ಚಿತ್ರ: ಕಪಟಿ
ನಿರ್ದೇಶನ: ರವಿಕಿರಣ್ ಮತ್ತು ಚೇತನ್.ಎಸ್.ಪಿ
ನಿರ್ಮಾಪಕ: ದಯಾಳ್ ಪದ್ಮನಾಬನ್
ತಾರಾಗಣ: ಸುಕೃತಾವಾಗ್ದೆಮ ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್, ಶಂಕರ್ನಾರಾಯಣ, ನಂದಗೋಪಾಲ್, ಅಜಿತ್ಕುಮಾರ್
ಸಂಗೀತ:
ಪ್ರಸ್ತುತ ತಂತ್ರಜ್ಘಾನದ ಮಾಯಾಜಾಲ ****
ಕಾಲ ಬದಲಾವಣೆ ಆಗುವಂತೆ ತಂತ್ರಜ್ಘಾನವು ಬೆಳೆಯುತ್ತಾ ಬಂದಿದೆ. ಇದರಿಂದ ಒಳ್ಳೆಯದು ಮತ್ತು ಕೆಟ್ಟದ್ದು ಆಗುತ್ತಿದೆ. ಇದು ಮಾನಸಿಕ ಆರೋಗ್ಯ ಅಸ್ವಸ್ಥತೆ ಹೊಂದಿರುವ ಜನರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚಿತ್ರದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.
ಸೆಸ್ಪೆನ್ಸ್ ಥ್ರಿಲ್ಲರ್ ಕತೆಯಲ್ಲಿ ಪ್ರಿಯಾ ಪ್ರಸಿದ್ದ ವಸ್ತ್ರವಿನ್ಯಾಸಕಿ. ಅಪ್ಪ ರಾಷ್ಟ್ರೀಯ ಮಟ್ಟದ ಮಾಜಿ ಕ್ರಿಕೆಟ್ ಆಟಗಾರ. ತಮ್ಮ ತಂಡಕ್ಕೆ ಆಯ್ಕೆಯಾಗಿ ಅಪಘಾತದಿಂದ ಪಾರ್ಶ್ವವಾಯುವಿಗೆ ತುತ್ತಾಗುತ್ತಾನೆ. ಮನೆಯಲ್ಲಿ ಸಂತೋಷವೇ ಮರೀಚಿಕೆಯಾಗುತ್ತದೆ. ಈ ಸಂದರ್ಭದಲ್ಲಿ ಸಣ್ಣ ಮಟ್ಟದ ಕಳ್ಳ ಚಕ್ರಿ ಹಾಗೂ ಅಮೇರಿಕಾ ವಾಪಸಿ ಸುಮನ್ ಮನೆಗೆ ಬಂದು ವೆಬ್ ಸೆಟಪ್ ಮಾಡುತ್ತಾರೆ. ಸುಮನ್ ಚಕ್ರಿಗೆ ಡಾರ್ಕ್ ವೆಬ್‌ನ ಕಾನ್ಸೆಪ್ಟ್, ಅದರಲ್ಲಿ ಇರುವ ಹಿಂಸಾತ್ಮಕ ವಿಷಯಗಳನ್ನು ತಿಳಿಸುತ್ತಾಳೆ. ಮುಂದೆ ಒಂದಕ್ಕಿಂತ ಒಂದು ಭಯಾನಕ ಎನ್ನುವುದು ಅರಿವಾಗುತ್ತದೆ. ಇದರಿಂದ ಪ್ರಿಯಾ ಮನೆಯಲ್ಲಿ ಕಷ್ಟಗಳು ಆವರಿಸಿಕೊಳ್ಳುತ್ತದೆ. ಕೊನೆಗೆ ಡಾರ್ಕ್ ವೆಬ್ ಆಟ ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದರ ಬಗ್ಗೆ ಒಂದು ಏಳೆಯ ಸಾರಾಂಶವಾಗಿದೆ..
ರವಿಕಿರಣ್ ಮತ್ತು ಚೇತನ್.ಎಸ್.ಪಿ ಜಂಟಿ ನಿರ್ದೇಶನದಲ್ಲಿ ಇಬ್ಬರ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಸುಕೃತಾ, ದೇವ್‌ದೇವಯ್ಯ ಹಾಗೂ ಸಾತ್ವಿಕ್‌ಕೃಷ್ಣ ತಮಗೆ ನೀಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಯಿಸಿದ್ದಾರೆ. ಒಟ್ಟಾರೆ ಸಿನಿಮಾವಯ ಪೈಸಾ ವಸೂಲ್ ಎನ್ನಬಹದು.
****