Mr.Natwarlal.Reviews

Friday, February 23, 2024

88

ನಟೋರಿಯಸ್ ವಂಚಕ ಮಿ.ನಟ್ವರ್ಲಾಲ್

        ಕ್ರೈಂ ಥ್ರಿಲ್ಲರ್ ಹಾಗೂ ಆಕ್ಷನ್ ಜಾನರ್ ಕಥೆ ‘ಮಿ.ನಟ್ವರ್‌ಲಾಲ್’ ಚಿತ್ರದ್ದಾಗಿದೆ.ಈ ಹಿಂದೆ ಅಯೋಧ್ಯಪುರ ನಿರ್ದೇಶನ ಮಾಡಿದ್ದ ವಿ.ಲವ ಆಕ್ಷನ್ ಕಟ್ ಹೇಳಿದ್ದಾರೆ. ನಮ್ಮ ಸುತ್ತಮುತ್ತಲೂ ನಡೆಯುವ ಸತ್ಯ ಅಂಶಗಳನ್ನು ಸನ್ನಿವೇಶಗಳ ಮೂಲಕ ಸೃಷ್ಟಿಸಿದ್ದು, ಪೊಲಟಿಕಲ್ ಮಾಫಿಯಾ, ಮೆಡಿಕಲ್ ಮಾಫಿಯಾ, ಆನ್‌ಲೈನ್ ವಂಚನೆ ಎಲ್ಲವು ತುಂಬಿಕೊಂಡಿದೆ. ಆರಂಭದಲ್ಲಿ ಒಂದಷ್ಟು ಕೊಲೆಗಳು ನಡೆಯುತ್ತದೆ. ಊರಿನಲ್ಲಿ ರಂಗ ಎಂಬ ಯುವಕನನ್ನು ಕೌಟಂಬಿಕ ದ್ವೇಷ ಊರು ಬಿಟ್ಟು ಹೋಗುವಂತೆ ಮಾಡುತ್ತದೆ. ಬೇರೆ ಊರಿಗೆ ತಾಯಿಯೊಂದಿಗೆ ಹೋದಾಗ, ಇನ್ನೊಂದು ದುರಂತವಾಗಿ ಆಪ್ತರನ್ನು ಕಳೆದುಕೊಳ್ಳುತ್ತಾನೆ. ಆದರೆ ಇಲ್ಲಿರುವ ಘಟನೆಗಳಿಗೂ ನಟ್ವರ್‌ಲಾಲ್‌ಗೂ ಏನು ಸಂಬಂದ ಎಂಬುದು ಚಿತ್ರ ನೋಡಿದರೆ ತಿಳಿಯುತ್ತದೆ. 

        ನಾಯಕ ಮತ್ತು ನಿರ್ಮಾಪಕ ತನುಷ್‌ಶಿವಣ್ಣ ನೆಗಟೀವ್ ರೋಲ್‌ದಲ್ಲಿ ಮಿಂಚಿದ್ದಾರೆ. ನಾಯಕಿಯಾಗಿ ಸೋನಾಲ್‌ಮಾಂತೆರೋ ಅಲ್ಲಲ್ಲಿ ಚಂದ ಕಾಣಿಸುತ್ತಾರೆ. ಇವರೊಂದಿಗೆ ನಾಗಭೂಷಣ, ಕಾಕ್ರೋಚ್‌ಸುಧಿ, ಯಶ್‌ಶೆಟ್ಟಿ, ವಿಜಯ್‌ಚೆಂಡೂರ್, ರಾಜೇಶ್‌ನಟರಂಗ, ರಘುರಾಮನಕೊಪ್ಪ, ಹರಣಿ, ರಾಜೇಂದ್ರ, ಸುಂದರರಾಜ್, ಕಾಂತರಾಜುಕಡ್ಡಿಪುಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಧರ್ಮವಿಶ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ವಿಲಯಂಡೇವಿಡ್ ಕ್ಯಾಮಾರ ಕೆಲಸ ಅದ್ಬುತವಾಗಿದೆ. ಅಂತೂ ನಟ್ವರ್‌ಲಾಲ್ ಟಿಕೆಟ್ ದುಡ್ಡಿಗೆ ಮೋಸ ಮಾಡಿಲ್ಲ ಅಂತ ಹೇಳಬಹುದು.

****

 

 

Copyright@2018 Chitralahari | All Rights Reserved. Photo Journalist K.S. Mokshendra,