಸಬೇಕು. ಹಾಗೆಯೇ ಒಂದು ಸಂಬಂಧ ನಮ್ಮದಾಗಬೇಕು ಅಂದರೆ ಏನು ಮಾಡಬೇಕು ಎಂಬುದನ್ನು ಸನ್ನಿವೇಶಗಳ ಮೂಲಕ ನೋಡುಗರಿಗೆ ಅರ್ಥವಾಗುವಂತೆ ತೋರಿಸಲಾಗಿದೆ. ಮದುವೆಯಾದ ನಂತರ ಇಬ್ಬರ ಸಂಬಂಧಗಳು ದೂರವಾಗುತ್ತಾ ಹೋಗುತ್ತದೆ. ಅದಕ್ಕೆ ಕಾರಣವೇನು? ಅಂತಿಮವಾಗಿ ಎಲ್ಲವು ಸರಿಹೋಗುತ್ತದಾ? ಇವೆಲ್ಲವೂ ಹೂ ಪೋಣಿಸಿದಂತೆ ಅಚ್ಚುಕಟ್ಟಾದ ದೃಶ್ಯಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ.
ದಿಯಾ ಖ್ಯಾತಿಯ ಪೃಥ್ವಿಅಂಬರ್ ನಾಯಕ, ಲವ್‌ಮಾಕ್ಟೇಲ್‌ದಲ್ಲಿ ನಟಿಸಿದ್ದ ಮಿಲನಾನಾಗರಾಜು ನಾಯಕಿ. ಇಬ್ಬರು ರೀಲ್‌ದಲ್ಲಿ ಜೋಡಿಯಾಗಿದ್ದು, ರಿಯಲ್‌ದಂತೆ ಕಾಣಿಸುತ್ತಾರೆ. ತಾರಾಗಣದಲ್ಲಿ ಸುಧಾಬೆಳವಾಡಿ, ಬಾಬುಹಿರಣಯ್ಯ, ರಮೇಶ್‌ಭಟ್, ತಬಲಾನಾಣಿ ಮುಂತಾದವರು ನಟಿಸಿದ್ದಾರೆ. ನಿಶ್ಚಲ್ ಫಿಲಂಸ್ ಬ್ಯಾನರ್‌ದಲ್ಲಿ ನವೀನ್‌ರಾವ್ ನಿರ್ಮಾಣ ಮಾಡಿದ್ದಾರೆ. ಹರೀಶ್ ಸಂಗೀತ, ಮನುಶೆಡ್ಗಾರ್ ಸಂಕಲನ ಎಲ್ಲವು ಇದಕ್ಕೆ ಪೂರಕವಾಗಿದೆ. ಜತೆಗೆ ಇಮ್ರಾನ್‌ಸರ್ದಾರಿಯಾ ನೀರಿನಲ್ಲಿ ನೃತ್ಯ ಸಂಯೋಜನೆ ಮಾಡಿಸಿದ್ದು, ಇದು ಸಹ ಚಿತ್ರಕ್ಕೆ ತೂಕವನ್ನು ಹೆಚ್ಚಿಸಿದೆ.
****