ಬ್ಯಾಕ್ ಬೆಂಚರ್ಸ್ ಹಾಡುಗಳು
ಯಾವುದೇ ಶಾಲೆ, ಕಾಲೇಜುಗಳಲ್ಲಿ ಕೊನೆ ಬೆಂಚಿನ ಹುಡುಗರು ಅಂದರೆ ಶುದ್ದ ತರಲೆಗಳು, ಅವರಿಗೆ ಪ್ರಾಪಂಚಿಕ ಜ್ಘಾನ ಇರುವುದಿಲ್ಲೆವೆಂದು ಹೇಳುತ್ತಾರೆ. ಅದೇ ಮೊದಲ ಬೆಂಚಿನ ಹುಡುಗರು ಬುದ್ದಿವಂತರಾಗಿದ್ದರೂ ಪ್ರಪಂಚ ಜ್ಘಾನ ತಿಳಿದಿರುವುದಿಲ್ಲ. ಇಂತಹುದೇ ಅಂಶಗಳನ್ನು ಬಳಸಿಕೊಂಡು ‘ಬ್ಯಾಕ್ ಬೆಂಚರ‍್ಸ್’ ಚಿತ್ರದಲ್ಲಿ ಹೇಳಲಾಗಿದೆ. ನಾಲ್ಕು ಮಂದಿ ಹುಡುಗರ ತುಂಟಾಟ, ಪ್ರೇಮ ಕಾಮ ತರಲೆಗಳು ಮಿತಿ ಮೀರಿರುತ್ತದೆ. ಅತಿಯಾದರೆ ಅಮೃತವು ವಿಷವಾಗುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಅದರಂತೆ ಕುಡಿತದ ಅಮಲಿನಲ್ಲಿದ್ದ ಹುಡುಗರು ಮಾಡುವ ಅವಾಂತರದಿಂದ ಪೋಲೀಸರ ವಶವಾಗುತ್ತಾರೆ. ವಿದ್ಯಾರ್ಥಿಗಳು ಅಂದ ಮಾತ್ರಕ್ಕೆ ಅವರುಗಳಿಗೆ ರಿಯಾಯತಿ ಇರುವುದಿಲ್ಲ. ಅಮಾಯಕತ್ವ ಸಮಾಜಕ್ಕೆ ಕಾಣುವುದಿಲ್ಲ. ಅದರಲ್ಲೂ ಕಾಲೇಜು ಹುಡುಗರ ತರಲೆಗಳನ್ನು ನೋಡುವ ಬಯಕೆ ಇದ್ದರೆ ಈ ಸಿನಿಮಾವು ನೋಡುಗರಿಗೆ ಆಪ್ತವಾಗುತ್ತದೆ.
ಬಿ.ಆರ್.ರಾಜಶೇಖರ್ ನಿರ್ದೇಶನದಲ್ಲಿ ಸಿನಿಮಾವು ಎಲ್ಲಿಯೂ ಬೋರ್ ಅನಿಸದೆ ದೃಶ್ಯಗಳು ಹಿತಕೊಡುತ್ತದೆ. ಬಿ.ಆರ್.ರಾಜಶೇಖರ್ ನಿರ್ದೇಶನ ಮಾಡಿದ್ದಾರೆ.
ತಾರಾಗಣದಲ್ಲಿ ಅರವಿಂದ್‌ಕುಪ್ಳಿಕರ್, ರಂಜನ್‌ನರಸಿಂಹಮೂರ್ತಿ, ಜಿತಿನ್‌ಆರ್ಯನ್, ಆಕಾಶ್, ಶಶಾಂಕ್‌ಸಿಂಹ, ಮಾನ್ಯಗೌಡ, ಕುಂಕುಮ್, ಅನುಷಾಸುರೇಶ್, ಮನೋಜ್‌ಶೆಟ್ಟಿ, ನಮಿತಾಗೌಡ ಮುಂತಾದವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಂಗೀತ ನಕುಲ್‌ಅಭಯಂತರ್ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ಛಾಯಾಗ್ರಹಣ ಮನೋಹರ್‌ಜೋಷಿ ಅವರದಾಗಿದೆ. ಪಿ.ಪಿ.ಪ್ರೊಡಕ್ಷನ್ಸ್ ಅಡಿಯಲ್ಲಿ ರಮ್ಯ ನಿರ್ಮಾಣ ಮಾಡಿದ್ದಾರೆ.
****