Not Out.Film Reviews

Friday, July 19, 2024

127

 

ನಾಟ್ ಔಟ್: ನಿಮಗೆ ಇಷ್ಟವಾಗುತ್ತೆ ನೋ ಡೌಟ್!

 

ಚಿತ್ರ: ನಾಟ್ ಔಟ್

ನಿರ್ದೇಶನ: ಅಂಬರೀಷ್

ನಿರ್ಮಾಣ: ರವಿಕುಮಾರ್, ಶಂಶುದ್ದೀನ್

ತಾರಾಗಣ: ಅಜಯ್ ಪೃಥ್ವಿ, ರಚನಾ ಇಂದರ್, ಪಿ ರವಿಶಂಕರ್ ಮೊದಲಾದವರು

 

ಒಂಟಿಕೊಪ್ಪಲು ದೇವರಾಜ ಕುಖ್ಯಾತ ಬಡ್ಡಿ ವ್ಯಾಪಾರಿ. ಈತನ ದಂಧೆಗೆ ಬಲಿಯಾದವರಲ್ಲಿ ಅಜಯನೂ ಒಬ್ಬ. ಸ್ವಂತ ಆ್ಯಂಬುಲೆನ್ಸ್ ಕೊಳ್ಳಲು ದೇವರಾಜನ ಬಳಿ 10 ಲಕ್ಷ ರೂಪಾಯಿ ಸಾಲ ಮಾಡಿರುತ್ತಾನೆ. ಆದರೆ ದೇವರಾಜನ‌ ಕಡೆಯವರೇ ಅಜಯ್ ಆ್ಯಂಬುಲೆನ್ಸ್ ಕದ್ದು ಬಡ್ಡಿ, ಅಸಲಿಗಾಗಿ ಪೀಡಿಸುತ್ತಾ ಇರುತ್ತಾರೆ.

 

ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುವ ಅಜಯ್, ನರ್ಸ್ ಒಬ್ಬರನ್ನು ಪ್ರೀತಿಸುತ್ತಾ ಇರುತ್ತಾನೆ. ಅವರಿಬ್ಬರೂ ಇನ್ನೇನು ವಿದೇಶದಲ್ಲಿ ಕೆಲಸಕ್ಕೆ‌ ಸೇರಿಕೊಳ್ಳಬೇಕು ಎನ್ನುವ ಯೋಜನೆ ಹಾಕಿರುತ್ತಾರೆ. ಆದರೆ ದೇವರಾಜನ ಕಡೆಯವರು ಅಜಯ್ ಮನೆಯಲ್ಲಿದ್ದ ಅವರಿಬ್ಬರ ಪಾಸ್ ಪೋರ್ಟ್ ಡಾಕ್ಯುಮೆಂಟ್ಸ್ ವಶಪಡಿಸಿರುತ್ತಾರೆ. ಅಜಯ್ ತನಗೆ ದೇವರಾಜನ ಮೇಲೆ ಇರುವ ದ್ವೇಷವನ್ನು ತೀರಿಸಲು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಇದೇ ಸಂದರ್ಭದಲ್ಲಿ ವಿದೇಶದಿಂದ ಲಕ್ಷಾಧೀಶ ಶ್ರೀಧರನ ಆಗಮನವಾಗುತ್ತದೆ.

ಶ್ರೀಧರ ಮತ್ತು ದೇವರಾಜನ ವೈರತ್ವವನ್ನು ಬಳಸಿಕೊಳ್ಳಲು ಬಯಸುವ ಅಜಯ್ ಅದರಲ್ಲಿ ಯಶಸ್ವಿಯಾಗುತ್ತಾನ? ಇದು ನಾಟ್ ಚಿತ್ರದ ಮುಖ್ಯ ಕತೆ. ಆದರೆ ಇದರಾಚೆಗೆ ಈ ಚಿತ್ರವನ್ನೊಂದು ಹಾಸ್ಯಮಯ ಜರ್ನಿಯಾಗಿಸುವಲ್ಲಿ ನಿರ್ದೇಶಕರು ಗೆದ್ಧಿದ್ದಾರೆ.

 

ಬಡ್ಡಿ ವ್ಯಾಪಾರಿ ಒಂಟಿಕೊಪ್ಪಲು ದೇವರಾಜನಾಗಿ ಪಿ ರವಿಶಂಕರ್ ಈ ಚಿತ್ರದ ಜೀವಾಳವಾಗಿದ್ದಾರೆ. ಅಜಯ್ ಪಾತ್ರದಲ್ಲಿ ಅಜಯ್ ಪೃಥ್ವಿ ಮತ್ತು ಅಜಯನ ಪ್ರೇಯಸಿ ಶ್ರೀಯಾಗಿ ರಚನಾ ಇಂದರ್ ಜೋಡಿ ಆಕರ್ಷಕ. ವಿದೇಶದಿಂದ ಬರುವ ಶ್ರೀಧರನಾಗಿ ಗೋಪಾಲಕೃಷ್ಣ ದೇಶಪಾಂಡೆ ನಟನೆ ಎಂದಿನಂತೆ ಅಮೋಘ.

 

ಕತೆ, ಚಿತ್ರಕತೆ, ಮೇಕಿಂಗ್ ಮತ್ತು ಸಂಭಾಷಣೆ ಚಿತ್ರದ ಹೈಲೈಟ್. ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ರೀತಿಯಲ್ಲಿ ಮೂಡಿ ಬಂದಿದೆ.

Copyright@2018 Chitralahari | All Rights Reserved. Photo Journalist K.S. Mokshendra,