Suthradaari.Reviews

Friday, May 09, 2025

88

 

ಗೆಲುವಿನ ಸೂತ್ರದೊಂದಿಗೆ ಬಂದ ಸೂತ್ರಧಾರಿ

 

ಚಿತ್ರ: ಸೂತ್ರಧಾರಿ*****

ನಿರ್ದೇಶನ: ಕಿರಣ್ ಕುಮಾರ್

ನಿರ್ಮಾಣ: ನವರಸನ್

ತಾರಾಗಣ: ಚಂದನ್ ಶೆಟ್ಟಿ, ಅಪೂರ್ವ ಮೊದಲಾದವರು.

 

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಎಂಟ್ರಿ ನೀಡಿರುವ ಚಿತ್ರ ಸೂತ್ರಧಾರಿ.

 

 

ಮೊದಲ ಚಿತ್ರದಲ್ಲೇ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಚಂದನ್ ಶೆಟ್ಟಿ ಟ್ರೆಂಡಿಂಗ್ ಸ್ಟಾರ್ ಬಿರುದಿನೊಂದಿಗೆ ಕಾಣಿಸಿದ್ದಾರೆ. ಚಿತ್ರದಲ್ಲಿ ಅವರ ಹೆಸರು ವಿಜಯ್.

 

ಅರೋಪಿಗಳನ್ನು ಎನ್ ಕೌಂಟರ್ ಮಾಡಿ ಪದೇಪದೆ ಸಸ್ಪೆಂಡ್ ಆಗುವ ಪೊಲೀಸ್ ಅಧಿಕಾರಿ ವಿಜಯ್. ಆದರೆ ನಗರದಲ್ಲೊಂದು ಹೊಸ ಮಾದರಿಯ ಸರಣಿ ಮರ್ಡರ್ ಕೇಸ್ ಕಾಣಿಸಿಕೊಂಡಾಗ ಮತ್ತೆ  ವಿಜಯ್ ನನ್ನೇ ಡ್ಯೂಟಿಗೆ ಕರೆಸಲಾಗುತ್ತದೆ. ವಿಜಯ್ ಮೇಲ್ನೋಟಕ್ಕೆ ಹುಡುಗಿಯರನ್ನು ಕಂಡೊಡನೆ ಮೈಮರೆಯುವ ಯುವಕನಂತೆ ಕಾಣಿಸುತ್ತಾನೆ. ಆದರೆ ಒಮ್ಮೆ ಡ್ಯೂಟಿಗೆ ಎಂಟ್ರಿ ಕೊಟ್ಟ ಬಳಿಕ

ಸಂಪೂರ್ಣವಾಗಿ ತನಿಖಾ‌ನಿರತನಾಗುತ್ತಾನೆ. ಆದರೆ ಆಳಕ್ಕಿಳಿದಷ್ಟು ಕೂಡ ಸರಣಿ ಸಾವುಗಳು ಕಗ್ಗಂಟಾಗುತ್ತಾ ಹೋಗುತ್ತವೆ.

ಚಿತ್ರದಲ್ಲಿ ವಿಜಯ್ ಪಾತ್ರಕ್ಕೆ ಚಂದನ್ ಶೆಟ್ಟಿ ಜೀವ ತುಂಬಿದ್ದಾರೆ. ಚಂದನ್ ನಟನೆಯನ್ನು ನೋಡುವಾಗ ಇದು  ಚೊಚ್ಚಲ ನಾಯಕನ ಚಿತ್ರ ಎಂದು ಅನಿಸುವುದಿಲ್ಲ. ಹಾಡುಗಳು ಕೂಡ ಅಷ್ಟೇ ತಮ್ಮ ಎಂದಿನ ಆಲ್ಬಂ ಹಾಡುಗಳ ಜೋಶ್ ನಲ್ಲೇ ಕಾಣಿಸಿದ್ದಾರೆ. ತನಿಖೆಯ ಮಧ್ಯೆಯೇ ಪರಿಚಯವಾಗುವ ಗೆಳತಿಯಾಗಿ ಅಪೂರ್ವ ಅಭಿನಯಿಸಿದ್ದಾರೆ. ಅಪೂರ್ವ ಗ್ಲಾಮರ್ ಜತೆಯಲ್ಲೇ ನಟನೆಗೂ ಪ್ರಾಧಾನ್ಯತೆ ಇರುವ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂಜನಾ ಆನಂದ್ ನಟನೆಯೂ ನೆನಪಲ್ಲಿ ಉಳಿಯುತ್ತದೆ.

 

ಪೋಷಕ ಪಾತ್ರಗಳಲ್ಲಿ ತಬಲಾ ನಾಣಿ ಒಂದೇ ದೃಶ್ಯದಲ್ಲಿ ಬರುವ ಚಿತ್ರದ ಸಂಭಾಷಣೆಕಾರ ಕಿನ್ನಾಲ್ ರಾಜ್ ನಗು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಒಂದಷ್ಟು ಹೊಸಬರಿಂದಲು ಕೂಡ ಅಭಿನಯ ತೆಗೆಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ವಿಶೇಷ ಪಾತ್ರದಲ್ಲಿ ನಟಿಸಿರುವ ನವರಸನ್ ಕುತೂಹಲಕಾರಿ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಗೆದ್ದಿದ್ದಾರೆ.*****

 

Copyright@2018 Chitralahari | All Rights Reserved. Photo Journalist K.S. Mokshendra,