ಡಬಲ್ ಮೀನಿಂಗ್ ಇಲ್ಲದ ಸಿದ್ಲಿಂಗು-೨****
ನಿರ್ದೇಶಕ ವಿಜಯಪ್ರಸಾದ್ ಅವರ ‘ಸಿದ್ಲಿಂಗು-೨’ ಚಿತ್ರವು ಡಬ್ಬಲ್ ಮೀನಿಂಗ್ ಇಲ್ಲದೆ ಇರುವುದು ಖುಷಿ ಕೊಡುತ್ತದೆ. ಶುರುವಿನಿಂದ ಕೊನೆವರೆಗೂ ನಾಯಕ ಯೋಗಿ ಕತ್ತಿಗೆ ಬೆಲ್ಟ್ ಹಾಕಿಕೊಂಂಡು ‘ಸ್ವಾಮಿ ಪಾದಂ ದೈವ ಪಾದಂ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಗುನುಗಿಸುತ್ತಲೇ ಇರುತ್ತಾರೆ. ಇದರಿಂದ ಎರಡರ್ಥದ ಡೈಲಾಗ್‌ಗೆ ಅವಕಾಶ ಸಿಕ್ಕಿಲ್ಲ ಎಂದರೆ ತಪ್ಪಾಗಲಾರದರು. ಒಬ್ಬ ಸಾಮಾನ್ಯ ಹುಡುಗನ ಅಸಾಮಾನ್ಯ ಪಯಣದ ಕಥೆ ಎನ್ನಬಹುದು. ಮಾನವೀಯತಯೇ ಜೀವಾಳ. ಹೆಣ್ಣು ಮಕ್ಕಳನ್ನು ಭಕ್ತಿಗೆ ಕರೆದುಕೊಂಡು ಹೋಗುವ ಭಾವುಕ ಸನ್ನಿವೇಶಗಳು ಇರಲಿದೆ. ನಿರ್ದೇಶಕರ ಸ್ಟೈಲಿಶ್ ಡೈಲಾಗ್‌ಗಳು ಮಜಾ ಕೊಡುತ್ತದೆ.
ಮೊದಲ ಭಾಗದಲ್ಲಿ ಕಾರಿನ ಆಸೆಗೆ ಬಿದ್ದು ಏನೇನೋ ಸಮಸ್ಯೆ ಮಾಡಿಕೊಳ್ಳುತ್ತಾನೆ. ಆ ಚಿತ್ರದ ಕ್ಲೈಮಾಕ್ಸ್‌ನಿಂದ ಕಥೆಯು ಸಾಗುತ್ತದೆ. ಎಂದಿನಂತೆ ಎಮೋಶನ್ಸ್, ಕಾಮಡಿ, ಗಾಂಭೀರ‍್ಯ ಎಲ್ಲವು ಇರುತ್ತದೆ.
ಭಾಗ-೨ರಲ್ಲಿ ರಮ್ಯಾ ಜಾಗಕ್ಕೆ ಸೋನುಗೌಡ ಆಗಮಿಸಿದ್ದು, ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಂಜುನಾಥಹೆಗ್ಡೆ ಪೂರ್ಣ ಅಂಕ ಕೊಡಬಹುದು. ಇವರೊಂದಿಗೆ ಬಿ.ಸುರೇಶ್, ಸೀತಾಕೋಟೆ ಮುಂತಾದವರು ನಟಿಸಿದ್ದಾರೆ. ಆರು ವರ್ಷದ ಮಕ್ಕಳಿಂದ ಹಿಡಿದು ಅರವತ್ತು ವರ್ಷದವರು ಯಾವುದೇ ಮುಜುಗರ ಪಡದೆ ನೋಡಬಹುದು. ಅರಸುಅಂತಾರೆ ಸಾಹಿತ್ಯಕ್ಕೆ ಅನೂಪ್‌ಸೀಳನ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಹರಿ ಮತ್ತು ರಾಜುಶ್ರೀಗರ ಬಂಡವಾಳ ಹೂಡಿದ್ದಾರೆ.
****