ಚಿತ್ರ: ವೀರಚಂದ್ರಹಾಸ****
ನಿರ್ದೇಶನ: ರವಿಬಸ್ರೂರು
ನಿರ್ಮಾಣ: ಎನ್.ಎಸ್.ರಾಜಕುಮಾರ್
ಕಲಾವಿದರು: ಶಿವರಾಜ್ಕುಮಾರ್, ಗರುಡಾರಾಮ್, ಚಂದನ್ಶೆಟ್ಟಿ, ಪುನೀತ್ರುದ್ರನಾಗ್, ಶಿಥಿಲ್ಶೆಟ್ಟಿ, ಪ್ರಸನ್ನಶೆಟ್ಟಿಗಾರ್, ನಾಗಶ್ರೀ ಮುಂತಾದವರು
ಚಿತ್ರರೂಪದಲ್ಲಿ ಯಕ್ಷವೈಭವ
ಪ್ಯಾನ್ ಸಂಗೀತ ಮಾಂತ್ರಿಕ ರವಿಬಸ್ರೂರು ನಿರ್ದೇಶನದ ಚಿತ್ರಗಳು ವಿನೂತನವಾಗಿರುತ್ತದೆ. ಆ ಸಾಲಿಗೆ ನಿನ್ನೆಯಷ್ಟೇ ತೆರೆಕಂಡ ‘ವೀರಚಂದ್ರಹಾಸ’ ಸೇರ್ಪಡೆಯಾಗುತ್ತದೆ. ಈ ಬಾರಿ ಯಕ್ಷಗಾನ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ಕರಾವಳಿ ಅಂದರೆ ತಕ್ಷಣ ಕಣ್ಣಮುಂದೆ ಬರುವುದು ಯಕ್ಷಗಾನ. ಹಲವು ಸಿನಿಮಾಗಳಲ್ಲಿ ಇದನ್ನು ತೋರಿಸಿದ್ದರೂ, ಇದರಲ್ಲಿ ಜೈಮಿನಿ ಭಾರತದ ಒಂದು ಭಾಗವಾದ ವೀರಚಂದ್ರಹಾಸ ರಾಜನಾಗುವ ಕಥೆಯನ್ನು ಹೇಳ ಹೊರಟಿದ್ದಾರೆ.
ಚಂದ್ರಹಾಸ ಮತ್ತು ದುಷ್ಟಬುದ್ದಿಯ ನಡುವೆ ನಡೆಯುವ ಹೋರಾಟ ಹೇಗಿರುತ್ತದೆ? ಆತ ರಾಜ ಹೇಗಾಗುತ್ತಾನೆ? ಎಂಬುದರ ಸುತ್ತ ಚಿತ್ರವು ಸಾಗುತ್ತದೆ. ಒಂದು ಸನ್ನಿವೇಶದಲ್ಲಿ ವೀರಸಿಂಹನಿಗೆ ಪರಂಪರೆಯ ಖಡ್ಗ ನೀಡುತ್ತಾ, ನೀನು ಜನಪರನಾಗಿರಬೇಕು ಎಂದು ಆದೇಶಿಸುತ್ತಾರೆ. ಇದು ಸಿನಿಮಾದಲ್ಲಿ ಬರುವ ಮುಖ್ಯ ಅಂಶ ಎನ್ನಬಹುದು. ಗೂತ್ತು ಗುರಿ ಇಲ್ಲದ ಒರ್ವ ಬಾಲಕ. ಆತನ ಕತ್ತಿನಲ್ಲಿದ್ದ ಸಾಲಿಗ್ರಾಮ ಗುರುತಿಸುವುದು ಒಬ್ಬ ಬ್ರಾಹ್ಮಣ. ಮುಂದಿನ ಬದುಕು ಅವನಿಂದ ಹೇಗೆಲ್ಲಾ ನಡೆದು ಹೋಗುತ್ತದೆ ಎಂಬುದು ಆರಂಭಿಕದಲ್ಲಿ ಹೇಳುತ್ತಾ ಹೋಗುತ್ತದೆ. ಎಐ ಮೂಲಕ ಸೃಷ್ಟಿಸಲಾದ ಯಕ್ಷಗಾನ ವೇಷದಲ್ಲಿ ಪುನೀತ್‌ರಾಜ್‌ಕುಮಾರ್ ದೃಶ್ಯ ಮತ್ತು ಸಿಂಗನಲ್ಲೂರು ಸಂಸ್ಥಾನದ ರಾಜನಾಗಿ ರಾಜ್‌ಕುಮಾರ್ ಅವರನ್ನು ತೋರಿಸಿರುವುದು ಸಿನಿಮಾಕ್ಕೆ ಕಳಸ ಇಟ್ಟಂತೆ ಆಗಿದೆ. ಕ್ಲೈಮಾಕ್ಸ್‌ದಲ್ಲಿ ಭಾಗ-೨ ಬರಲಿದೆ ಎಂಬುದಾಗಿ ಸೂಕ್ಷವಾಗಿ ಹೇಳಿದ್ದಾರೆ.
ಶಿವಪುಟ್ಟಸ್ವಾಮಿಯಾಗಿ ಶಿವರಾಜ್‌ಕುಮಾರ್ ಪುಟ್ಟ ಪಾತ್ರದಲ್ಲಿ ಮಿಂಚಿದ್ದಾರೆ. ಉಳಿದಂತೆ ಗರುಡಾರಾಮ್, ಚಂದನ್ಶೆಟ್ಟಿ, ಪುನೀತ್ರುದ್ರನಾಗ್, ಶಿಥಿಲ್ಶೆಟ್ಟಿ, ಪ್ರಸನ್ನಶೆಟ್ಟಿಗಾರ್, ನಾಗಶ್ರೀ ಮುಂತಾದವರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ರವಿಬಸ್ರೂರು ಸಂಗೀತ ಹೈಲೈಟ್ ಆಗಿದೆ. ಜತೆಗೆ ಕಿರಣ್‌ಕುಮಾರ್.ಆರ್ ಛಾಯಾಗ್ರಹಣ, ಪ್ರಭು ಬಡಿಗೇರ್ ಕಲಾನಿರ್ದೇಶನ ಇಲ್ಲಿ ಉಲ್ಲೇಖಿಸಬಹುದು.
****