Vishnu Priya.Reviews

Friday, February 21, 2025

91

 

ವಿಷ್ಣು ಪ್ರಿಯ: ಪ್ರಣಯಮಯ ದೃಶ್ಯಕಾವ್ಯ

 

ಚಿತ್ರ: ವಿಷ್ಣು ಪ್ರಿಯ

ನಿರ್ದೇಶನ: ವಿ ಕೆ ಪ್ರಕಾಶ್

ನಿರ್ಮಾಣ: ಕೆ ಮಂಜು

ತಾರಾಗಣ: ಶ್ರೇಯಸ್ ಮಂಜು, ಪ್ರಿಯಾ ವಾರ್ಯರ್ ಮೊದಲಾದವರು

 

ವಿಷ್ಣುವರ್ಧನ್ ಪ್ರಿಯರಿಗೆ ಹೇಳಿ ಮಾಡಿಸಿದಂಥ ನಾಯಕನ ಇಂಟ್ರಡಕ್ಷನ್. ಅದೇನು ಅನ್ನೋದನ್ನು ಥಿಯೇಟರ್ ನಲ್ಲಿ ನೋಡಿದರೇನೇ ಚಂದ. ರವಿಚಂದ್ರನ್ ಪ್ರಿಯರಿಗೆ ಹೇಳಿ ಮಾಡಿಸಿದಂಥ ಪ್ರೇಮಕತೆ, ಹಾಡುಗಳು. ಇವೆರಡರ ಮಧ್ಯೆ ತೊಂಬತ್ತರ ದಶಕದ ಯುವ ಪ್ರೇಮಿಗಳಾಗುವ ನಾಯಕ ಮತ್ತು ನಾಯಕಿ.

 

ನಾಯಕನ ಹೆಸರು ವಿಷ್ಣು. ಸ್ನೇಹಿತ ಬಾಲಾಜಿಯ ಏಕಮುಖ ಪ್ರಣಯವನ್ನು ಹೋಗಿ ಆತನ ಪ್ರೇಯಸಿಗೆ ಹೇಳುತ್ತಾನೆ. ಆಕೆ ನೀನೇ ನನ್ನ ಪ್ರೇಮಿ ಅಂತಾಳೆ. ಅಲ್ಲಿಗೆ ಪ್ರೀತಿಗೊಬ್ಬಳು ಹುಡುಗಿ ಮತ್ತು ದ್ವೇಷಕ್ಕೆ ಒಬ್ಬ ಹುಡುಗನ ಸೃಷ್ಟಿಯಾಗುತ್ತದೆ. ಆದರೆಒ ಬಹುತೇಕ ಎಲ್ಲವೂ ಹಸಿರಲ್ಲೇ  ಚಿಗುರಿ ಮೆರೆವ ಪ್ರೇಮ ದೃಶ್ಯಗಳೇ. ಈ ಅಲೆದಾಟವೇ ಇವರಿಬ್ಬರ ಪ್ರೇಮಕ್ಕೆ ಹೊಸದೊಂದು ತಿರುವು ನೀಡುತ್ತದೆ. ಹುಡುಗ ಪೊಲೀಸ್ ಠಾಣೆ ಮೆಟ್ಟಿಲೇರುವ ಘಟನೆಯೊಂದಿಗೆ ಹುಡುಗಿ ಮನೆಯಲ್ಲಿ ಈತನೆಡೆಗೆ ಬದ್ಧ ವೈರ ಶುರುವಾಗುತ್ತದೆ. ವಿಷ್ಣುವಿನ ತಾಯಿಗೂ ಹುಡುಗಿ ಮತ್ತು ಮನೆಯವರೆಂದರೆ ದ್ವೇಷ ಹುಟ್ಟುತ್ತದೆ. ಮತ್ತೆ ಈ ಜೋಡಿ ಒಂದಾಗುತ್ತದೆಯೇ ಇಲ್ಲವೇ ಎನ್ನುವುದೇ ಈ ಸಿನಿಮಾದ ಕ್ಲೈಮ್ಯಾಕ್ಸ್.

ವಿಷ್ಣುವಾಗಿ ಶ್ರೇಯಸ್ ತೊಂಬತ್ತರ ದಶಕದ ಪಾಗಲ್ ಪ್ರೇಮಿಯ ಅಪರಾವತಾರ. ಸಾಹಸಮಯಿ ಹೊಡೆದಾಟದ ದೃಶ್ಯಗಳಲ್ಲಿ ಭಾರೀ ಭರವಸೆ ಮೂಡಿಸುತ್ತಾರೆ. ವಿಷ್ಣು ಜೋಡಿಯಾಗಿ ಮಲಯಾಳಂ‌ ನಟಿ ಪ್ರಿಯಾ ವಾರ್ಯರ್ ಕನ್ನಡತಿಯಂತೇ ಭಾವಪೂರ್ಣ ನಟನೆ‌ ನೀಡಿದ್ದಾರೆ. ಈ ಕಣ್ಸನ್ನೆ ಬೆಡಗಿಯ ಕಣ್ಣೋಟ ಒಂದು ತೂಕವಾದರೆ, ನಗು, ಹಾವ ಭಾವ ಎಲ್ಲವೂ ಆಕರ್ಷಕ.

 

ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್, ತಾಯಿಯಾಗಿ ಅಶ್ವಿನಿಗೌಡ ನಾಯಕಿಯ ಪೋಷಕರಾಗಿ ಸುಚೇಂದ್ರ ಪ್ರಸಾದ್ ಮತ್ತು ಚಿತ್ಕಳಾ ಬಿರಾದಾರ್ ಹೀಗೆ ಗಮನಾರ್ಹ ತಾರಾಗಣವಿದೆ. ಗೋಪಿ ಸುಂದರ ಸಂಗೀತದಲ್ಲಿ ವಿ ನಾಗೇಂದ್ರ ಪ್ರಸಾದ್ ರಚನೆ ಪ್ರಣಯ ಕಾವ್ಯವಾಗಿದೆ.

Copyright@2018 Chitralahari | All Rights Reserved. Photo Journalist K.S. Mokshendra,