ಗ್ರಾಮೀಣ ಭಾಗದ ಕೇದಾರನಾಥ ಕುರಿ ಫಾರಂ****
ಮನುಷ್ಯನಿಗೆ ಆಸೆ ಬಂದರೆ ಆತನನ್ನು ಯಾವ ಮಟ್ಟಿಗೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ‘ಕೇದಾರನಾಥ ಕುರಿ ಫಾರಂ’ ಸಿನಿಮಾದಲ್ಲಿ ಹೇಳಲಾಗಿದೆ. ಗ್ರಾಮೀಣ ಭಾಗದಲ್ಲಿ ಮೋಜುಮಸ್ತಿ ಮಾಡುವ ಯುವಕರುಗಳಿಗೆ ಮಂಜ ಲೀಡರ್. ಆಕೆಯ ಅಪ್ಪ ಕುಡುಕ. ಮಗಳ ಬಾಂಧವ್ಯ ದಾರಿ ತಪ್ಪಿ ಅಮ್ಮ ಇದರ ನಡುವೆ ಸಾಗುತ್ತಾ ಹೋಗುತ್ತದೆ. ನಂತರ ಒಂದು ಕೊಲೆಯಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಮಾಡುವ ಉಪಾಯಗಳು. ಅಂತಿಮವಾಗಿ ಅಪರಾಧಿಗಳು ಕಾನೂನು ಅಡಿಯಲ್ಲಿ ಸಿಲುಕುತ್ತಾರಾ? ಹಳ್ಳಿಗಳಲ್ಲಿ ಜನಜೀವನ, ಹುಡುಗರ ಚೆಲ್ಲಾಟ ಎಲ್ಲವನ್ನು ಕಾಮಿಡಿ, ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ. ನಿರ್ದೇಶಕ ಶ್ರೀನಿವಾಸ್ ಸಾಗರ ಸನ್ನಿವೇಶಕ್ಕೆ ತಕ್ಕಂತೆ ದೃಶ್ಯಗಳನ್ನು ಅದ್ಬುತವಾಗಿ ರೂಪಿಸಿರುವುದು ತೆರೆ ಮೇಲೆ ಕಾಣಿಸುತ್ತದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೇನೂರು ಮನು ನಾಯಕ. ಶಿವಾನಿ ನಾಯಕಿ. ಇಬ್ಬರು ಗಮನ ಸೆಳೆಯುತ್ತಾರೆ. ಉಳಿದಂತೆ ಹರಿಣಿ, ಕರಿಸುಬ್ಬು, ಟೆನ್ನಿಸ್‌ಕೃಷ್ಣ, ಸುನಂದ, ಮುತ್ತುರಾಜ್ ಕಾಣಿಸಿಕೊಂಡಿದ್ದಾರೆ. ಸನ್ನಿಡಾನ್ ಅಬ್ರಾಹಿಂ ಸಂಗೀತ, ರಾಕೇಶ್‌ತಿಲಕ್ ಛಾಯಾಗ್ರಹಣ, ರಾಜೇಶ್‌ಸಾಲುಂಡಿ ಕಥೆ-ಸಂಭಾಷಣೆ ಇರಲಿದೆ. ಉದ್ಯಮಿ ಹೋರಾಟಗಾರ ಕೆ.ಎಂ.ನಟರಾಜ್ ಅವರು ಜೆ.ಕೆ.ಫಿಲಂಸ್ ಮೂಲಕ ನಿರ್ಮಾಣ ಹಾಗೂ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
****