ಪುಣ್ಯ ಕೋಟಿಯ ಕತೆ ಇದು!
ಚಿತ್ರ: ಕೋಟಿ
ನಿರ್ದೇಶನ: ಪರಮ್
ನಿರ್ಮಾಣ: ಜಿಯೋ ಸಿನಿಮಾಸ್
ತಾರಾಗಣ: ಧನಂಜಯ,ಮೋಕ್ಷಾ ಕುಶಾಲ್
ಇದು ಪುಣ್ಯಕೋಟಿಯ ಕತೆ ಹೌದು. ಆದರೆ ಕ್ಲೈಮ್ಯಾಕ್ಸ್ ನಲ್ಲಿ ಹಸುವೇ ಹುಲಿಯಾಗುತ್ತದೆ.
ಕೋಟಿ ಚಿತ್ರದ ನಾಯಕನ ಹೆಸರು. ತಾಯಿ, ತಮ್ಮ ಮತ್ತು ತಂಗಿಯ ಜತೆಗಿನ ಬದುಕು. ಮಧ್ಯಮ ವರ್ಗದ ಕನಸುಗಳು. ಆದರೆ ಸಾಧನೆಗೆ ನೂರಾರು ಸಂಕಷ್ಟ. ಅಡ್ಡದಾರಿಯಲ್ಲಿ ದುಡ್ಡು ಮಾಡಲು ಅವಕಾಶ ನೀಡಲು ಸಿದ್ಧನಾಗಿರುವ ದೀನು ಸಾಹುಕಾರ. ಆದರೆ ಅಂಥದೊಂದು ದಾರಿಯೇ ತನಗೆ ಬೇಕಿಲ್ಲವೆನ್ನುವ ಗಟ್ಟಿ ನಿರ್ಧಾರದಲ್ಲಿರುವ ಕೋಟಿ. ಕೊನೆಗೆ ಪರಿಸ್ಥಿತಿ ಯಾರಿಗೆ ಗೆಲುವು ತಂದುಕೊಡುತ್ತದೆ ಎನ್ನುವುದೇ ಚಿತ್ರದ ಕತೆ.
ಕೋಟಿಯಾಗಿ ಧನಂಜಯ್ ಇಂಥದೊಂದು ಪಾತ್ರ ಒಪ್ಪಿಕೊಂಡಿರುವುದೇ ಬ್ಯೂಟಿ. ಈತನದು ಏನೇ ಇದ್ದರೂ ಕೌಟುಂಬಿಕ ಡ್ಯೂಟಿ. ಯಾಕೆಂದರೆ ಇಲ್ಲಿ ಚಿತ್ರದ ಮುಕ್ಕಾಲು ಭಾಗ ತನಕ ನಾಯಕ ಹೊಡೆದಾಡುವುದಿಲ್ಲ. ಆದರೆ ಕೊನೆಯ ಅರ್ಧಗಂಟೆ ಕಮರ್ಷಿಯಲ್ ನಾಯಕನಾಗಿ ಅಬ್ಬರಿಸಿದ್ದಾರೆ.
ಧನಂಜಯ್ ಗೆ ಜೋಡಿಯಾಗಿ ಮೋಕ್ಷ ಕುಶಾಲ್ ನಟಿಸಿದ್ದಾರೆ. ಈಕೆಗೂ ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರವೇ ದೊರಕಿದೆ. ದಿನೂ ಸಾಹುಕಾರ್ ಪಾತ್ರದಲ್ಲಿ ರಮೇಶ್ ಇಂದಿರಾ ನಾಯಕನಷ್ಟೇ ಹೈಲೈಟ್ ಆಗಿದ್ದಾರೆ. ತಾಯಿಯಾಗಿ ತಾರ ಜೀವಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅತಿಥಿ ಪಾತ್ರದಲ್ಲಿ ಬರುವ ದುನಿಯಾ ವಿಜಯ್ ಈ ಚಿತ್ರದ ಅಚ್ಚರಿ. ದುನಿಯಾ ವಿಜಯ್ ನಂಥ ಮಾಸ್ ಹೀರೋವನ್ನು ಕೂಡ ಮಧ್ಯಮ ವರ್ಗದ ಬದುಕಿನ ಸಂದೇಶ ಹೇಳುವ ಪಾತ್ರವಾಗಿಸುವಲ್ಲಿ ನಿರ್ದೇಶಕ ಪರಮ್ ಪ್ರಯತ್ನ ಗೆದ್ದಿದೆ.
ಧನಂಜಯ್ ಗೆ ಜೋಡಿಯಾಗಿ ಮೋಕ್ಷ ಕುಶಾಲ್ ನಟಿಸಿದ್ದಾರೆ. ಈಕೆಗೂ ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರವೇ ದೊರಕಿದೆ. ದಿನೂ ಸಾಹುಕಾರ್ ಪಾತ್ರದಲ್ಲಿ ರಮೇಶ್ ಇಂದಿರಾ ನಾಯಕನಷ್ಟೇ ಹೈಲೈಟ್ ಆಗಿದ್ದಾರೆ. ತಾಯಿಯಾಗಿ ತಾರ ಜೀವಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅತಿಥಿ ಪಾತ್ರದಲ್ಲಿ ಬರುವ ದುನಿಯಾ ವಿಜಯ್ ಈ ಚಿತ್ರದ ಅಚ್ಚರಿ. ದುನಿಯಾ ವಿಜಯ್ ನಂಥ ಮಾಸ್ ಹೀರೋವನ್ನು ಕೂಡ ಮಧ್ಯಮ ವರ್ಗದ ಬದುಕಿನ ಸಂದೇಶ ಹೇಳುವ ಪಾತ್ರವಾಗಿಸುವಲ್ಲಿ ನಿರ್ದೇಶಕ ಪರಮ್ ಪ್ರಯತ್ನ ಗೆದ್ದಿದೆ. ಸೆಂಟಿಮೆಂಟ್ ದೃಶ್ಯಗಳಲ್ಲಿ ಪ್ರೇಕ್ಷಕರ ಗಂಟಲು ಉಬ್ಬಿದೆ. ಕೋಟಿ ಚಿತ್ರದಲ್ಲಿ ಏನೆಲ್ಲ ಇದೆ ಎನ್ನುವವರ ಹುಡುಕಾಟಕ್ಕೆ ಎಲ್ಲವೂ ಸಿಕ್ಕಿದೆ.