ಚಿತ್ರ: ಅಮರ ಪ್ರೇಮಿ ಅರುಣ್****
ನಿರ್ಮಾಣ: ಒಲವು ಸಿನಿಮಾಸ್
ನಿರ್ದೇಶನ: ಪ್ರವೀಣ್ಕುಮಾರ್.ಬಿ.ಜೆ
ತಾರಾಗಣ: ಹರಿಶರ್ವಾ, ದೀಪಿಕಾಆರಾಧ್ಯ, ಧರ್ಮಣ್ಣಕಡೂರು, ಬಲರಾಜವಾಡಿ, ಅರ್ಚನಾಕೊಟ್ಟಿಗೆ ಮುಂತಾದವರು
ಸಂಗೀತ: ಕಿರಣ್ ರವೀಂದ್ರನಾಥ್
ಅರುಣ್ನ ಖೇದದ ಪ್ರೇಮ ಕಥೆ
ಅಲ್ಲೋಂದು ಹುಡುಗರ ತಂಡ. ಪ್ರೀತಿಸಿ ಓಡಿ ಹೋಗುವವರಿಗೆ ಇವರುಗಳ ಸಹಾಯ ಮಾಡುತ್ತಿರುತ್ತಾರೆ. ಇದರ ನಾಯರ ಅರುಣ್. ಪ್ರೇಮಿಗಳಿಗೆ ಹೆಲ್ಪ್ ಮಾಡುವ ಈತನದ್ದೇ ಒಂದು ದುರಂತ ಪ್ರೇಮ ಕಥೆಯನ್ನು ‘ಅಮರ ಪ್ರೇಮಿ ಅರುಣ್’ ಚಿತ್ರದಲ್ಲಿ ಹೇಳುತ್ತಾ ಹೋಗುತ್ತದೆ.
ಶಾಲೆಯಲ್ಲಿದ್ದಾಗಲೇ ಪ್ರೀತಿಯ ಬಲೆಗೆ ಬೀಳುತ್ತಾನೆ ಅರುಣ. ಮೂರನೇ ತರಗತಿಯಲ್ಲಿಯೇ ಸಹಪಾಠಿ ಕಾವ್ಯಾ ಜೊತೆ ಆಕರ್ಷಣೆ ಬಂದಿರುತ್ತದೆ. ಅಪ್ಪ ಟ್ತಾನ್ಸ್‌ಫರ್ ಆಗಿದ್ದರಿಂದ ಊರು ಬಿಟ್ಟಾಗ ಮುಂದೆ ಅವಳು ಸಿಗುವುದೇ ಇಲ್ಲ. ಇವಿಷ್ಟು ಫ್ಲಾಷ್ ಬ್ಯಾಕ್‌ದಲ್ಲಿ ಬರುತ್ತದೆ. ವಯಸ್ಸಿಗೆ ಬಂದಾಗ ಮನೆಯಲ್ಲಿ ಮದುವೆ ಮಾಡಿಕೊಳ್ಳಲು ಒತ್ತಡ ಬರುತ್ತದೆ. ಆದರೆ ನನಗೆ ಕಾವ್ಯ ಸಿಗುತ್ತಾಳೆಂಬ ಭರವಸೆಯಿಂದ ಅವಳನ್ನು ಹುಡುಕುತ್ತಲೇ ಇರುತ್ತಾನೆ. ಆಕೆ ಸಿಗುತ್ತಾಳಾ? ಈತನ ಬದುಕು ಎಲ್ಲಿಗೆ ಬರುತ್ತದೆ. ಇದಕ್ಕೆಲ್ಲಾ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ.
ಬಳ್ಳಾರಿ ಭಾಗದ ಸೊಗಡಿನ ಕಥೆಯನ್ನು ನಿರ್ದೇಶಕ ಪ್ರವೀನ್‌ಕುಮಾರ್.ಬಿ.ಜೆ ಚೆನ್ನಾಗಿ ತೋರಿಸಿದ್ದಾರೆ. ಹರಿಶರ್ವಾ ನಾಯಕನಾಗಿ ಗಮನ ಸೆಳೆಯುತ್ತಾರೆ. ನಾಯಕಿ ದೀಪಿಕಾ ಆರಾಧ್ಯ ತೆರೆ ಮೇಲೆ ಚೆಂದ ಕಾಣಿಸುತ್ತಾರೆ. ಅಪ್ಪನಾಗಿ ಬಲರಾಜವಾಡಿ, ಗೆಳೆಯನಾಗಿ ಧರ್ಮಣ್ಣಕಡೂರು. ಉಳಿದಂತೆ ಕೃತಿಭಟ್, ಅರ್ಚನಾಕೊಟ್ಟಿಗೆ, ಮಹೇಶ್‌ಬಂಗ್ ಮುಂತಾದವರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ಒಟ್ಟಾರೆ ಸಿನಿಮಾ ಒಮ್ಮೆ ನೋಡಬಲ್ ಆಗಿದೆ.
****