ನಮ್ಮಗಳ ಸುತ್ತ ನಡೆಯುವ ರೋಚಕತೆಗಳು
ರುದ್ರ ಹೆಸರಿನ ಖಡಕ್ ಪೋಲೀಸ್ ಅಧಿಕಾರಿಯ ಪ್ರಾಮಾಣಿಕತೆ ಸೀಣಿಯರ್ ಆಫೀಸರ‍್ಸ್‌ಗಳಿಗೆ ಪೀಕಲಾಟವಾಗುತ್ತಿರುತ್ತದೆ. ಎಲ್ಲೇ ವರ್ಗ ಮಾಡಿದರೂ ಅಲ್ಲಿಯೂ ನಿಷ್ಠೆ ತೋರಿಸುತ್ತಾನೆ. ಈತನ ಹೆಗಲಿಗೆ ಅಪಹರಣ ಪ್ರಕರಣದ ಕೇಸು ಬರುತ್ತದೆ. ಅದರ ತನಿಖೆ ನಡೆಸುವಾಗ ಒಂದೊಂದೆ ರೋಚಕ, ರೋಮಾಂಚನ ಘಟನೆಗಳು ತೆರೆದುಕೊಳ್ಳುತ್ತದೆ. ನ್ಯೂಯಾರ್ಕ್ ಸಿಟಿಯಿಂದ ಮಿಯಾನ್‌ಗೆ ಹೊರಟಿದ್ದ ವಿಮಾನವೊಂದು ಮಿಸ್ ಆಗಿ ಸಣ್ಣದೊಂದು ಸಿಳಿವು ಸಿಕ್ಕಿರುವುದಿಲ್ಲ. ಮೂವತ್ತು ವರ್ಷಗಳ ನಂತರ ಅದೇ ವಿಮಾನ ವಾಪಸ್ ಬರುತ್ತದೆ. ಅದು ಹೇಗೆ? ಹಾಗೂ ಒಬ್ಬ ರಾಜ ಭೂಮಂಡಲವನ್ನೇ ಗೆಲ್ಲಬೇಕು ಎಂಬ ಆಸೆಯಿಂದ ತನ್ನ ಪಕ್ಕದ ದೇಶದ ಮೇಲೆ ಯುದ್ದಕ್ಕೆ ಹೋಗಿ ಲಕ್ಷಾಂತರ ಜನರನ್ನು ಕೊಂದು ಜಯ ಸಾಧಿಸಿದ ನಂತರ ರಣರಂಗಕ್ಕೆ ಹೋಗುತ್ತಾನೆ. ಅಲ್ಲಿ ಸಾಲು ಸಾಲು ಹೆಣಗಳು ಇರುತ್ತದೆ. ಸತ್ತಿದ್ದ ಸೈನಿಕನೊಬ್ಬನ ಮಾಂಸವನ್ನು ಮನುಷ್ಯನೊಬ್ಬ ತಿನ್ನುತ್ತಿರುತ್ತಾನೆ ಹೀಗೆ ಎರಡು ಉಪಕಥೆಗಳು ಸಾಗುತ್ತದೆ. ಹೀಗೆ ಎಲ್ಲಾ ಅಂಶಗಳನ್ನು ನೋಡುವ ಇಚ್ಚೆ ಇದ್ದಲ್ಲಿ ‘ರುದ್ರ ಗರುಡ ಪುರಾಣ’ ಸಿನಿಮಾ ವೀಕ್ಷಿಸಬಹುದು.
ಶೀರ್ಷಿಕೆ ಹೆಸರಿನಲ್ಲಿ ನಾಯಕ ರಿಷಿ ಪಾತ್ರದಲ್ಲಿ ಜೀವಿಸಿದ್ದಾರೆ ಎನ್ನಬಹುದು. ನಾಯಕಿ ಪ್ರಿಯಾಂಕ ಕುಮಾರ್ ಬೊಂಬೆಯಂತೆ ಚೆಂದ ಕಾಣಿಸುತ್ತಾರೆ. ಹಿರಿಯ ಪೋಲೀಸ್ ಅಧಿಕಾರಿಗಳಾಗಿ ಅವಿನಾಶ್, ಸಿದ್ಲಿಂಗು ಶ್ರೀಧರ್, ನಗಿಸಲು ಗಿರೀಶ್‌ಶಿವಣ್ಣ, ವಿನೋದ್‌ಆಳ್ವ, ಶಿವರಾಜ್.ಕೆ.ಆರ್.ಪೇಟೆ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ. ಕೆ.ಪಿ. ಅವರ ಸಂಗೀತ, ಸಂದೀಪ್‌ಕುಮಾರ್ ಛಾಯಾಗ್ರಹಣ, ರಘುನಿಡುವಳ್ಳಿ ಸಂಭಾಷಣೆ ಇವೆಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ನಂದೀಶ್ ನಿರ್ದೇಶನ ಮಾಡಿದ್ದು, ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಬಂಡವಾಳ ಹೂಡಿದ್ದಾರೆ.
****