ಗರ್ಭಿಣಿ ಗಂಡಸಿನ ಕಥನ
ನಿರ್ಮಾಪಕರು: ಹರೀಶ್.ಎನ್.ಗೌಡ
ನಿರ್ದೇಶನ: ರಘುಭಟ್
ತಾರಾಗಣ: ರಘುಭಟ್, ಕಾವ್ಯಶೆಟ್ಟಿ, ಹರಿಣಿಶ್ರೀಕಾಂತ್, ಪದ್ಮಿನಿನರಸಿಂಹನ್, ಸುಜಯ್‌ಶಾಸ್ತ್ರೀ, ಶಿಲ್ಪಾಶೈಲೇಶ್, ಪ್ರಜ್ವಲ್ ಮುಂತಾದವರು
ಸಂಗೀತ: ಅಶ್ವಿನ್ ಹೇಮಂತ್
ವಿಶ್ವವನ್ನೇ ತಲ್ಲಣಗೊಳಿಸಿದ ಸುದ್ದಿ ಅಂದರೆ ಗಂಡಸು ಗರ್ಭಿಣಿಯಾಗುವುದು. ಈಗಾಗಲೇ ಜಗತ್ತಿನ ಎಲ್ಲಾ ದೇಶವ ಆಯ್ದ ಭಾಗಗಳಲ್ಲಿ ಗಂಡಸರು ಗರ್ಭ ಧರಿಸಿದ ಬಗ್ಗೆ ಸುದ್ದಿಗಳು ಪ್ರಕಟವಾಗಿದೆ. ಅಂತಹುದೇ ಅಂಶಗಳನ್ನು ಒಳಗೊಂಡ ಚಿತ್ರ ‘ನಿಮಗೊಂದು ಸಿಹಿ ಸುದ್ದಿ’.
ಯುವಕನೊಬ್ಬ ಗರ್ಭ ಧರಿಸಿದಾಗ ಏನೇನು ಆಗುತ್ತದೆ? ಅದೆಲ್ಲಾವನ್ನು ಹೇಗೆ ಎದುರಿಸುತ್ತಾನೆ ಎಂಬಂತಹ ಅಂಶಗಳನ್ನು ವಿಭಿನ್ನ ಪರಿಕಲ್ಪನೆ ಮೂಲಕ ಹಾಸ್ಯದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ನೋಡುಗರಿಗೆ ಸಂಪೂರ್ಣ ರಸದೌತಣ ನೀಡುತ್ತದೆ. ಅದರಲ್ಲೂ ಗಂಡಸು ಹೊಟ್ಟೆ ಮೇಲೆ ಕೈ ಇಟ್ಟುಕೊಂಡು ನಡೆಯುವ ದೃಶ್ಯಗಳು ಕಾಮಿಡಿ ತರಿಸುತ್ತದೆ. ಅಷ್ಟಲ್ಲೂ ಆತ ಗರ್ಭ ಧರಿಸಲು ಕಾರಣವೇನು? ಇವೆಲ್ಲಾವನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ರಘುಭಟ್ ಆಕ್ಷನ್ ಕಟ್ ಹೇಳುವ ಜತೆಗೆ ನಾಯಕನ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಾವ್ಯಶೆಟ್ಟಿ ತೆರೆ ಮೇಲೆ ಚೆಂದ ಕಾಣಿಸುತ್ತಾರೆ. ಉಳಿದವರೆಲ್ಲೂ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ವಿನೂತನ ಕಥಾಹಂದರ ಇರುವ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
****